Woman
ಜಯ ಕಿಶೋರಿ ಭಜನೆ ಮತ್ತು ಧಾರ್ಮಿಕ ಕತೆಗಳನ್ನು ಕೇಳಲು ಜನರು ಹಣವನ್ನು ನೀರಿನಂತೆ ಖರ್ಚು ಮಾಡಕ್ಕೂ ರೆಡಿ ಇರ್ತಾರೆ. ಇವರ ಭಜನೆ ಕೇಳಿ ಜನರಿಗೆ ಶಾಂತಿ, ನೆಮ್ಮದಿ ಸಿಗುತ್ತಂತೆ.
ಮೂಲಗಳ ಪ್ರಕಾರ ಒಂದು ಕಥೆ ಹೇಳಲು ಕಿಶೋರಿ 9.5 ಲಕ್ಷ ರೂಪಾಯಿ ಫೀಸ್ ಆಗಿ ಕೇಳುತ್ತಾರಂತೆ. ಹಾಗಿದ್ರೆ ಯೋಚಿಸಿ ಜನರ ಇವರ ಕಥೆ ಕೇಳಲು ಎಷ್ಟು ಖರ್ಚು ಮಾಡುತ್ತಾರೆ ಎಂದು.
ಜಯ ಕಿಶೋರಿ ಬುಕ್ಕಿಂಗ್ ಸಮಯದಲ್ಲಿ 4.25 ಲಕ್ಷ ರೂಪಾಯಿಗಳನ್ನು ಅಡ್ವಾನ್ಸ್ ಆಗಿ ಪಡೆದುಕೊಳ್ಳುತ್ತಾರೆ. ಕಾರ್ಯಕ್ರಮದ ಬಳಿಕ ಅವರು ಉಳಿದ ಹಣವನ್ನು ಪಡೆಯುತ್ತಾರೆ.
ಒಂದು ವೇಳೆ ಯಾರಾದರೂ ಬಡವರು ಜಯ ಕಿಶೋರಿಯನ್ನು ಭಜನೆ ಹೇಳುವಂತೆ ಕರೆದರೆ ಆ ಸಂದರ್ಭದಲ್ಲಿ ಅವರು ಯಾವುದೇ ರೀತಿಯ ಹಣ ಪಡೆಯದೆ ಕಾರ್ಯಕ್ರಮ ನೀಡುತ್ತಾರೆ.
ನಾರಾಯಣ ಸೇವಾ ಸಂಸ್ಥೆಗೆ ಜಯ ಕಿಶೋರಿ ತನ್ನ ಆದಾಯದ ಬಹು ದೊಡ್ಡ ಪಾಲನ್ನು ನೀಡುತ್ತಾರೆ. ಈ ಸಂಸ್ಥೆ ವಿಶೇಷಚೇತನರಿಗಾಗಿ ಕೆಲಸ ಮಾಡುತ್ತದೆ.
ಕಿಶೋರಿ ಭೇಟಿ ಪಡಾವೋ ಮತ್ತು ಪರಿಸರವನ್ನು ರಕ್ಷಿಸುವಂತಹ ಕೆಲಸಗಳಲ್ಲಿ ನಂಬಿಕೆ ಇಟ್ಟಿದ್ದು, ತನ್ನ ಆದಾಯದ ಒಂದು ಭಾಗವನ್ನು ಇದಕ್ಕಾಗಿಯೂ ಖರ್ಚು ಮಾಡುತ್ತಾರೆ.
ಕಥಾ ವಾಚನ ಅಲ್ಲದೇ ಜಯ ಕಿಶೋರಿ ಯೂಟ್ಯೂಬ್, ಆಲ್ವಂ, ಮತ್ತು ಮೋಟಿವೇಶನಲ್ ಸ್ಪೀಚ್ ಮೂಲಕವೂ ಹಣ ಗಳಿಸುತ್ತಾರೆ. ಇವರ ಒಟ್ಟು ಆದಾಯ ಸುಮಾರು 2 ಕೋಟಿ ಎಂದು ಹೇಳಲಾಗುತ್ತೆ.
9ನೇ ವಯಸ್ಸಿನಲ್ಲಿಯೇ ಜಯ ಕಿಶೋರಿಗೆ ಲಿಂಗಾಷ್ಟಕಂ, ಶಿವ ತಾಂಡವ ಸ್ತೋತ್ರ, ರಾಮಷ್ಟಕದಂತಹ ಮಂತ್ರಗಳು ಕರಗತವಾಗಿದ್ದವು. ಬಾಲ್ಯದಿಂದಲೇ ಅವರು ಕೃಷ್ಣ ಭಕ್ತರಾಗಿದ್ದರು.