ನಾಗಾಲ್ಯಾಂಡ್ನಿಂದ ರಾಜ್ಯಸಭೆಗೆ ಆಯ್ಕೆಯಾದ ಮೊದಲ ಮಹಿಳೆ (ಏಪ್ರಿಲ್ 2022) ಮತ್ತು ಸಂಸತ್ತಿನ ಸದನ ಹಾಗೂ ರಾಜ್ಯ ವಿಧಾನಸಭೆಗೆ ಆಯ್ಕೆಯಾದ ನಾಗಾಲ್ಯಾಂಡಿನ ಎರಡನೇ ಮಹಿಳೆ ಇವರು.
Image credits: Instagram
ನಾಗಾಲ್ಯಾಂಡಿನ ಮೊದಲ ಮಹಿಳಾ ಸಂಸದೆ
ನಾಗಾಲ್ಯಾಂಡ್ನಿಂದ ರಾಜ್ಯಸಭೆಯ ಅಧ್ಯಕ್ಷತೆ ವಹಿಸಿದ ಮೊದಲ ಮಹಿಳಾ ಸದಸ್ಯೆ ಎಂಬ ಹೆಗ್ಗಳಿಕೆಗೆ ಬಿಜೆಪಿಯ ಎಸ್ ಫಂಗ್ನಾನ್ ಕೊನ್ಯಾಕ್ ಪಾತ್ರರಾಗಿದ್ದಾರೆ.
Image credits: Instagram
ರಾಜ್ಯಸಭೆ ಅಧ್ಯಕ್ಷೆ
ಇದು ನಾಗಲ್ಯಾಂಡಿನ ಇತಿಹಾಸದಲ್ಲಿ ಮಹತ್ವ ಕ್ಷಣದ ದಾಖಲೆ.
Image credits: Instagram
ಟ್ವೀಟ್ ಮೂಲಕ ಸಂತಸ ವ್ಯಕ್ತ
ಈ ಬಗ್ಗೆ ಟ್ವೀಟ್ ಮಾಡಿರುವ ಕೊನ್ಯಾಕ್, ಇಂದು ರಾಜ್ಯಸಭೆಯ ಅಧ್ಯಕ್ಷತೆ ವಹಿಸಿರುವುದು ಹೆಮ್ಮೆ ಪಡುವ ವಿಷಯ. ನಾನು ಭಾವಪರವಶಳಾದ್ದೇನೆ ಎಂದು ಹೇಳಿದ್ದಾರೆ.
Image credits: Instagram
ಪ್ರಧಾನಿ ಮೋದಿಯವರಿಗೆ ಧನ್ಯವಾದ
ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಮಹಿಳೆಯರಿಗೆ ರಾಜಕೀಯ ಮತ್ತು ನಾಯಕತ್ವದಲ್ಲಿ ಸೂಕ್ತ ಗೌರವ ಮತ್ತು ಸ್ಥಾನ ನೀಡಲಾಗುತ್ತಿದೆ. ಎಂದು ಸಭಾಧ್ಯಕ್ಷರಿಗೆ, ಮೋದಿಯವರಿಗೆ ಧನ್ಯವಾದ ತಿಳಿಸಿದ್ದಾರೆ.
Image credits: Instagram
ರಾಜ್ಯಸಭೆಯಲ್ಲಿ ಲಿಂಗ ಸಮಾನತೆ
ಲಿಂಗ ಸಮಾನತೆ ತರುವ ಉದ್ದೇಶದಿಂದ, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಕೊನ್ಯಾಕ್, ಪಿಟಿ ಉಷಾ, ಫೌಜಿಯಾ ಖಾನ್ (ಎನ್ಸಿಪಿ) ಮತ್ತು ಸುಲತಾ ದೇವ್ (ಬಿಜೆಡಿ) ಅವರನ್ನು ಉಪಾಧ್ಯಕ್ಷರ ಸಮಿತಿಗೆ ನಾಮನಿರ್ದೇಶನ ಮಾಡಿದ್ದರು.