Woman
IAS ಅಧಿಕಾರಿಯಾಗಲಿರುವ ಆಶ್ನಾ ಚೌಧರಿ, ಕಳೆದ ಹಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಇವರಿಗೆ UPSC 2022 Civil Service Exam ನಲ್ಲಿ 116 ನೇ ರ್ಯಾಂಕ್ ಬಂದಿದೆ.
ಆಶ್ನಾ ಚೌಧರಿ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿದ್ದು, ಹೆಚ್ಚಾಗಿ ತಮ್ಮ ಸುಂದರವಾದ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಆಶ್ನಾ ಎರಡು ಬಾರಿ UPSC ಪರೀಕ್ಷೆ ಬರೆದು ಫೇಲ್ ಆಗಿದ್ದರು. ಆದರೆ ಮೂರನೇ ಬಾರಿ UPSC CSE 2022 ರಲ್ಲಿ ಯಶಸ್ಸು ಗಳಿಸಿದ್ದಾರೆ.
ಆಶ್ನಾ ಚೌಧರಿ ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜ್ ಫಾರ್ ವಿಮೆನ್‌ನಲ್ಲಿ ಇಂಗ್ಲೀಷ್ ಲಿಟರೇಚರ್‌ನಲ್ಲಿ ಬಿಎ ಡಿಗ್ರಿ ಪಡೆದಿದ್ದಾರೆ.
ಆಶ್ನಾ ಸೋಶಿಯಲ್ ವರ್ಕ್ ಕೂಡ ಮಾಡುತ್ತಿರುತ್ತಾರೆ. ಇವರು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ NGO ಜೊತೆ ಕಾರ್ಯ ನಿರ್ವಹಿಸಿದ್ದಾರೆ.
ಆಶ್ನಾ ಉತ್ತರ ಪ್ರದೇಶದ ಹಾಪುಡ್ ಜಿಲ್ಲೆಯ ಪಿಲಖುವಾ ಗ್ರಾಮದಲ್ಲಿ ನೆಲೆಸಿದ್ದಾರೆ.
ಆಶ್ನಾ ಚೌಧರಿ UPSC ಯಲ್ಲಿ ತೇರ್ಗಡೆ ಹೊಂದಲು ಯಾವುದೇ ಕೋಚಿಂಗ್ ಕ್ಲಾಸ್‌ಗೂ ಹೋಗಿಲ್ಲ. ಬದಲಾಗಿ ಇವರು ತಮ್ಮ ಕಠಿಣ ಪರಿಶ್ರಮ ಮತ್ತು ಗುರಿ ತಲುಪುವ ಆಶಯದೊಂದಿಗೆ ಎಲ್ಲವನ್ನು ಸಾಧಿಸಿದ್ದಾರೆ.
ಆಶ್ನಾ ಚೌಧರಿ ಸ್ನಾತ್ತಕೋತರ ಪದವಿಯ ಜೊತೆ ಜೊತೆಗೆ ಪ್ರತಿದಿನ 6 ರಿಂದ 8 ಗಂಟೆಯವರೆಗೆ UPSC ಗಾಗಿ ತಯಾರಿ ನಡೆಸುತ್ತಿದ್ದರು.
ಆಶ್ನಾ ಚೌಧರಿ ತಂದೆ ಡಾ ಅಜೀತ್ ಚೌಧರಿ ಸರ್ಕಾರಿ ಯುನಿವರ್ಸಿಟಿಯ ಪ್ರೊಫೆಸರ್ ಆಗಿದ್ದಾರೆ. ಇವರ ತಾಯಿ ಇಂದು ಸಿಂಹ.
ತಮ್ಮ ಕೇಡರ್ ಮತ್ತು ಪೋಸ್ಟ್‌ಗಾಗಿ ಕಾಯುತ್ತಿರುವ ಆಶ್ನಾ ಚೌಧರಿ ಯಶಸ್ಸಿನ ಸೂತ್ರ ಅಂದ್ರೆ ಯಾವತ್ತೂ ಗಿವ್ ಅಪ್ ಮಾಡಬೇಡಿ.