Woman
ಸುಮಾರು ಒಂದು ವರ್ಷದಿಂದ ನಾಪತ್ತೆಯಾಗಿದ್ದ ದೇವ ಮಾನವೆ ರಾಧೆ ಮಾ, ಇದೀಗ ಮತ್ತೆ ಕಾಣಿಸಿಕೊಂಡಿದ್ದಾರೆ. ಇವರು ಕೆಲದಿನಗಳ ಹಿಂದೆ ಮುಂಬೈ ಏರ್ ಪೋರ್ಟ್ ನಲ್ಲಿ ಪ್ರಯಾಣಿಕರಿಗೆ ಉಪದೇಶ ಮಾಡುತ್ತಿದ್ದರು ಎನ್ನಲಾಗಿದೆ.
ಜೂನ್ 12 ರಂದು ಬಿರುಗಾಳಿಯಿಂದಾಗಿ ಮುಂಬೈನಿಂದ ಕತರ್ ರಾಜಧಾನಿ ಧೋಹಾಕ್ಕೆ ಸಾಗುತ್ತಿದ್ದ ಏರ್ ಇಂಡಿಯಾದ ವಿಮಾನ AI981 ತಡವಾಗಿದ್ದರಿಂದ ಪ್ರಯಾಣಿಕರು ಕಂಗಾಲಾಗಿದ್ದರು.
ವಿಮಾನ ತಡವಾಗಿದ್ದಕ್ಕೆ ಕೋಪಗೊಂಡಿದ್ದ ಪ್ರಯಾಣಿಕರಿಗೆ ಆ ಸಮಯದಲ್ಲಿ ಅಲ್ಲಿದ್ದ ರಾಧೆ ಮಾ ಉಪದೇಶ ನೀಡಿ, ಅವರನ್ನು ಶಾಂತವಾಗಿಸಲು ಯತ್ನಿಸಿದ್ದಾರೆ.
ರಾಧೆ ಮಾ ಉಪದೇಶ ನೀಡುತ್ತಿದ್ದರೂ, ಕೋಪ ತಣ್ಣಗಾಗದ ಪ್ರಯಾಣಿಕರು ಜೋರು ಜೋರಾಗಿ ಮಾತನಾಡುತ್ತಿದ್ದಾಗ ರಾಧೆ ಮಾ, ಉಪದೇಶದ ಮಧ್ಯದಲ್ಲಿ ಶಟ್ ಯುವರ್ ಮೌತ್ ಎಂದು ಕಿಡಿ ಕಾರಿದ್ದಾರೆ.
ರಾಧೆ ಮಾ ಪಂಜಾಬ್ ರಾಜ್ಯದ ಗುರುದಾಸ್ ಪುರ್ ಜಿಲ್ಲೆಯ ಒಂದು ಸಿಖ್ ಪರಿವಾರದಲ್ಲಿ ಜನಿಸಿದರು.
ರಾಧೆ ಮಾಗೆ 17 ವರ್ಷ ಇರುವಾಗಲೇ ಅವರನ್ನು ಪಂಜಾಬಿನಲ್ಲಿ ಸ್ವೀಟ್ ಶಾಪ್ ನಡೆಸುತ್ತಿದ್ದ ಮೋಹನ್ ಸಿಂಹ್ ಎಂಬುವವರ ಜೊತೆಗೆ ಮದುವೆ ಮಾಡಿಸಲಾಯಿತು.
ರಾಧೆ ಮಾ ನಿಜವಾದ ಹೆಸರು ಸುಖ್ವಿಂದರ್ ಕೌರ್. ಮದುವೆಯಾದ ಸ್ವಲ್ಪ ಸಮಯದಲ್ಲೇ ಇವರು ಆಧ್ಯಾತ್ಮಿಕ ಜೀವನವನ್ನು ತಮ್ಮದಾಗಿಸಿಕೊಂಡರು.
ತಮ್ಮ ಕುಟುಂಬವನ್ನು ಸಾಕುವ ಸಲುವಾಗಿ ರಾಧೆ ಮಾ ಬಟ್ಟೆ ಹೊಲಿಯುವ ಕೆಲಸ ಮಾಡುತ್ತಿದ್ದರು. ಆದರೆ ಅಚಾನಕ್ ಆಗಿ ಅವರ ಜೀವನ ಬದಲಾಯಿತು. ಅದಾದ ನಂತರ ಅವರು ಲಕ್ಸುರಿ ಜೀವನ ನಡೆಸಲು ಆರಂಭಿಸಿದರು.
ಸುಖ್ವಿಂದರ್ ಕೌರ್, ಮಹಂತ್ ರಾಮ್ ದೀನ್ ದಾಸ್ ಅವರಿಂದ ದೀಕ್ಷೆ ಪಡೆದಿದ್ದರು. ಇದಾದ ನಂತರ ಅವರು ಮನೆ ಮನೆಗಳಿಗೆ ಹೋಗಿ ಸತ್ಸಂಗ ಮಾಡುತ್ತಿದ್ದರು.
ರಾಧೆ ಮಾ ಭಕ್ತರ ಲಿಸ್ಟ್ ಕೂಡ ತುಂಬಾ ದೊಡ್ಡದಿದೆ. ಇದರಲ್ಲಿ ಸೆಲೆಬ್ರಿಟೀಸ್‌ಗಳಾದ ರವಿಕಿಶನ್, ಮನೋಜ್ ಭಾಜ್ ಪೈ, ಗಜೇಂದ್ರ ಚೌಹಾಣ್, ಡಾಲಿ ಬಿಂದ್ರ ಮೊದಲಾದ ಹೆಸರುಗಳು ಸಹ ಸೇರಿವೆ.