ಸಣ್ಣದಾದರೂ ಪರವಾಗಿಲ್ಲ ಚಿನ್ನದ ಸರವನ್ನು ಮಹಿಳೆ ದೈನಂದಿನ ಉಡುಗೆಯಲ್ಲಿ ಧರಿಸುತ್ತಾರೆ. ನೀವು ಸಹ ಸರಳ ಆಭರಣಗಳನ್ನು ಹುಡುಕುತ್ತಿದ್ದರೆ, ಇಲ್ಲಿವೆ ನೋಡಿ ಸಿಂಪಲ್ ಡಿಸೈನ್‌ಗಳು!
ನೆಕ್ಲೇಸ್ ವಿನ್ಯಾಸ
ನೀವು ಹೆಚ್ಚು ಆಭರಣಗಳನ್ನು ಇಷ್ಟಪಡದಿದ್ದರೆ, ಈ ರೀತಿಯ ಚಿನ್ನದ ಸರ ಆರಿಸಿ.ಮೂರು ಸ್ಟೋನ್ ಇರೋ ಸರ ಸಖತ್ ರಾಯಲ್ ಆಗಿ ಕಾಣಿಸುತ್ತದೆ.
ಟ್ರೆಂಡಿ ಚಿನ್ನದ ಸರ ವಿನ್ಯಾಸ
ಹಾರ್ಟ್ ಪೆಂಡೆಂಟ್‌ಗಳೊಂದಿಗೆ ಈ ರೀತಿಯ ಚಿನ್ನದ ಸರ ಟ್ರೆಂಡ್ ಆಗಿದೆ. ಒಂದು ಬದಿಯಲ್ಲಿ ಎಲೆ ಮತ್ತು ಇನ್ನೊಂದು ಬದಿಯಲ್ಲಿ ಡಬಲ್ ಲೇಯರ್ ಸರಕ್ಕೆ ಹಾರ್ಟ್ ಪೆಂಡೆಂಟ್ ಹಾಕಿದ್ರೆ ಕ್ಲಾಸಿ ಲುಕ್ ನಿಮ್ಮದಾಗುತ್ತದೆ.
ಕಡಿಮೆ ಬಜೆಟ್
ಬಜೆಟ್ ಕಡಿಮೆಯಿದ್ದರೆ, ನೀವು ಮುತ್ತುಗಳ ಮೇಲೆ ಈ ರೀತಿಯ ಪಲ್ಲವಿ ಚಿನ್ನದ ಸರಪಳಿಯನ್ನು ಆಯ್ಕೆ ಮಾಡಬಹುದು. ಈ ಮಾದರಿಯ ಸರಗಳು ಮಾರುಕಟ್ಟೆಯಲ್ಲಿ ಹೆಚ್ಚು ಸೇಲ್ ಆಗುತ್ತವೆ.
ತ್ರಿ ಲೇಯರ್ ಸರ
ಹೊಸದಾಗಿ ಮದುವೆಯಾದ ಮಹಿಳೆಯರು ಮಂಗಳಸೂತ್ರದ ಜೊತೆ ಈ ರೀತಿಯ ಚಿನ್ನದ ಸರ ಧರಿಸಬಹುದು. ಪೆಂಡೆಂಟ್ ಬದಲಾಗಿ ಮೂರು ಎಳೆಯನ್ನು ಮಾಡಿಸಿ ಧರಿಸಬಹುದು.
ಹೆವಿ ಪೆಂಡೆಂಟ್
ಪಾರ್ಟಿ ಉಡುಗೆ ಆಭರಣಗಳಿಗಾಗಿ ನೀವು ಚಿನ್ನದ ಸರದಲ್ಲಿ ಹೆವಿ ಪೆಂಡೆಂಟ್ ಧರಿಸಬಹುದು. ಇದು ಸರಳ ಸೀರೆಗಳಿಗೆ ಹೆವಿ ಲುಕ್ ನೀಡುತ್ತದೆ. ನೀವು ಈ ಮಾದರಿಯಲ್ಲಿ ಮಂಗಳಸೂತ್ರವನ್ನು ಸಹ ಖರೀದಿಸಬಹುದು.
ಟ್ರಡಿಷನಲ್ ಟಚ್
ಸಾಂಪ್ರದಾಯಿಕ ಚಿನ್ನದ ಸರಪಳಿಗಳನ್ನು ಮಹಿಳೆಯರು ತುಂಬಾ ಇಷ್ಟಪಡುತ್ತಾರೆ. ಸಾಂಪ್ರದಾಯಿಕ ಆಭರಣಗಳನ್ನು ಇಷ್ಟಪಟ್ಟರೆ ಇದನ್ನು ಆರಿಸಿ.
ಸಿಂಪಲ್ ಜೊತೆ ರಾಯಲ್ ಲುಕ್
ಮೂರು ಪದರಗಳ ಚಿನ್ನದ ಸರ ತುಂಬಾ ಸುಂದರವಾಗಿ ಕಾಣುತ್ತದೆ. ನೀವು ಆಭರಣಗಳನ್ನು ಧರಿಸಲು ಇಷ್ಟಪಡದಿದ್ದರೆ, ಈ ರೀತಿಯ ಸರ ಆಯ್ಕೆ ಮಾಡಿಕೊಳ್ಬಹುದು.