ಮಾನಸಿಕಿ ಹಾಗೂ ದೈಹಿಕ ಆರೋಗ್ಯದ ಗುಟ್ಟನ್ನು ಎತ್ತಿ ಸಾರುವ ಸೊಂಟದ ಸೈಜನ್ನು ಇಳಿಸಿಕೊಳ್ಳುವುದು ಹೇಗೆ?
women Sep 28 2024
Author: Suvarna News Image Credits:google
Kannada
ಸೊಂಟದ ಸೈಜ್ ಕಡಿಮೆ ಮಾಡಲು ಸಿಂಪಲ್ ಟಿಪ್ಸ್
ಸೊಂಟ ಚಿಕ್ಕದಾಗಿದ್ದರೆ, ಫಿಸಿಕ್ ಚಂದ ಅನ್ಸುತ್ತೆ. ನಡೆಯುವಾಗಲೂ ಮೈಮಾಟ ಎದ್ದು ಕಾಣಿಸುತ್ತದೆ.
Image credits: Getty
Kannada
ಕಾರ್ಡಿಯೋ ವ್ಯಾಯಾಮ
ಪ್ರತಿದಿನ 30 ರಿಂದ 45 ನಿಮಿಷ ಈಜು, ಜಾಗಿಂಗ್, ಸೈಕ್ಲಿಂಗ್‌ನಂತಹ ಕಾರ್ಡಿಯೋ ವ್ಯಾಯಾಮ ಮಾಡುವುದರಿಂದ ನಿಮ್ಮ ಚಯಾಪಚಯ ಹೆಚ್ಚಾಗುತ್ತದೆ. ತೂಕವೂ ಕಡಿಮೆಯಾಗುತ್ತದೆ.
Kannada
ಪ್ಲ್ಯಾಂಕ್, ಅಬ್ಸ್ ವ್ಯಾಯಾಮ
ಪ್ಲ್ಯಾಂಕ್, ಸೈಡ್ ಪ್ಲ್ಯಾಂಕ್, ಕ್ರಂಚೆಸ್‌ನಂತಹ ಅಬ್ಸ್ ವ್ಯಾಯಾಮ ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡುತ್ತದೆ. ಈ ವ್ಯಾಯಾಮ ಪ್ರತಿದಿನ 3-4 ಸೆಟ್ಸ್ ಮಾಡಿದರೆ ಖಂಡಿತವಾಗಿಯೂ ತೂಕ ಕಡಿಮೆಯಾಗುತ್ತದೆ.
Kannada
ಪ್ರೋಟೀನ್ ಸಮೃದ್ಧ ಆಹಾರ
ಪ್ರೋಟೀನ್ ಹೆಚ್ಚಿರುವ ಬೇಳೆಕಾಳು, ಮೊಟ್ಟೆ, ಕೋಳಿ ಮಾಂಸ, ಮೀನುಗಳಂತಹ ಆಹಾರ ಸೇವಿಸುವುದರಿಂದ ಸ್ನಾಯುಗಳು ಬಲಗೊಳ್ಳುತ್ತವೆ. ಜೊತೆಗೆ ಹೊಟ್ಟೆ ಹೆಚ್ಚು ಹೊತ್ತು ತುಂಬಿರುತ್ತದೆ. ಇದರಿಂದ ತೂಕವೂ ಇಳಿಯುತ್ತದೆ.
Kannada
ಗ್ರೀನ್, ಹರ್ಬಲ್ ಟೀ
ಗ್ರೀನ್ ಟೀ ಕುಡಿಯುವುದರಿಂದ ನಿಮ್ಮ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ. ತೂಕ ಕಳೆದು ಕೊಳ್ಳಬಹುದು. ಅಷ್ಟೇ ಅಲ್ಲ, ನಿಂಬೆಹಣ್ಣಿನೊಂದಿಗೆ ಕೆಲವು ಡಿಟಾಕ್ಸ್ ಪಾನೀಯಗಳೂ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
Kannada
ಸಕ್ಕರೆ, ಸಂಸ್ಕರಿಸಿದ ಆಹಾರ
ಹೊಟ್ಟೆ ಕರಗಿಸಿಕೊಳ್ಳಲು ಸಕ್ಕರೆ, ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಮಾಡಬೇಕು. ಇವು ದೇಹದಲ್ಲಿ ಕೊಬ್ಬನ್ನು ಹೆಚ್ಚಿಸುತ್ತವೆ. ಆದ್ದರಿಂದ ಅವುಗಳ ಬದಲಿಗೆ ಹಣ್ಣು ಮತ್ತು ತರಕಾರಿ ಸೇವಿಸಿ.
Kannada
ಹೆಚ್ಚು ನೀರು ಕುಡಿಯಿರಿ
ತೂಕ ಇಳಿಸಿಕೊಳ್ಳಲು ಸಾಕಷ್ಟು ನೀರು ಕುಡಿಯಬೇಕು. ಇದು ಚಯಾಪಚಯವನ್ನು ನಿಯಂತ್ರಿಸುತ್ತದೆ. ಜೊತೆಗೆ ದೇಹದಿಂದ ವಿಷವನ್ನು ಹೊರಹಾಕುತ್ತದೆ.ದಿನಕ್ಕೆ 8-10 ಗ್ಲಾಸ್ ನೀರು ಕುಡಿಯಿರಿ.
Kannada
8 ಗಂಟೆ ನಿದ್ರೆ
ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ 7 ರಿಂದ 8 ಗಂಟೆಗಳ ನಿದ್ರೆ ಅತ್ಯಗತ್ಯ. ನೀವು ಸಾಕಷ್ಟು ನಿದ್ರಿಸದಿದ್ದರೆ ಏನೇ ಮಾಡಿದರೂ ತೂಕ ಇಳಿಸಿಕೊಳ್ಳಲು ಸಾಧ್ಯವಿಲ್ಲ. ಜೊತೆಗೆ ಮಾನಸಿಕ ಒತ್ತಡ ಕಡಿಮೆ ಮಾಡಲು ಯೋಗ, ಧ್ಯಾನ ಮಾಡಿ.