Kannada

ಸಣ್ಣ ಭಾಗಗಳಾಗಿ ವಿಭಜಿಸಿ

ದೊಡ್ಡ ಪಠ್ಯ ಅಥವಾ ಅಧ್ಯಾಯವನ್ನು ಒಮ್ಮೆಲೇ ಓದುವ ಬದಲು ಅದನ್ನು ಸಣ್ಣ ಭಾಗಗಳಾಗಿ ವಿಭಜಿಸಿ. ಇದು ನಿಮ್ಮ ಮೆದುಳಿಗೆ ಮಾಹಿತಿಯನ್ನು ಸುಲಭವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

Kannada

ಚಿತ್ರಗಳ ರೂಪದಲ್ಲಿ ಕಲ್ಪಿಸಿಕೊಳ್ಳಿ

ಚಿತ್ರಗಳ ರೂಪದಲ್ಲಿ ಕಷ್ಟಕರವಾದ ಪದಗಳು ಅಥವಾ ಪಠ್ಯಗಳನ್ನು ಕಲ್ಪಿಸಿಕೊಳ್ಳಿ. ಮೆದುಳು ಅಕ್ಷರಗಳಿಗಿಂತ ವೇಗವಾಗಿ ಉದ್ದಗಿರುವ ಚಿತ್ರಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತೆ.

Image credits: Getty
Kannada

ಗಟ್ಟಿಯಾಗಿ ಓದಿ

ಪ್ರಮುಖ ಅಂಶಗಳನ್ನು ಗಟ್ಟಿಯಾಗಿ ಓದಿ. ನೀವು ಓದುವುದು ನಿಮ್ಮ ಕಿವಿಗಳಲ್ಲಿ ಪ್ರತಿಧ್ವನಿಸಿದಾಗ ಅದು ನಿಮ್ಮ ಮೆದುಳಿನಲ್ಲಿ ಬಲವಾಗಿ ಅಚ್ಚೊತ್ತುತ್ತದೆ.

Image credits: stockPhoto
Kannada

ಪುಸ್ತಕ ಮುಚ್ಚಿ ನೆನಪಿಸಿಕೊಳ್ಳಿ

ಒಂದು ಭಾಗವನ್ನು ಓದಿದ ತಕ್ಷಣ ಪುಸ್ತಕ ಮುಚ್ಚಿ ಮತ್ತು ನಿಮಗೆ ನೆನಪಿರುವ ವಿಷಯದ ಬಗ್ಗೆ ಯೋಚಿಸಿ. ಇದು ನೀವು ಎಲ್ಲಿ ದುರ್ಬಲರಾಗಿದ್ದೀರಿ ಎಂಬುದುನ್ನು ತ್ವರಿತವಾಗಿ ಗುರುತಿಸಲು ಸಹಾಯ ಮಾಡುತ್ತದೆ.

Image credits: our own
Kannada

ನಿಮಗೆ ನೀವೇ ವಿವರಿಸಿಕೊಳ್ಳಿ

ನೀವು ಓದಿದ್ದನ್ನು ಬೇರೆಯವರಿಗೆ ಕಲಿಸುತ್ತಿರುವಂತೆ ನಿಮಗೆ ನೀವೇ ವಿವರಿಸಿಕೊಳ್ಳಿ. ನೀವು ಅದನ್ನು ಇತರರಿಗೆ ವಿವರಿಸಲು ಸಾಧ್ಯವಾದಾಗ ಮಾತ್ರ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ.

Image credits: Social Media
Kannada

ಸಕ್ರಿಯವಾಗಿ ಮನನ ಮಾಡಿ

ಸಕ್ರಿಯವಾಗಿ ಮನನ ಮಾಡುವ ಮೂಲಕ ಯಾವ ಅಂಶ ಮರೆಯುತ್ತಿದ್ದೀರಿ ಎಂಬುದನ್ನು ಗುರುತಿಸಬಹುದು. ಮತ್ತು ತಪ್ಪುಗಳನ್ನು ತಪ್ಪಿಸಲು ಅವುಗಳನ್ನು ಮತ್ತೊಮ್ಮೆ ಪರಿಶೀಲಿಸಬಹುದು.

Image credits: our own
Kannada

ಅಧ್ಯಯನದ ಮೇಲೆ ಮಾತ್ರ ಗಮನವಿರಲಿ

ಈ ಹದಿನೈದು ನಿಮಿಷಗಳ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲವಿಲ್ಲದೆ ಅಧ್ಯಯನದ ಮೇಲೆ ಮಾತ್ರ ಗಮನಹರಿಸಬೇಕು.

Image credits: Getty
Kannada

ಕಷ್ಟಕರವಾದ ವಿಷಯ ಕಂಪ್ಲೀಟ್ ಮಾಡಿ

ನೀವು ಈ ಜಪಾನೀಸ್‌ ಟೆಕ್ನಿಕ್ ನಿಯಮಿತವಾಗಿ ಫಾಲೋ ಮಾಡಿದ್ರೆ ಅತಿ ಕಷ್ಟಕರವಾದ ವಿಷಯ ಕಂಪ್ಲೀಟ್ ಮಾಡಬಹುದು. ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಬಹುದು. 

Image credits: Getty

​ಸಂಕ್ರಾಂತಿಗೆ ಸೂರ್ಯಕಾಂತಿಯಂತೆ ಹೊಳೆಯಿರಿ: ಈ 5 ಹಳದಿ ಸೀರೆಗಳು ನಿಮಗಾಗಿ!

15 ಹಳ್ಳಿಯ ಸೊಸೆ, ತರುಣಿಯರು ಸ್ಮಾರ್ಟ್‌ಫೋನ್ ಬಳಸುವಂತಿಲ್ಲ

ಸ್ವೀಟ್ ಬಾಕ್ಸ್‌ಗೆ ಇರುವೆ ಮುತ್ತಿಕೊಂಡ್ರೆ ಓಡಿಸಲು ಇಲ್ಲಿದೆ ಸಿಂಪಲ್ ಟ್ರಿಕ್ಸ್

ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?