ಬೆಂಗಳೂರಿನ ಪ್ರೆಸ್ಟೀಜ್ ಎಸ್ಟೇಟ್ ಪ್ರಾಜೆಕ್ಟ್ಸ್‌ನ ಚೇರ್ಮನ್ ಇರ್ಫಾನ್ ರಜಾಕ್ ಅವರ ಸ್ಪೂರ್ತಿದಾಯಕ ಯಶೋಗಾಥೆ. ಸಣ್ಣ ಬಟ್ಟೆ ಅಂಗಡಿಯಿಂದ ಬಿಲಿಯನ್ ಡಾಲರ್ ಸಾಮ್ರಾಜ್ಯದವರೆಗಿನ ಅವರ ಪ್ರಯಾಣದ ಅದ್ಭುತ ಒಳನೋಟ.
ಬೆಂಗಳೂರು (ಜೂ.21): ಶ್ರದ್ಧೆ ಒಂದಿದ್ದರೆ ಬೆಂಗಳೂರಿನಲ್ಲಿ ಬದುಕೋಕೆ ಸಾವಿರ ದಾರಿ, ಯಶಸ್ಸಿಗೆ ಮಿತಿಯೇ ಇಲ್ಲ ಅನ್ನೋದಕ್ಕೆ ಇರ್ಫಾನ್ ರಜಾಕ್ ಸಾಕ್ಷಿ. ಇರ್ಫಾನ್ ರಜಾಕ್ ಎನ್ನುವ ಹೆಸರು ಕೇಳಿದರೆ ಅಷ್ಟಾಗಿ ಯಾರಿಗೂ ಗೊತ್ತಾಗದೇ ಇರಬಹುದು. ಆದರೆ, ಪ್ರೆಸ್ಟೀಜ್ ಎಸ್ಟೇಟ್ ಪ್ರಾಜೆಕ್ಟ್ಸ್‌ನ (Prestige Estates Projects) ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಇರ್ಫಾನ್ ರಜಾಕ್ (Irfan Razack) ಎಂದಾಗ ಅವರ ಬಹುಕೋಟಿ ಸಂಪತ್ತಿನ ಸ್ವರ್ಗ ಕಣ್ಣೆದರು ಬಂದು ಹೋಗುತ್ತದೆ.
ಇಂದು ಇರ್ಫಾನ್ ರಜಾಕ್ ಬೆಂಗಳೂರಿನ (Bengaluru) ಅತ್ಯಂತ ಸಿರಿವಂತ ವ್ಯಕ್ತಿಗಳಲ್ಲಿ ಒಬ್ಬರು. ಭಾರತದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲೂ ಇವರ ಹೆಸರಿದೆ. ಆದರೆ, ಅವರು ಇಲ್ಲಿಯವರೆಗೆ ಬರುವ ನಿಟ್ಟಿನಲ್ಲಿ ಎದುರಿಸಿದ ಕಷ್ಟಗಳು ನಿಜಕ್ಕೂ ಸ್ಪೂರ್ತಿದಾಯಕ ಕಥೆಗಳಲ್ಲಿ ಒಂದು.
ವ್ಯಾಪಾರ ಕುಟುಂಬದಲ್ಲಿ ಜನಿಸಿದ ರಜಾಕ್ ಅವರ ತಂದೆ ರಜಾಕ್ ಸತ್ತಾರ್, 1950 ರಲ್ಲಿ ಬೆಂಗಳೂರಿನಲ್ಲಿ ಒಂದು ಸಣ್ಣ ಬಟ್ಟೆ ಮತ್ತು ಟೈಲರಿಂಗ್ ಅಂಗಡಿಯೊಂದಿಗೆ ಪ್ರೆಸ್ಟೀಜ್ ಗ್ರೂಪ್ ಅನ್ನು ಸ್ಥಾಪನೆ ಮಾಡಿದ್ದುರ.
ಆದರೆ, ರಜಾಕ್ ಅವರ ನಾಯಕತ್ವದಲ್ಲಿ, ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್ ಭಾರತೀಯ ರಿಯಲ್ ಎಸ್ಟೇಟ್ ವಲಯದಲ್ಲಿ ಪ್ರಮುಖ ಬ್ರಾಂಡ್ ಆಗಿ ಮಾರ್ಪಟ್ಟಿದೆ. ವಸತಿ, ವಾಣಿಜ್ಯ, ಚಿಲ್ಲರೆ ವ್ಯಾಪಾರ ಮತ್ತು ಆತಿಥ್ಯ ಕ್ಷೇತ್ರಗಳಲ್ಲಿ ಹಲವಾರು ಉದ್ಯಮಗಳೊಂದಿಗೆ, ಕಂಪನಿಯು 285 ಯೋಜನೆಗಳನ್ನು ಪೂರ್ಣಗೊಳಿಸಿದೆ ಮತ್ತು 54 ಯೋಜನೆಗಳು ಪ್ರಗತಿಯಲ್ಲಿವೆ.
ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್‌ಗಳ ಷೇರುಗಳು 60% ಏರಿಕೆಯಾಗಿ ಇರ್ಫಾನ್ ರಜಾಕ್ ಮತ್ತು ಅವರ ಕುಟುಂಬದ ಒಟ್ಟು ಸಂಪತ್ತು $1 ಬಿಲಿಯನ್ ದಾಟಿದೆ. ಕಂಪನಿಯು ಭಾರತದಲ್ಲಿ ಪಟ್ಟಿ ಮಾಡಲಾದ ಅತಿದೊಡ್ಡ ಪ್ರಾಪರ್ಟಿ ಫರ್ಮ್ ಆಗಿ ಗುರುತಿಸಿಕೊಂಡಿದೆ.DLF ಮಾತ್ರ ಪ್ರೆಸ್ಟೀಜ್‌ಗಿಂತ ಮುಂದಿದೆ. ಪ್ರೆಸ್ಟೀಜ್ ಆಸ್ತಿಗಳ ಪ್ರಸಿದ್ಧ ಕ್ಲೈಂಟ್‌ಗಳಲ್ಲಿ ಆಪಲ್, ಕ್ಯಾಟರ್‌ಪಿಲ್ಲರ್, ಅರ್ಮಾನಿ ಮತ್ತು ಲೂಯಿ ವಿಟಾನ್‌ನಂತಹ ಜಾಗತಿಕ ಬ್ರ್ಯಾಂಡ್‌ಗಳು ಸೇರಿವೆ.
1990 ರಲ್ಲಿ ಬೆಂಗಳೂರಿನಲ್ಲಿ ತಮ್ಮ ಎರಡನೇ ರಿಯಲ್ ಎಸ್ಟೇಟ್ ಯೋಜನೆಯನ್ನು ಮಾರಾಟ ಮಾಡಿದ ನಂತರ, ಅವರು ನಿವೃತ್ತಿ ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದರು. ಆದರೆ ರಜಾಕ್ ಅವರ ಉದ್ಯಮಶೀಲತೆಯ ಮೇಲಿನ ಉತ್ಸಾಹವು ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್‌ಗಳನ್ನು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಲೀಡರ್ ಅನ್ನಾಗಿ ಪರಿವರ್ತಿಸಿದೆ.
ಪ್ರಸ್ತುತ, ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್ ಬೆಂಗಳೂರಿನಿಂದ ಹೊರಗೆ ಚೆನ್ನೈ, ಕೊಚ್ಚಿ, ಕ್ಯಾಲಿಕಟ್, ಹೈದರಾಬಾದ್ ಮತ್ತು ಮುಂಬೈನಂತಹ ನಗರಗಳಿಗೆ ವಿಸ್ತರಿಸುತ್ತಿದೆ. ಮಧ್ಯಮ ವರ್ಗದ ಖರೀದಿದಾರರನ್ನು ಗುರಿಯಾಗಿಸಿಕೊಂಡು ಕಂಪನಿಯು ತನ್ನ ವಾರ್ಷಿಕ ಮಾರಾಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಅಜಾಕ್ ಅವರ ಕಿರಿಯ ಸಹೋದರರಾದ ರೆಜ್ವಾನ್ ಮತ್ತು ನೋಮನ್ ಕೂಡ ಇದರ ಅಗಾಧ ಯಶಸ್ಸಿಗೆ ಕೊಡುಗೆ ನೀಡಿದ್ದಾರೆ.
ಇನ್ನೂ ಅಚ್ಚರಿ ಏನೆಂರೆ, ಅವರ ಬಟ್ಟೆ ಮತ್ತು ಟೈಲರಿಂಗ್ ಅಂಗಡಿ ಇನ್ನೂ ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್‌ನ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಮಾನಾಂತರವಾಗಿ ಕಾರ್ಯನಿರ್ವಹಿಸುತ್ತದೆ. ಇರ್ಫಾನ್ ರಜಾಕ್ ಪ್ರಸ್ತುತ $1.3 ಬಿಲಿಯನ್ ಮೌಲ್ಯವನ್ನು ಹೊಂದಿದ್ದಾರೆ. ಇದು ಅವರನ್ನು ಇಂದು ಭಾರತದ ಅತ್ಯಂತ ಪ್ರಭಾವಶಾಲಿ ಮತ್ತು ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರನ್ನಾಗಿ ಮಾಡಿದೆ.2023 ರ ಆರ್ಥಿಕ ವರ್ಷದಲ್ಲಿ ಕಂಪನಿಯು 12,930 ಕೋಟಿ ರೂ.ಗಳ ಮಾರಾಟವನ್ನು ದಾಖಲಿಸಿದೆ. ಫೋರ್ಬ್ಸ್‌ನ 'ವಿಶ್ವ ಬಿಲಿಯನೇರ್‌ಗಳ' ಪಟ್ಟಿಯಲ್ಲಿ ಇರ್ಫಾನ್ ರಜಾಕ್ ಕೂಡ ಹೆಸರಿಸಲ್ಪಟ್ಟಿದ್ದಾರೆ.