ದುಬೈ ಮೂಲದ ಭಾರತೀಯ ಉದ್ಯಮಿ ಸತೀಶ್ ಸನ್‌ಪಾಲ್ ತಮ್ಮ ಒಂದು ವರ್ಷದ ಮಗಳಿಗೆ ಪಿಂಕ್ ಬಣ್ಣದ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದುಬೈ ಮೂಲದ ಭಾರತೀಯ ಉದ್ಯಮಿಯೊಬ್ಬರು(Indian Businessman)ತಮ್ಮ ಒಂದು ವರ್ಷದ ಮಗಳಿಗೆ ಕಸ್ಟಮೈಜ್ಡ್‌ ಆದ ದುಬಾರಿ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದು, ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ದುಬೈನಲ್ಲಿ ನೆಲೆಸಿರುವ ಭಾರತೀಯ ಉದ್ಯಮಿ((Dubai Dad) ಸತೀಶ್ ಸನ್‌ಪಾಲ್ (Satish Sanpal)ವಿಶ್ವ ತಂದೆಯರ ದಿನದಂದು(Father's Day) ತಮ್ಮ ಮುದ್ದಿನ ಮಗಳಾದ ಇಸಬೆಲ್ಲಾಗೆ ಪಿಂಕ್ ಬಣ್ಣದ ರೋಲ್ಸ್ ರಾಯ್ಸ್ (Pink Rolls-Royce) ಐಷಾರಾಮಿ ಕಾರು ಉಡುಗೊರೆಯಾಗಿ ನೀಡಿದ್ದಾರೆ.

ಕಸ್ಟಮೈಜ್ಡ್ ರೂಲ್ಸ್ ರಾಯ್ಸ್ ಕಾರು

ಇದನ್ನು ಸಂಪೂರ್ಣ ಕಸ್ಟಮೈಜ್ಡ್ ಆಗಿ ನಿರ್ಮಿಸಲಾಗಿದ್ದು, ಕಾರಿನ ಒಳಭಾಗವೂ ಕೂಡ ಪಿಂಕ್ ಬಣ್ಣದಿಂದ ವಿನ್ಯಾಸ ಮಾಡಲಾಗಿದೆ. ಈ ಹೊಸ ಕಾರಿನ ವೀಡಿಯೋವನ್ನು ಅವರು ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದು, ಭಾರಿ ವೈರಲ್ ಆಗಿದೆ. ಅನೇಕರು ಉದ್ಯಮಿಯ ಈ ನಡೆಯನ್ನು ಮೆಚ್ಚಿಕೊಂಡರೆ ಮತ್ತೆ ಕೆಲವರು ಇದೊಂದು ಶ್ರೀಮಂತಿಕೆಯ ಪ್ರದರ್ಶನ ಎಂದು ಕಿಡಿಕಾರಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ANAX ಡೆವಲಪ್‌ಮೆಂಟ್ಸ್‌ನ ಸಂಸ್ಥಾಪಕ ಸತೀಶ್ ಸನ್ಪಾಲ್ ಅವರು ತಮ್ಮ ಮಗಳು ಇಸಾಬೆಲ್ಲಾ ಸನ್ಪಾಲ್‌ಗೆ(Isabella Sanpal) ಐಷಾರಾಮಿ ವಾಹನದ ಕೀಲಿಗಳನ್ನು ನೀಡುತ್ತಿರುವುದನ್ನು ಕಾಣಬಹುದು, ಅವರ ಪಕ್ಕದಲ್ಲಿ ಅವರ ಪತ್ನಿ ತಬಿಂದಾ ಸನ್ಪಾಲ್ (Tabinda Sanpal)ಇದ್ದಾರೆ.

ಇಂಗ್ಲೆಂಡ್‌ನಿಂದ ಆಮದು ಆದ ರೂಲ್ಸ್ ರಾಯ್ಸ್ ಕಾರು

ಈ ವೀಡಿಯೊದಲ್ಲಿ ಪಿಂಕ್ ಬಣ್ಣದ ಒಳಾಂಗಣ ವಿನ್ಯಾಸವನ್ನು ಹೊಂದಿರುವ ಮೆಟಾಲಿಕ್ ಗುಲಾಬಿ ಬಣ್ಣದ ಕಾರು ಕಾಣಿಸುತ್ತಿದೆ. ವಾಹನದ ನಂಬರ್ ಬೋರ್ಡ್ ಇರಬೇಕದ ಜಾಗದಲ್ಲಿ ಅಭಿನಂದನೆಗಳು, ಇಸಾಬೆಲ್ಲಾ ಎಂದು ಬರೆಯಲಾಗಿದೆ. ಈ ಕಾರನ್ನು ವಿಶೇಷವಾಗಿ ಚಿಕ್ಕ ಮಗುವಿಗೆ ಇಂಗ್ಲೆಂಡ್‌ನಲ್ಲಿ ನಿರ್ಮಿಸಲಾಗಿದೆ ಹಾಗೂ ಈ ಕಾರ್ಯಕ್ರಮಕ್ಕಾಗಿಯೇ ಇಂಗ್ಲೆಂಡ್‌ನಿಂದ ಯುಎಇಗೆ ಇಂಪೋರ್ಡ್ ಮಾಡಲಾಗಿದೆ. ಕಾರಿನ ಸೀಟುಗಳನ್ನು ಸಹ ಇಸಾಬೆಲ್ಲಾ ಅವರ ಹೆಸರಿನ ಮೊದಲಕ್ಷರಗಳೊಂದಿಗೆ ಮೊನೊಗ್ರಾಮ್ ಮಾಡಲಾಗಿದೆ.

ವೈರಲ್ ಆದ ವೀಡಿಯೋದಲ್ಲಿ(Instagram video) ಕಾಣುವಂತೆ ಈ ಕುಟುಂಬವು ತಮ್ಮ ಸ್ವಂತ ರೋಲ್ಸ್ ರಾಯ್ಸ್‌ನಲ್ಲಿ ಆಗಮಿಸಿ ಈ ಕಾರನ್ನು(luxury car) ಪಡೆಯುತ್ತಾರೆ. ಕಾರಿನ ಕೀಲಿಗಳನ್ನು ಸ್ವೀಕರಿಸುವ ಮೊದಲು ಮತ್ತು ವಾಹನದೊಳಗೆ ಮಗು ತನ್ನ ಮೊದಲ ಹೆಜ್ಜೆ ಇಡುವ ಮೊದಲು ಮ್ಯೂಸಿಕ್ ಹಾಕಿ ನೃತ್ಯ ಮಾಡುವ ಮೂಲಕ ಮಗುವನ್ನು ಸ್ವಾಗತಿಸಲಾಗಿದೆ. ಸತೀಶ್ ಸನ್ಪಾಲ್ ಇದೀಗ ತಂದೆಯ ದಿನವನ್ನು ಗೆದ್ದಿದ್ದಾರೆ. ಅವರು ದುಬೈನಲ್ಲಿ ಕಸ್ಟಮ್ ಆಧಾರಿತ ರೋಲ್ಸ್ ರಾಯ್ಸ್ ಅನ್ನು ತಮ್ಮ ಅಮೂಲ್ಯ ಹೆಣ್ಣು ಮಗು ಇಸಾಬೆಲ್ಲಾ ಸತೀಶ್ ಸನ್ಪಾಲ್‌ಗೆ ಉಡುಗೊರೆಯಾಗಿ ನೀಡಿದರು. ದುಬೈ ತಂದೆಯ ನಡೆ ಅಂತಹದು ಎಂದು ಶೀರ್ಷಿಕೆ ಬರೆದು ಈ ವೀಡಿಯೋ ಪೋಸ್ಟ್ ಮಾಡಲಾಗಿದೆ.

ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ

ಈ ವೀಡಿಯೋ ಸ್ವಲ್ಪ ಹೊತ್ತಿನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯ್ತು. ಅನೇಕರು ಈ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದರೆ ಮತ್ತೆ ಅನೇಕರು ಇದು ಶ್ರೀಮಂತಿಕೆ ಪ್ರದರ್ಶನ ಎಂದು ಕಾಮೆಂಟ್ ಮಾಡಿದರು. ನಿಮಗೆ ವಿಶೇಷವಾದದ್ದನ್ನು ಉಡುಗೊರೆಯಾಗಿ ನೀಡಿದಾಗ ಮುಂದಿನ 17 ವರ್ಷಗಳ ಕಾಲ ನೀವು ಅದನ್ನು ಬಳಸಲಾಗುವುದಿಲ್ಲ ಎಂದು ತಿಳಿದುಕೊಂಡ ನಂತರವೂ ಖುಷಿಯಾದರೆ ನಿಜವಾಗಿಯೂ ಒಳ್ಳೆಯ ಭಾವನೆಯಾಗಿರಬೇಕು ಎಂದು ಬರೆದಿದ್ದಾರೆ. ಮತ್ತೊಬ್ಬರು, ವಾವ್ ವಾವ್ ಬೆಲ್ಲಾ, ನಿಮ್ಮ ಹೊಸ ಕಾರನ್ನು ನಾನು ತುಂಬಾ ಪ್ರೀತಿಸುತ್ತೇನೆ, ಅಭಿನಂದನೆಗಳು ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಇದು ಸಂಪತ್ತಿನ ಜಿಗುಟಾದ ಮತ್ತು ಆಕರ್ಷಕ ಪ್ರದರ್ಶನವಾಗಿದೆ ಮತ್ತು ಹಣದಿಂದ ಕ್ಲಾಸನ್ನು ಖರೀದಿಸಲಾಗುವುದಿಲ್ಲ ಎಂಬುದು ಸಾಬೀತಾಗಿ ಎಂದು ಕಾಮೆಂಟ್ ಮಾಡಿದ್ದಾರೆ.

ಹಾಗೆಯೇ ನನ್ನ ಮಗನಿಗೆ ಈಗ ನಾಲ್ಕು ವರ್ಷ ಆತ ಕೇವಲ ನಾನು ತಂದು ಕೊಟ್ಟ ಶ್ವಾರ್ಮಾಗೆ ತುಂಬಾ ಖುಷಿಯಾದ ಎಂದು ಕಾಮೆಂಟ್ ಮಾಡಿದ್ದಾರೆ. ಈ ಪ್ರಾಯದ ಮಕ್ಕಳು ಖಾಲಿ ಬಾಕ್ಸ್ ಕೊಟ್ಟರು ಖುಷಿ ಪಡುತ್ತಾರೆ ಎಂದು ಕಾಮೆಂಟ್ ಮಾಡುವ ಮೂಲಕ ಟೀಕೆ ವ್ಯಕ್ತಪಡಿಸಿದ್ದಾರೆ.
 

View post on Instagram