Kannada

ಈ ಅಂಶ ಗಮನಿಸಿ

ಅಡುಗೆಯ ರುಚಿ ಹೆಚ್ಚಿಸುವ ಕರಿಬೇವು ಗಿಡವನ್ನು ಮನೆಯಲ್ಲೇ ಸುಲಭವಾಗಿ ಬೆಳೆಸಬಹುದು. ಕೃಷಿ ವಿಜ್ಞಾನಿಗಳ ಪ್ರಕಾರ, ಗಿಡದ ಸರಿಯಾದ ಆರೈಕೆಗಾಗಿ ಈ ಅಂಶಗಳನ್ನು ಗಮನಿಸಿ.

Kannada

ಬಿಸಿಲು

ಗಿಡಕ್ಕೆ ದಿನಕ್ಕೆ 4 ರಿಂದ 6 ಗಂಟೆ ನೇರ ಬಿಸಿಲು ಬೇಕು. ಮನೆಯ ದಕ್ಷಿಣ ದಿಕ್ಕಿನಲ್ಲಿ ಇಡುವುದು ಅತ್ಯುತ್ತಮ. ಬಿಸಿಲು ಕಡಿಮೆ ಇದ್ದರೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.

Image credits: Getty
Kannada

ಮಣ್ಣು

ನೀರು ನಿಲ್ಲದಂತಹ ಹಗುರವಾದ ಮಣ್ಣು ಇರಲಿ. ಮಣ್ಣಿನ ಜೊತೆ ಮರಳು, ಹಟ್ಟಿಗೊಬ್ಬರ ಅಥವಾ ವರ್ಮಿ ಕಾಂಪೋಸ್ಟ್ ಬೆರೆಸಿದರೆ ಗಿಡ ವೇಗವಾಗಿ ಬೆಳೆಯುತ್ತದೆ.

Image credits: Getty
Kannada

ನೀರು

ಮಣ್ಣಿನ ಮೇಲ್ಪದರ ಒಣಗಿದಾಗ ಮಾತ್ರ ನೀರು ಹಾಕಿ. ಬೇಸಿಗೆಯಲ್ಲಿ 2-3 ದಿನಕ್ಕೊಮ್ಮೆ, ಚಳಿಗಾಲದಲ್ಲಿ 7-10 ದಿನಕ್ಕೊಮ್ಮೆ ನೀರು ಸಾಕು. ಅತಿಯಾದ ನೀರು ಬೇರುಗಳನ್ನು ಕೊಳೆಸುತ್ತದೆ.

Image credits: Getty
Kannada

ನೈಸರ್ಗಿಕ ಗೊಬ್ಬರ

ಪ್ರತಿ 15-20 ದಿನಕ್ಕೊಮ್ಮೆ ಹುಳಿ ಮಜ್ಜಿಗೆ ಅಥವಾ ಮೊಸರಿನ ನೀರನ್ನು ಹಾಕಿ. ಇದು ಗಿಡಕ್ಕೆ ನೈಸರ್ಗಿಕ ಪೋಷಣೆ ನೀಡುತ್ತದೆ.

Image credits: Getty
Kannada

ಎಪ್ಸಮ್ ಸಾಲ್ಟ್

ಎಲೆಗಳು ಗಾಢ ಹಸಿರಾಗಿ ಹೊಳೆಯಲು ತಿಂಗಳಿಗೊಮ್ಮೆ 1 ಚಮಚ ಎಪ್ಸಮ್ ಸಾಲ್ಟ್ ಅನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಗಿಡಕ್ಕೆ ಹಾಕಿ.

Image credits: stockPhoto
Kannada

ಕತ್ತರಿಸುವಿಕೆ

ಗಿಡದಲ್ಲಿ ಹೊಸ ಕವಲುಗಳು ಬರಲು ಒಣಗಿದ ಎಲೆಗಳನ್ನು ತೆಗೆದು, ಮೇಲ್ಭಾಗವನ್ನು ಲಘುವಾಗಿ ಕತ್ತರಿಸುತ್ತಿರಿ.

Image credits: Getty
Kannada

ದಟ್ಟವಾಗಿ ಬೆಳೆಯುತ್ತೆ

ಬಳಸಿ ಉಳಿದ ಸಕ್ಕರೆ ರಹಿತ ಟೀ ಪುಡಿಯನ್ನು ತೊಳೆದು ಗಿಡಕ್ಕೆ ಹಾಕುವುದರಿಂದ ಕರಿಬೇವು ದಟ್ಟವಾಗಿ ಬೆಳೆಯುತ್ತದೆ.

Image credits: stockPhoto

Wall Putty Design: ಈ 7 ವಾಲ್ ಪುಟ್ಟಿ ಡಿಸೈನ್ಸ್ ಕೊಡುತ್ತೆ ನಿಮ್ಮ ಮನೆಗೆ 5-ಸ್ಟಾರ್ ಹೋಟೆಲ್ ಲುಕ್!

ಹೋಳಿ ಬಣ್ಣದಾಟದಲ್ಲಿ ಕೂದಲನ್ನು ಸೇಫ್ ಆಗಿಡುವ ಚೆಂದದ ಹೇರ್ ಸ್ಟೈಲ್

ಒಂದು ರೂಪಾಯಿ ಖರ್ಚಿಲ್ಲದೆ ಪಾತ್ರೆ ಫಳ ಫಳ ಹೊಳೆಯುವಂತೆ ಮಾಡುವ ಟ್ರಿಕ್ಸ್

ಜಿರಲೆ ಕಾಟಕ್ಕೆ ಬ್ರೇಕ್ ಹಾಕಿ! ಓಡಾಡುವ ಜಾಗದಲ್ಲಿ ಈ ಸಿಪ್ಪೆ ಬಿಸಾಕಿ