ಗಿಡಗಳು ಕೆಲವೊಮ್ಮೆ ಸರಿಯಾಗಿ ಬೆಳೆಯದೆ ಕುಂಠಿತವಾಗುತ್ತವೆ. ಎಷ್ಟೇ ಗೊಬ್ಬರ ಹಾಕಿದರೂ ಫಲಿತಾಂಶ ಸಿಗದಿದ್ದಾಗ, ಕೊನೆಗೆ ಮನೆಯಲ್ಲಿರುವ 'ಡಿಸ್ಪ್ರಿನ್' ಅಥವಾ 'ಆಸ್ಪಿರಿನ್' ಮಾತ್ರೆ ಗಿಡಗಳಿಗೆ ಮರುಜೀವ ನೀಡಬಲ್ಲದು.
women Apr 08 2026
Author: Ashwini HR Image Credits:our own
Kannada
ಡಿಸ್ಪ್ರಿನ್‌ನಲ್ಲಿ ಏನಿದೆ?
ಡಿಸ್ಪ್ರಿನ್ ಮಾತ್ರೆಯಲ್ಲಿ 'ಸ್ಯಾಲಿಸಿಲಿಕ್ ಆಸಿಡ್' ಎಂಬ ಅಂಶವಿರುತ್ತದೆ. ಇದು ಗಿಡಗಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
Image credits: Freepik
Kannada
ಬಳಸುವ ವಿಧಾನ
4 ಲೀಟರ್ ನೀರಿಗೆ 1 ರಿಂದ 3 ಡಿಸ್ಪ್ರಿನ್ ಅಥವಾ ಆಸ್ಪಿರಿನ್ ಮಾತ್ರೆ ತೆಗೆದುಕೊಳ್ಳಿ. ನೀರಿನಲ್ಲಿ ಹಾಕಿ ಅದು ಸಂಪೂರ್ಣವಾಗಿ ಕರಗುವಂತೆ ಚೆನ್ನಾಗಿ ಕಲಸಿ. ಸಿದ್ಧಪಡಿಸಿದ ಈ ದ್ರಾವಣವನ್ನು ಗಿಡದ ಎಲೆಗಳ ಮೇಲೆ ಸ್ಪ್ರೇ ಮಾಡಿ.
Image credits: chat gpt
Kannada
ಗಿಡದ ವೇಗ ಹೆಚ್ಚಾಗಲು
ಗಿಡವು ಬರಗಾಲ, ಅತಿಯಾದ ಬಿಸಿಲು ಅಥವಾ ಕೀಟಗಳ ಕಾಟದಿಂದ ಬಳಲುತ್ತಿರುವಾಗ ಈ ಸ್ಯಾಲಿಸಿಲಿಕ್ ಆಸಿಡ್ ಗಿಡವನ್ನು ರಕ್ಷಿಸುತ್ತದೆ. ನಾವು ಮಾತ್ರೆಯ ರೂಪದಲ್ಲಿ ಇದನ್ನು ನೀಡಿದಾಗ ಗಿಡದ ಬೆಳವಣಿಗೆಯ ವೇಗ ಹೆಚ್ಚಾಗುತ್ತದೆ.
Image credits: Getty
Kannada
ಸರಿಯಾದ ಸಮಯ
ಮಧ್ಯಾಹ್ನದ ಬಿಸಿಲಿನಲ್ಲಿ ಇದನ್ನು ಮಾಡಬೇಡಿ. ಮುಂಜಾನೆ ಅಥವಾ ಸಂಜೆ ವೇಳೆ ಸಿಂಪಡಿಸುವುದು ಉತ್ತಮ. ಪ್ರತಿ 2 ರಿಂದ 3 ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಬಹುದು.
Image credits: GEMINI AI
Kannada
ಇದರ ಪ್ರಯೋಜನಗಳು
ಗಿಡಗಳು ವೇಗವಾಗಿ ಬೆಳೆಯುತ್ತವೆ. ರೋಗನಿರೋಧಕ ಶಕ್ತಿ ಹೆಚ್ಚಾಗಿ ಕೀಟಗಳ ಬಾಧೆ ಕಡಿಮೆಯಾಗುತ್ತದೆ. ಗಿಡಗಳಲ್ಲಿ ಹೆಚ್ಚಿನ ಹೂವು ಮತ್ತು ಹಣ್ಣುಗಳು ಬಿಡಲು ಸಹಕಾರಿಯಾಗುತ್ತದೆ.