ಸಾರಾಂಶ

OYO: ಒಯೋ ಕಂಪನಿಯು 2024-25ನೇ ಹಣಕಾಸಿನ ವರ್ಷದಲ್ಲಿ ಭಾರತದ ಅತ್ಯಧಿಕ ಲಾಭದ ಸ್ಟಾರ್ಟ್‌ಅಪ್ ಎನಿಸಿದೆ. ಬುಕಿಂಗ್ ಮೌಲ್ಯದಲ್ಲಿ ಶೇ.54ರಷ್ಟು ಏರಿಕೆ ಕಂಡು ಬಂದಿದೆ.

ನವದೆಹಲಿ: ಗ್ಲೋಬಲ್ ಟ್ರಾವೆಲ್ ಟೆಕ್ ಕಂಪನಿಯಾಗಿರುವ ಒಯೋ (OYO - Global Travel Tech Company) ಅತ್ಯಧಿಕ ಲಾಭ ಸಂಪಾದಿಸಿದ ಭಾರತದ ಸ್ಟಾರ್ಟ್‌ಅಪ್ ಕಂಪನಿಯಾಗಿದೆ. 2024-25ನೇ ಹಣಕಾಸಿನ ವರ್ಷದಲ್ಲಿ ಅತಿಹೆಚ್ಚು ಲಾಭಗಳಿಸಿದ ಭಾರತದ ಕಂಪನಿಯಾಗಿದೆ. ಒಯೋ ಸ್ಥಾಪಕ ರಿತೇಶ್ ಅಗರ್ವಾಲ್ (OYO Founder Ritesh Agarwal) ಗುರುವಾರ ತಮ್ಮ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕಂಪನಿಯ ಬೆಳವಣಿಗೆಯ ಕುರಿತು ಹಲವು ವಿಷಯಗಳನ್ನು ರಿತೇಶ್ ಅಗರ್ವಾಲ್ ಹಂಚಿಕೊಂಡರು. ಇದೇ 2024-25ರ ಹಣಕಾಸಿನ ವರ್ಷದಲ್ಲಿ ಲಾಭಗಳಿಸಿದ ಮಾಹಿತಿಯನ್ನು ನೀಡಿದರು.

ಪಿಟಿಐ ಬಿಡುಗಡೆ ಮಾಡಿರುವ ದಾಖಲೆಗಳ ಪ್ರಕಾರ, ಒಯೋ ಕಂಪನಿ ಹಿಂದಿನ ವರ್ಷಕ್ಕಿಂತ ಶೇ.172ರಷ್ಟು ಹೆಚ್ಚು ಲಾಭವನ್ನು ಗಳಿಸಿದೆ. 2024-25ರಲ್ಲಿ ಒಯೋ ಕಂಪನಿಯ (OYO Company) ತೆರಿಗೆ ನಂತರದ ಲಾಭ 623 ಕೋಟಿ ರೂಪಾಯಿ ಆಗಿದೆ. ಈ ಮೊದಲಿನ ಆರ್ಥಿಕ ವರ್ಷ 2023-24ರಲ್ಲಿ 229 ಕೋಟಿ ರೂಪಾಯಿ ಲಾಭ ಗಳಿಸಿತ್ತು. ಈ ಆರ್ಥಿಕ ವರ್ಷದಲ್ಲಿ ₹1,132 ಕೋಟಿಗಳ ಹೊಂದಾಣಿಕೆಯ EBITDA (Earnings before interest, taxes, depreciation and amortization) ಸಾಧಿಸಿದ್ದು, ಇದು ಶೇ.27ರಷ್ಟು (889 ಕೋಟಿ ರೂ) ಬೆಳವಣಿಗೆಯಾಗಿದೆ. ಒಯೋ ಸತತವಾಗಿ ತನ್ನ 10ನೇ ತ್ರೈಮಾಸಿಕದ EBITDA ಲಾಭವನನ್ನು ದಾಖಲಿಸಿದೆ.  

ಬುಕಿಂಗ್ ಮೌಲ್ಯದಲ್ಲಿಯೂ ಹೆಚ್ಚಳ
ಒಯೋ ಪ್ರತಿ ಷೇರಿನ ಗಳಿಗೆಕೆ 0.93 ರೂ.ಗಳಾಗಿದೆ. ಹಿಂದಿನ ವರ್ಷ (2023-24) ಪ್ರತಿ ಷೇರಿನ ಗಳಿಕೆ 0.36 ಆಗಿದ್ದು, ಇದು ಶೇ.158ರಷ್ಟು ಹೆಚ್ಚಳವಾಗಿದೆ. ಒಯೋ ಬುಕ್ಕಿಂಗ್ ಮೌಲ್ಯದಲ್ಲಿ ಶೇ.54ರಷ್ಟು ಏರಿಕೆ ಕಂಡು 16,436 ಕೋಟಿ ರೂ.ಗೆ ತಲುಪಿದೆ. ಇದರ ಆದಾಯ 6,436 ಕೋಟಿ ರೂ. ಏರಿಕೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಆದಾಯದ ಪ್ರಮಾಣ ಶೇ.20ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: 1900 ಕೋಟಿ ರೂ ಒಡೆಯ, ಒಯೋ ಸಿಇಒ ಹೊಟೆಲ್‌ನಲ್ಲಿ ಈಗಲೂ ಕ್ಲೀನ್ ಮಾಡ್ತಾರೆ ವಾಶ್‌ರೂಂ

ಒಯೋದಿಂದ ಪ್ರೀಮಿಯಂ ಸೇವೆಗಳು
ಒಯೋ ಕಂಪನಿ ತನ್ನ ಸೇವಾ ಪೋರ್ಟಲ್‌ನಲ್ಲಿ ಅನೇಕ ಪ್ರೀಮಿಯಂ ಕೊಡುಗೆಗಳನ್ನು ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ. ಮಧ್ಯಮ ನಗರಗಳ ಹೋಟೆಲ್‌ಗಳಲ್ಲಿ ಒಯೋ ಭಾನುವಾರ ಸೇರಿದಂತೆ ರಜಾದಿನಗಳಂದು ವಿಶೇಷ ಆಫರ್ ನೀಡಿದೆ. ಯುಕೆ ಮತ್ತು ಆಗ್ನೇಯ ಏಷ್ಯಾ ಮತ್ತು ಮಧ್ಯಪ್ರಾಚ್ಯ (SEAME) ಭಾಗದಲ್ಲಿಯೂ ಒಯೋ ಪ್ರೀಮಿಯಂ ಸೇವೆಗಳನ್ನು ಅನೌನ್ಸ್ ಮಾಡಿತ್ತು. FY25 ರ ನಾಲ್ಕನೇ ತ್ರೈಮಾಸಿಕದಲ್ಲಿ, ಟ್ರಾವೆಲ್ ಟೆಕ್ ಸ್ಟಾರ್ಟ್ಅಪ್‌ನ GBV ₹6,379 ಕೋಟಿಗೆ ತಲುಪಿದೆ, ಇದು FY24 ರ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 126 ರಷ್ಟು ಹೆಚ್ಚಾಗಿದೆ

ಒಯೋದ ಆಸ್ತಿ
2024 ರ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ ದಾಖಲಾದ ಅಂಕಿ ಅಂಶಕ್ಕೆ ಹೋಲಿಸಿದರೆ, Q4ನಲ್ಲಿ ಒಯೋ ಆದಾಯ ₹1,872 ಕೋಟಿಗಳಾಗಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ 41 ರಷ್ಟು ಹೆಚ್ಚಾಗಿದೆ. ಆದರೆ ಹೊಂದಾಣಿಕೆ ಮಾಡಲಾದ EBITDA (ಬಡ್ಡಿ, ತೆರಿಗೆ, ಸವಕಳಿ ಮತ್ತು ಭೋಗ್ಯಕ್ಕೆ ಮುಂಚಿನ ಗಳಿಕೆ) ಶೇ 61 ರಷ್ಟು ಹೆಚ್ಚಾಗಿ ₹442 ಕೋಟಿಗೆ ತಲುಪಿದೆ. ಕಳೆದ 12 ತಿಂಗಳಲ್ಲಿ ಭಾರತ, ಸೌದಿ ಅರೇಬಿಯಾ, ಯುಎಇ ಮತ್ತು ಆಗ್ನೇಯ ಏಷ್ಯಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 30ಕ್ಕೂ ಹೆಚ್ಚು ಭಾನುವಾರದ ಹೋಟೆಲ್‌ಗಳನ್ನು ಪ್ರಾರಂಭಿಸುವ ಮೂಲಕ ತನ್ನ ಪ್ರೀಮಿಯಂ ಕೊಡುಗೆಗಳನ್ನು ವಿಸ್ತರಿಸಿದೆ. 

ರಿತೇಶ್ ಅಗರ್ವಾಲ ಅವರ ಒಯೋ ಈ ನವೋದ್ಯಮದ ಜಾಗತಿಕ ಉಪಸ್ಥಿತಿಯು ಈಗ ಸರಿಸುಮಾರು 22,700 ಹೋಟೆಲ್‌ಗಳು ಮತ್ತು 1,19,900 ಮನೆಗಳನ್ನು ಒಳಗೊಂಡಿದೆ. ಒಯೋ ತನ್ನ ಪ್ಲಾಟ್‌ಫಾರಂನಲ್ಲಿ 91,300 ಲಿಸ್ಟಿಂಗ್ ಹೊಂದಿದೆ.

ಇದನ್ನೂ ಓದಿ: ಓಯೋ ರೂಮ್ ಬಾಗಿಲು ಹಾಕೊಳ್ಳೋದನ್ನ ಮರೆತ ಜೋಡಿ; ಮೆಟ್ರೋ ನಿಲ್ದಾಣದಿಂದ ಕೂಗಿ ಹೇಳಿದ ವ್ಯಕ್ತಿ