ಪದವೀಧರರಿಗೆ ಸರ್ಕಾರಿ ಕೆಲಸ ಮಾಡುವ ಅವಕಾಶ ಸಿಕ್ತಿದೆ. ಸಿಬ್ಬಂದಿ ನೇಮಕಾತಿ ಆಯೋಗ 14 ಸಾವಿರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಸಂಬಳ, ಅರ್ಜಿ ಸಲ್ಲಿಕೆ ವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ.

ಸರ್ಕಾರಿ ಕೆಲ್ಸ ಪಡೆಯಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ಸಿಬ್ಬಂದಿ ನೇಮಕಾತಿ ಆಯೋಗ, ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಶುರುವಾಗಿದ್ದು, ಜುಲೈ 4ರವರೆಗೆ ನಿಮಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಎಷ್ಟು ಹುದ್ದೆಗಳಿಗೆ ಅರ್ಜಿ ಆಹ್ವಾನ? : ಸಿಬ್ಬಂದಿ ಆಯ್ಕೆ ಆಯೋಗ 14,582 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅಧಿಕೃತ ಅಧಿಸೂಚನೆಯ ಬಿಡುಗಡೆಯೊಂದಿಗೆ SSC CGL 2025 ಅರ್ಜಿ ಸಲ್ಲಿಸುವ ಆನ್ಲೈನ್ ಲಿಂಕ್ ಈಗಾಗಲೇ ಸಕ್ರಿಯವಾಗಿದೆ. SSC CGL 2025 ಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 4, 2025. ಎಸ್ ಎಸ್ ಸಿ ಸಿಜಿಎಲ್ 2025 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ ಜುಲೈ 5, 2025. SSC CGL ಆನ್ಲೈನ್ ಅರ್ಜಿ ತಿದ್ದುಪಡಿ ಜುಲೈ 9 ರಿಂದ 11, 2025 ರವರೆಗೆ ಲಭ್ಯವಿರುತ್ತದೆ. ಆಯೋಗವು SSC CGL 2025 ಶ್ರೇಣಿ 1 ಪರೀಕ್ಷೆಯನ್ನು ಆಗಸ್ಟ್ 13 ರಿಂದ 30, 2025 ರವರೆಗೆ ನಡೆಸಲಿದೆ.

ವಿದ್ಯಾರ್ಹತೆ ಮತ್ತು ವಯೋಮಿತಿ : ಯಾವುದೆ ಡಿಗ್ರಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಜನರಲ್ ಅಭ್ಯರ್ಥಿಗಳ ವಯೋಮಿತಿ 18 -27 ಮತ್ತು 18 – 30 ವರ್ಷದೊಳಗಿರಬೇಕು. ಒಬಿಸಿ ಅಭ್ಯರ್ಥಿಗಳ ವಯೋಮಿತಿ 18 -30 ಮತ್ತು 18 -33 ವರ್ಷಗಳೊಳಗಿರಬೇಕು. ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ವಯಸ್ಸಿನಲ್ಲಿ ರಿಯಾಯಿತಿ ನೀಡಲಾಗಿದೆ. 18 ರಿಂದ 32 ವರ್ಷ ಹಾಗೂ 18 – 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಿಕಲಚೇತನ ಅಭ್ಯರ್ಥಿಗಳ ವಯಸ್ಸಿನ ಮಿತಿ 18 -37 ಮತ್ತು 18 -40 ವರ್ಷವಾಗಿದೆ.

ಅರ್ಜಿ ಶುಲ್ಕ : ಸಾಮಾನ್ಯ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 ರೂಪಾಯಿ ಪಾವತಿಸಬೇಕು. ಒಬಿಸಿ ಮತ್ತು ಇಡಬ್ಲ್ಯುಎಸ್ ಅಭ್ಯರ್ಥಿಗಳ ಅರ್ಜಿ ಶುಲ್ಕ 100 ರೂಪಾಯಿ. ಮಹಿಳಾ ಅಭ್ಯರ್ಥಿಗಳು, ಎಸ್ಸಿ, ಎಸ್ ಟಿ, ವಿಕಲಚೇತನ , ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ನೇಮಕಾತಿ ಹೇಗೆ? : ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅಭ್ಯರ್ಥಿಗಳು ಬೆಂಗಳೂರು, ಮಂಗಳೂರು, ಉಡುಪಿ, ಮೈಸೂರು, ಬೆಳಗಾವಿ, ಶಿವಮೊಗ್ಗ, ಹುಬ್ಬಳಿ ಅಥವಾ ಗುಲ್ಬರ್ಗಾ ಇವುಗಳಲ್ಲಿ ಒಂದನ್ನು ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿಕೊಳ್ಳಬಹುದು.

ವೇತನ : ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ವೇತನ ಭಿನ್ನವಾಗಿರಲಿದೆ. ಮಾಹಿತಿ ಪ್ರಕಾರ, ಅಭ್ಯರ್ಥಿಗಳು 25, 500 ರಿಂದ 1, 42, 400 ರೂಪಾಯಿವರೆಗೆ ವೇತನ ಪಡೆಯಲಿದ್ದಾರೆ.

ಅರ್ಜಿ ಸಲ್ಲಿಕೆ ಹೇಗೆ? : SSC CGL 2025 ಅರ್ಜಿ ನಮೂನೆ ಆನ್ಲೈನ್ನಲ್ಲಿ ಲಭ್ಯವಿದೆ. ಅಧಿಕೃತ SSC ವೆಬ್ಸೈಟ್ಗೆ ಭೇಟಿ ನೀಡಬೇಕು. . https://ssc.gov.in ಇಲ್ಲವೆ mySSC ಮೊಬೈಲ್ ಅಪ್ಲಿಕೇಷನ್ ನಲ್ಲಿ ನೀವು ಅರ್ಜಿ ಸಲ್ಲಿಸಬೇಕು. ಮುಖಪುಟದಲ್ಲಿರುವ ರಿಜಿಸ್ಟರ್ ಲಿಂಕ್ ಕ್ಲಿಕ್ ಮಾಡಿ. ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಸ್ಕ್ಯಾನ್ ಮಾಡಿದ ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ. ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್/ಇಮೇಲ್ಗೆ ಕಳುಹಿಸಲಾದ ಒನ್-ಟೈಮ್ ಪಾಸ್ವರ್ಡ್ (OTP) ಬಳಸಿ ಪರಿಶೀಲಿಸಿ. ನೋಂದಣಿ ನಂತರ, SSC CGL ಅರ್ಜಿ ಸಲ್ಲಿಸಿ ಬಟನ್ ಅನ್ನು ಕ್ಲಿಕ್ ಮಾಡಿ. ಶೈಕ್ಷಣಿಕ ಅರ್ಹತೆಗಳು, ಆದ್ಯತೆಯ ಪರೀಕ್ಷಾ ಕೇಂದ್ರ ಮತ್ತು ಇತರ ಅಗತ್ಯ ಮಾಹಿತಿಯನ್ನು ಒಳಗೊಂಡಂತೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಲಭ್ಯವಿರುವ ಆನ್ಲೈನ್ ಪಾವತಿ ಆಯ್ಕೆಗಳ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ. ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದಿಟ್ಟುಕೊಳ್ಳಿ