Woman

ಮುಖಕ್ಕೆ ಹಕ್ಕಿಯ ಹಿಕ್ಕೆ

ಜಪಾನ್‌ನಲ್ಲಿ ಸುಂದರವಾಗಿ ಕಾಣಲು ಮುಖಕ್ಕೆ ಹಕ್ಕಿಯ ಹಿಕ್ಕೆಯನ್ನು ಹಚ್ಚುತ್ತಾರೆ.
 

Image credits: freepik

ಸೌಂದರ್ಯದ ಗುಟ್ಟು

ಸುಂದರವಾಗಿ ಕಾಣಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಇದಕ್ಕಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡ್ತಾರೆ. ಹಾಗೆಯೇ ಇಲ್ಲಿಯ ಜನರು ಸುಂದರವಾಗಿ ಕಾಣಬೇಕೆಂದು ಮುಖಕ್ಕೆ ಹಕ್ಕಿ ಹಿಕ್ಕೆ ಹಚ್ತಾರೆ.

Image credits: freepik

ಹಿಕ್ಕೆಯ ಫೇಶಿಯಲ್

ಜಪಾನ್‌ನಲ್ಲಿ ಹಕ್ಕಿಯ ಹಿಕ್ಕೆ ಬಳಸಿ ಫೇಶಿಯಲ್ ತಯಾರಿಸಲಾಗುತ್ತಿದೆ. ಇದರಲ್ಲಿ ಹಕ್ಕಿಯ ಮಲವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡುತ್ತಾರೆ. ಇದರಿಂದ ಚರ್ಮ ಮೃದುವಾಗುತ್ತದೆ ಎಂದು ನಂಬುತ್ತಾರೆ.
 

Image credits: google

ಪ್ರಾಚೀನ ಕಾಲದ ಚಿಕಿತ್ಸೆ

ಬರ್ಡ್‌ ಫೇಶಿಯಲ್ ಇತ್ತೀಚಿನ ಚಿಕಿತ್ಸೆಯಲ್ಲ. ಪ್ರಾಚೀನ ಕಾಲದ ಚಿಕಿತ್ಸಾ ವಿಧಾನವಾಗಿದೆ. 17ನೇ ಶತಮಾನದಲ್ಲಿ ಜಪಾನಿನ ನೃತ್ಯಗಾರರು, ಕಲಾವಿದರು ಮೇಕಪ್ ತೆಗೆದ ನಂತರ ಇದನ್ನು ಚರ್ಮದ ಮೇಲೆ ಲೇಪಿಸುತ್ತಿದ್ದರು.

Image credits: freepik

ಪೂಪ್ ಫೇಶಿಯಲ್

ನೈಟಿಂಗೇಲ್‌ ಹಿಕ್ಕೆಗಳನ್ನು ಬಳಸುವುದರಿಂದ ಈ ಚಿಕಿತ್ಸೆಗೆ ನೈಟಿಂಗೇಲ್ ಪೂಪ್ ಫೇಶಿಯಲ್ ಎಂದು ಸಹ ಹೇಳುತ್ತಾರೆ.

Image credits: freepik

ಹೇಗೆ ಮಾಡಲಾಗುತ್ತದೆ?

ಜಪಾನಿನ ಕ್ಯುಶು ದ್ವೀಪದಲ್ಲಿ ಕಂಡು ಬರುವ ನೈಟಿಂಗೇಲ್‌ಗಳ ಮಲವಿಸರ್ಜನೆಯನ್ನು ಫೇಶಿಯಲ್ ಮಾಡಲು ಸಂಗ್ರಹಿಸಲಾಗುತ್ತದೆ. ಚರ್ಮದ ಮೇಲೆ ಅನ್ವಯಿಸುವ ಮೂಲಕ ಮಸಾಜ್ ಮಾಡಲಾಗುತ್ತದೆ. 

Image credits: facebook

ಪ್ರಯೋಜನಗಳು

ವರದಿಗಳ ಪ್ರಕಾರ, ಬರ್ಡ್ ಪೂಪ್ ಫೇಶಿಯಲ್ ಮಾಡುವುದರಿಂದ ವಯಸ್ಸಾಗುವ ಪ್ರಕ್ರಿಯೆ ನಿಧಾನಗೊಳ್ಳುತ್ತದೆ. ಅಷ್ಟೇ ಅಲ್ಲ ಇದು ತ್ವಚೆಯನ್ನು ಕಾಂತಿಯುತವಾಗಿಸುತ್ತದೆ.

Image credits: freepik

ಎಷ್ಟು ವೆಚ್ಚವಾಗುತ್ತದೆ

ಬರ್ಡ್ ಪೂಪ್ ಫೇಶಿಯಲ್‌ನ ವೆಚ್ಚವು 14 ಸಾವಿರದಿಂದ 18 ಸಾವಿರದ ವರೆಗೆ ಇರುತ್ತದೆ. ಪ್ರಸಿದ್ಧ ಫುಟ್ಬಾಲ್ ಆಟಗಾರ ಡೇವಿಡ್ ಬೆಕ್ಹೈಮ್ ಪತ್ನಿ ವಿಕ್ಟೋರಿಯಾ ಮುಖಕ್ಕೆ ಇದೇ ಫೇಶಿಯಲ್ ಮಾಡಿಸಿಕೊಳ್ಳುತ್ತಾರಂತೆ.

Image credits: freepik

ಮಳೆ ಬಂದ್ರೆ ಚಡ್ಡಿ ಒಣಗೋಲ್ಲ, ಆದ್ರೆ ಒದ್ದೆ ಒಳ ಉಡುಪು ತರೋ ಅಪಾಯ ಗೊತ್ತಾ?

ಎಲ್ಲಿ ಹೋದರು ಆಶಾ ಭಟ್? ಸೀರಿಯಸ್ ಆಗಿ ಓದ್ತಾ ಇರೋ ಬುಕ್ ಯಾವುದು ?

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರಬಾರ್ದು ಅಂದ್ರೆ ಹೀಗ್ ಮಾಡಿ

ಮದುವೆಯಾದ ಲೆಸ್ಬಿಯನ್ಸ್, ಪುರುಷನ ಸಂಗವಿಲ್ಲದೇ ತಾಯಿಯಾಗಿದ್ದು ಹೀಗೆ