ಧೋನಿ ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಡುವಿನ ಹಳೆಯ ಸಂಬಂಧದ ಗಾಸಿಪ್. 2007ರಲ್ಲಿ ಧೋನಿ ಟಿ20 ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ಇವರಿಬ್ಬರ ನಡುವೆ ಒಂದು ಸಂಬಂಧ ಇತ್ತೆಂಬ ಗಾಳಿಸುದ್ದಿ ಹಬ್ಬಿತ್ತು. ಸ್ಟೇಡಿಯಂನಲ್ಲಿ ಧೋನಿ ದೀಪಿಕಾಗೆ ಸಿಗ್ನಲ್ ಕೊಡುವ ಹಳೆಯ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ ಜಗತ್ತು ಕಂಡ ದಿಗ್ಗಜ ಕ್ಯಾಪ್ಟನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕ ಎನ್ನುವ ಹೆಗ್ಗಳಿಕೆ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದೆ. ಇನ್ನು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿ 5 ವರ್ಷಗಳೇ ಕಳೆಯುತ್ತಾ ಬಂದಿವೆ. ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ, ಕ್ರಿಕೆಟ್ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಅವರ ಹೆಸರು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಜತೆ ಥಳುಕು ಹಾಕಿಕೊಂಡಿತ್ತು. ಇದೀಗ ಧೋನಿ ಡಿಪ್ಪಿಗೆ ಸ್ಟೇಡಿಯಂನಲ್ಲೇ ಸಿಗ್ನಲ್ ಕೊಡುತ್ತಿರುವ ಹಳೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ಇದು ನಡೆದದ್ದು 2007ನೇ ಇಸವಿ ಸಂದರ್ಭದಲ್ಲಿ. ಯುವ ಆಟಗಾರರನ್ನು ಕಟ್ಟಿಕೊಂಡ ಮಹೇಂದ್ರ ಸಿಂಗ್ ಧೋನಿ, ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಇನ್ನು ಅದೇ ಸಂದರ್ಭದಲ್ಲಿ ಶಾರುಕ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಓಂ ಶಾಂತಿ ಓಂ ಬಾಲಿವುಡ್ ಸಿನಿಮಾ ತೆರೆ ಕಂಡಿತ್ತು. ಕ್ರಿಕೆಟ್ ಹಾಗೂ ಸಿನಿಮಾ ಸೆಲಿಬ್ರಿಟಿಗಳ ನಡುವಿನ ಸಂಬಂಧ ಗುಟ್ಟಾಗಿಯೇನೂ ಉಳಿದಿಲ್ಲ. ಈ ಹಿಂದೆಯೂ ಸಾಕಷ್ಟು ಬಾಲಿವುಡ್ ನಟಿಯರನ್ನು ಕ್ರಿಕೆಟಿಗರು ಮದುವೆಯಾಗಿದ್ದಾರೆ. ಇದಷ್ಟೇ ಅಲ್ಲದೇ ಹಲವು ನಟಿಯರ ಜತೆಗೆ ಕ್ರಿಕೆಟಿಗರು ಡೇಟಿಂಗ್ ನಡೆಸುವ ಗಾಳಿ ಸುದ್ದಿ ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಅದಕ್ಕೆ ಮಹೇಂದ್ರ ಸಿಂಗ್ ಧೋನಿ ಹಾಗೂ ದೀಪಿಕಾ ಪಡುಕೋಣೆ ಕೂಡಾ ಹೊರತಾಗಿಲ್ಲ.
ಕನ್ನಡದಲ್ಲಿ ನಟಿಸಿ ಆ ಬಳಿಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದ ದೀಪಿಕಾ ಪಡುಕೋಣೆ ತಮ್ಮ ನಟನೆ ಹಾಗೂ ಸೌದರ್ಯದ ಮೂಲಕ ಮನೆಮಾತಾಗಿದ್ದರು. ಇನ್ನೊಂದು ಕಡೆ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಭಾರತ ತಂಡಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ಧೋನಿ ಮೇಲೆ ಕೂಡಾ ಎಲ್ಲರ ಚಿತ್ತವಿತ್ತು. ಟೀಂ ಇಂಡಿಯಾ ಮ್ಯಾಚ್ ನೋಡಲು ಬಂದಿದ್ದ ದೀಪಿಕಾ ಪಡುಕೋಣೆಗೆ ಧೋನಿ ಸ್ಟೇಡಿಯಂನಿಂದಲೇ ಕಣ್ಣಿನಲ್ಲೇ ಸಿಗ್ನಲ್ ಕೊಟ್ಟಿದ್ದರು. ಹಲವಾರು ಸಂದರ್ಭಗಳಲ್ಲಿ ಧೋನಿಗಾಗಿ ದೀಪಿಕಾ ಪಡುಕೋಣೆ ಸ್ಟೇಡಿಯಂಗೆ ಬಂದು ಚಿಯರ್ ಅಪ್ ಕೂಡಾ ಮಾಡುತ್ತಿದ್ದರು. ಇನ್ನು ಒಮ್ಮೆ ಫ್ಯಾಷನ್ ಷೋನಲ್ಲಿ ಡಿಪ್ಪಿ ಜತೆ ಧೋನಿ ರ್ಯಾಂಪ್ ವಾಕ್ ಕೂಡಾ ಮಾಡಿದ್ದರು. ಈ ಹಳೆ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೀಗಿದ್ದೂ ಧೋನಿ ಹಾಗೂ ದೀಪಿಕಾ ಪಡುಕೋಣೆಯ ಪ್ರೇಮಕಹಾನೆ ಕೇವಲ ಸುದ್ದಿಯಲ್ಲಿಯೇ ಅಂತ್ಯವಾಯಿತು. ಮಹೇಂದ್ರ ಸಿಂಗ್ ಧೋನಿ, 2010ರಲ್ಲಿ ಸಾಕ್ಷಿಯವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಮೂಲಕ ದೀಪಿಕಾ ಪಡುಕೋಣೆ ಹಾಗೂ ಧೋನಿ ನಡುವೆ ಲವ್ ಗಾಸಿಪ್‌ಗೆ ಬ್ರೇಕ್ ಬಿದ್ದಿತು. ಧೋನಿ ಹಾಗೂ ಸಾಕ್ಷಿ ದಂಪತಿಗೆ ಝಿವಾ ಎನ್ನುವ ಮುದ್ದಾದ ಮಗಳು ಇದ್ದಾಳೆ. ಇನ್ನು ನಟಿ ದೀಪಿಕಾ ಪಡುಕೋಣೆ 2018ರಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಬಳಿಕ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಧೋನಿಯನ್ನು ಅನ್‌ಕ್ಯಾಪ್ಡ್ ಆಟಗಾರರನ್ನಾಗಿ ರೀಟೈನ್ ಮಾಡಿಕೊಂಡಿತ್ತು. ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಧೋನಿ ಆಡುತ್ತಾರೆಯೇ ಅಥವಾ ಇಲ್ಲವೇ ಎನ್ನುವುದರ ಬಗ್ಗೆ ಯಾವುದೇ ಕ್ಲಾರಿಟಿ ಸಿಕ್ಕಿಲ್ಲ. ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ನೀರಸ ಪ್ರದರ್ಶನ ತೋರುವ ಮೂಲಕ ಮೊದಲ ತಂಡವಾಗಿ ಲೀಗ್ ಹಂತದಲ್ಲೇ ಹೊರಬಿದ್ದಿತ್ತು.