Lucky Bamboo ಕಡಿಮೆ ಕಾಳಜಿಯಿಂದಲೇ ಸುಂದರವಾಗಿ ಬೆಳೆಯುವ ಜನಪ್ರಿಯ ಒಳಾಂಗಣ ಸಸ್ಯವಾಗಿದೆ. ಇದು ಮಣ್ಣು ಹಾಗೂ ನೀರು ಎರಡರಲ್ಲೂ ಸುಲಭವಾಗಿ ಬೆಳೆಯುವ ಗುಣ ಹೊಂದಿದೆ.
ಸರಿಯಾದ ಆರೈಕೆ ಇಲ್ಲದಿದ್ದರೆ ಈ ಸಸ್ಯವೂ ಒಣಗಲು ಅಥವಾ ಹಳದಿ ಬಣ್ಣಕ್ಕೆ ತಿರುಗಲು ಸಾಧ್ಯ. ಆದ್ದರಿಂದ ಲಕ್ಕಿ ಬ್ಯಾಂಬೂ ಬೆಳೆಸುವಾಗ ಕೆಲ ಸಾಮಾನ್ಯ ತಪ್ಪುಗಳನ್ನು ತಪ್ಪಿಸುವುದು ಅತ್ಯಂತ ಅಗತ್ಯ.
ಸಸ್ಯಕ್ಕೆ ಪರೋಕ್ಷ ಸೂರ್ಯನ ಬೆಳಕು ಅತ್ಯಂತ ಸೂಕ್ತ. ನೇರ ಸೂರ್ಯನ ಬೆಳಕಿಗೆ ಇಟ್ಟರೆ ಎಲೆಗಳು ಸುಡುವ ಸಾಧ್ಯತೆ ಇದೆ. ಕಿಟಕಿಯ ಬಳಿ ನೇರ ಬೆಳಕು ಬೀಳದಂತಹ ಸ್ಥಳದಲ್ಲಿ ಇಡಬೇಕು. ಅತಿಯಾಗಿ ಕತ್ತಲಾದ ಸ್ಥಳದಲ್ಲೂ ಇಡಬಾರದು.
ನೀರು ಸ್ವಚ್ಛವಾಗಿರಬೇಕು. ರಾಸಾಯನಿಕ ಇರೋ ನೀರು ಬಳಸುವುದನ್ನು ತಪ್ಪಿಸಿ. ಸಾಧ್ಯವಾದರೆ ಫಿಲ್ಟರ್ ನೀರು ಅಥವಾ ಒಂದು ರಾತ್ರಿ ಇಟ್ಟು ತಂಪಾದ ನೀರನ್ನು ಬಳಸಿ. ನೀರಿನಲ್ಲಿ ಕ್ಲೋರಿನ್ ಅಧಿಕವಾಗಿದ್ದರೆ ಸಸ್ಯಕ್ಕೆ ಹಾನಿ.
ಅತಿಯಾಗಿ ನೀರು ಹಾಕುವುದು ದೊಡ್ಡ ತಪ್ಪು. ಇದರಿಂದ ಬೇರುಗಳು ಕೊಳೆತು ಸಸ್ಯ ಸಾಯುತ್ತವೆ. ನೀರಿನಲ್ಲಿ ಬೆಳೆಸುವಾಗ ಬೇರುಗಳಷ್ಟು ಮಾತ್ರ ನೀರು ಇರಬೇಕು. ಮಣ್ಣಿನಲ್ಲಿ ಬೆಳೆಸುವಾಗ ಮಣ್ಣು ಸ್ವಲ್ಪ ಒದ್ದೆಯಾಗಿರುವಷ್ಟು ಸಾಕು.
ಸಸ್ಯವು ಅತಿಯಾದ ಚಳಿ ಅಥವಾ ಅತಿಯಾದ ಶಾಖವನ್ನು ಸಹಿಸುವುದಿಲ್ಲ. ಏರ್ ಕಂಡಿಷನರ್, ಹೀಟರ್ ಅಥವಾ ಫ್ಯಾನ್‌ಗಳ ನೇರ ಗಾಳಿಗೆ ಸಸ್ಯವನ್ನು ಇಡಬಾರದು. ಸಾಮಾನ್ಯ ಕೊಠಡಿ ತಾಪಮಾನದಲ್ಲೇ ಈ ಸಸ್ಯ ಉತ್ತಮವಾಗಿ ಬೆಳೆಯುತ್ತದೆ.
ಸಸ್ಯಕ್ಕೆ ಪ್ರತಿವಾರ ಗೊಬ್ಬರ ಹಾಕುವ ಅಗತ್ಯವಿಲ್ಲ. ಅತಿಯಾದ ಗೊಬ್ಬರ ಸಸ್ಯಕ್ಕೆ ಹಾನಿಕಾರಕ. 2 ತಿಂಗಳಿಗೊಮ್ಮೆ ಸ್ವಲ್ಪ ಪ್ರಮಾಣದಲ್ಲಿ ದ್ರವ ಗೊಬ್ಬರ ಹಾಕಿದರೆ ಸಾಕು. ಗೊಬ್ಬರ ಹಾಕದಿದ್ದರೂ ಚೆನ್ನಾಗಿ ಬೆಳೆಯುತ್ತದೆ.
ಸಸ್ಯವನ್ನು ಆರೋಗ್ಯಕರವಾಗಿ ಇಡಲು ಕಾಲಕಾಲಕ್ಕೆ ಕತ್ತರಿಸುವುದು ಬಹಳ ಮುಖ್ಯ. ಹಳದಿ ಬಣ್ಣಕ್ಕೆ ತಿರುಗಿದ , ಹಾನಿಗೊಂಡ ಎಲೆಗಳನ್ನು ತೆಗೆದುಹಾಕಬೇಕು. ಇದರಿಂದ ಹೊಸ ಎಲೆಗಳು ಬೆಳೆಯುತ್ತದೆ ಮತ್ತು ಸದೃಢವಾಗಿ ಕಾಣಿಸುತ್ತದೆ.
ಬ್ಯಾಂಬೂ ಬೆಳೆಸುವ ಪಾತ್ರೆಯಲ್ಲಿ ನೀರು ಎಕ್ಸಿಟ್ ವ್ಯವಸ್ಥೆ ಇರಬೇಕು.ನೀರು ನಿಲ್ಲುವ ಪಾತ್ರೆಯಲ್ಲಿ ಬೆಳೆಸಿದರೆ ಬೇರುಗಳು ಕೊಳೆಯುವ ಸಾಧ್ಯತೆ ಹೆಚ್ಚು. ಗಾಜಿನ ಪಾತ್ರೆ ಬಳಸುವಾಗ ನೀರಿನ ಮಟ್ಟ ನಿಯಮಿತವಾಗಿ ಪರಿಶೀಲಿಸಬೇಕು.
ಲಕ್ಕಿ ಬ್ಯಾಂಬೂ ಸಸ್ಯಕ್ಕೆ ಹೆಚ್ಚು ಶ್ರಮ ಬೇಕಾಗಿಲ್ಲ. ಸ್ವಲ್ಪ ಕಾಳಜಿ, ಸರಿಯಾದ ಬೆಳಕು, ಸ್ವಚ್ಛ ನೀರು ಮತ್ತು ನಿಯಮಿತ ಗಮನ ನೀಡಿದರೆ ಈ ಸಸ್ಯ ಮನೆ ಅಥವಾ ಕಚೇರಿಯನ್ನು ಹಸಿರು ಮತ್ತು ಆಕರ್ಷಕವಾಗಿರಿಸುತ್ತದೆ.
ಲಕ್ಕಿ ಬ್ಯಾಂಬೂ ಮಣ್ಣು ಮತ್ತು ನೀರು ಎರಡರಲ್ಲೂ ಸುಲಭವಾಗಿ ಬೆಳೆಯುವ ಸಸ್ಯವಾಗಿದೆ. ಮೇಲ್ಕಂಡ ತಪ್ಪುಗಳನ್ನು ತಪ್ಪಿಸಿ, ಸರಿಯಾದ ಆರೈಕೆ ನೀಡಿದರೆ ಲಕ್ಕಿ ಬ್ಯಾಂಬೂ ವರ್ಷಗಳ ಕಾಲ ಚೆನ್ನಾಗಿ ಬೆಳೆಯುತ್ತದೆ.