ಪೀರಿಯೆಡ್ಸ್ ಪ್ರಕೃತಿ ಸಹಜವಾದರೂ ಹೆಣ್ಣು ಮಕ್ಕಳಿಗೆ ಕಿರಿಕಿರಿ ತಪ್ಪಿದ್ದಲ್ಲ. ಅದಕ್ಕಾಗಿ ಕಂಡುಕೊಂಡ ಸ್ಯಾನಿಟರಿ ಪ್ಯಾಡ್‌ಗಳು, ಟ್ಯಾಂಪೊನ್‌ಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ.
Image credits: others
ದೀರ್ಘಕಾಲ ಬಳಸಬಹುದು
ಮೆನ್‌ಸ್ಟ್ರುವಲ್ ಕಪ್ ಕೇರ್‌ಫ್ರೀ ಪಿರಿಯಡ್ಸ್‌ನಲ್ಲಿ ಬಳಸಲು ಅತ್ಯುತ್ತಮವಾಗಿದೆ. ಒಂದೇ ಮೆನ್‌ಸ್ಟ್ರುವಲ್ ಕಪ್‌ನ್ನು ಸುಮಾರು 10 ವರ್ಷದ ವರೆಗೂ ಬಳಸಬಹುದು.
Image credits: others
ಮೂನ್‌ಕಪ್
ಪೀರಿಯಡ್ಸ್ ಕಪ್, ಮೂನ್‌ಕಪ್ ಎಂದೂ ಕರೆಯಲ್ಪಡುವ ಮೆನ್‌ಸ್ಟ್ರುವಲ್ ಕಪ್ ಋತುಸ್ರಾವವನ್ನು ಶೇಖರಿಸಿಕೊಳ್ಳುವ ಸಿಲಿಕಾನ್ ರಬ್ಬರ್ ಬಟ್ಟಲಿನಾಕಾರದ ಸಾಧನ.
Image credits: others
ಆರೋಗ್ಯಕ್ಕೆ ಹಾನಿಯಿಲ್ಲ
ಟ್ಯಾಂಪೊನ್, ಸ್ಯಾನಿಟರಿ ಪ್ಯಾಡ್‌ನಲ್ಲಿರುವ ಹಾಗೆ ಯಾವುದೇ ರಾಸಾಯನಿಕಗಳು ಇಲ್ಲದಿರುವುದರಿಂದ ಆರೋಗ್ಯಕ್ಕೆ ಹಾನಿ ಇಲ್ಲ.
Image credits: others
ಅಲರ್ಜಿಯ ಸಮಸ್ಯೆ ಕಾಡಲ್ಲ
ಪ್ಯಾಡ್ ಟ್ಯಾಂಪೊನ್‌ಗಳಿಂದ ಉಂಟಾಗುವ ರಗಳೆಗಳಾದ ತುರಿಕೆ, ವಾಸನೆ, ಅಲರ್ಜಿಯ ಗೋಳುಗಳಿಗೆ ಈ ಕಪ್‌ಗಳ ಬಳಕೆಯಿಂದ ಬೈ ಹೇಳಬಹುದು.
Image credits: others
ಕಪ್ ತೊಳೆದು ಬಳಸಬಹುದು
ಮೊದಲು ಬಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಬಳಸಿದ ನಂತರ ಹೊರತೆಗೆದು ಶೇಖರಣೆಗೊಂಡ ಸ್ರಾವವನ್ನು ಚೆಲ್ಲಬೇಕು, ನಂತರ ಇದನ್ನು ಶುಚಿಗೊಳಿಸಿ ಮತ್ತದೇ ಕಪ್‌ನ್ನು ಉಪಯೋಗಿಸಬಹುದು.
Image credits: others
ಪರಿಸರ ಸ್ನೇಹಿ
10 ವರ್ಷಗಳ ಕಾಲ ಬಳಕೆಗೆ ಬರುವ ಒಂದು ಮೆನ್‌ಸ್ಟ್ರುವಲ್ ಕಪ್ ಪರ್ಸ್ ಹಾಗೂ ಪರಿಸರ ಸ್ನೇಹಿ. ಯೋಗಾಭ್ಯಾಸ, ಈಜು, ಕ್ರೀಡೆ ಯಾವುದೇ ಟೆನ್ಶನ್ ಇಲ್ಲದೆ ಭಾಗವಹಿಸಲು ಬೆಸ್ಟ್.