Kannada

ಸ್ತನ ಕ್ಯಾನ್ಸರ್

ಇತ್ತೀಚಿನ ದಿನಗಳಲ್ಲಿ ಭಾರತದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಹಾಗಾಗಿ ಆರಂಭದಲ್ಲೇ ಅದನ್ನು ಪತ್ತೆ ಹಚ್ಚಿ, ಚಿಕಿತ್ಸೆ ಪಡೆಯುವುದು ತುಂಬಾನೇ ಮುಖ್ಯ.

Kannada

ಮನೆಯಲ್ಲಿಯೇ ಕ್ಯಾನ್ಸರ್ ಪತ್ತೆ ಹಚ್ಚೋದು ಹೇಗೆ?

ಪುಸ್ತಕ ಕ್ಯಾನ್ಸರ್ ಆರಂಭಿಕ ಲಕ್ಷಣಗಳನ್ನು ಪತ್ತೆ ಹಚ್ಚುವುದು ಹೇಗೆ ಎಂದು ನೀವು ಯೋಚನೆ ಮಾಡುತ್ತಿರಬಹುದು. ಮನೆಯಲ್ಲಿಯೇ ಕುಳಿತು ಕ್ಯಾನ್ಸರ್ ಲಕ್ಷಣಗಳನ್ನು ಪತ್ತೆ ಮಾಡೋದು ಹೇಗೆ ನೋಡೋಣ.

Image credits: pexels
Kannada

ದೇಹದ ಬದಲಾವಣೆ ಪರಿಶೀಲಿಸಿ

ಹೆಚ್ಚಿನ ಕ್ಯಾನ್ಸರ್ ಲಕ್ಷಣಗಳನ್ನು ಮನೆಯಲ್ಲಿಯೇ ಪತ್ತೆ ಮಾಡಬಹುದು. ಹಾಗಾಗಿ ಮಹಿಳೆಯರು ವೈದ್ಯರಲ್ಲಿ ಹೋಗಿ ಪರೀಕ್ಷೆ ನಡೆಸುವ ಮುನ್ನ ತಮ್ಮ ದೇಹದಲ್ಲಾಗುವ ಬದಲಾವಣೆ ಪರಿಶೀಲಿಸಿ.

Image credits: freepik
Kannada

ಸ್ತನಗಳ ಆಕಾರ ಗಮನಿಸಿ

ಮುಖ್ಯವಾಗಿ ಸ್ತನಗಳ ಸುತ್ತಲೂ ಉಂಟಾಗುವ ಬದಲಾವಣೆಯನ್ನು , ಸ್ತನಗಳ ಆಕಾರವನ್ನು ನೀವೇ ಗಮನಿಸಿ ಪತ್ತೆ ಹಚ್ಚೋದು ಉತ್ತಮ, ಇದರಿಂದ ನಿಮ್ಮ ಜೀವ ಉಳಿಯುವ ಸಾಧ್ಯತೆ ಕೂಡ ಇದೆ.

Image credits: pexels
Kannada

ತಿಂಗಳಿಗೊಮ್ಮೆ ಚೆಕ್ ಮಾಡಿ

ತಿಂಗಳಿಗೊಮ್ಮೆ ನೀವೇ ಪರೀಕ್ಷೆ ಮಾಡಿಕೊಳ್ಳಬಹುದು. ಪಿರಿಯಡ್ ಮುಗಿದ ಕೆಲವು ದಿನಗಳ ನಂತರ ಸ್ತನಗಳ ಊತ ಕಡಿಮೆಯಾಗಿರುತ್ತದೆ. ಈ ಸಮಯವು ತಪಾಸಣೆಗೆ ಸೂಕ್ತವಾಗಿದೆ.

Image credits: pexels
Kannada

ಕನ್ನಡಿಯ ಮುಂದೆ ನಿಂತು ಇದನ್ನ ಮಾಡಿ

ಕನ್ನಡಿಯ ಮುಂದೆ ನಿಂತು ನಿಮ್ಮ ಸ್ತನದ ಸುತ್ತಲೂ ಚರ್ಮದಲ್ಲಿ ಯಾವುದೇ ಬದಲಾವಣೆಯಾಗಿದೆಯೇ? ಸ್ತನಗಳ ಆಕಾರ ಬದಲಾಗಿದೆಯೇ ಎಂದು ಪರಿಶೀಲಿಸಿ.

Image credits: Pinterest
Kannada

ಕೈಗಳಿಂದ ಮುಟ್ಟಿ ನೋಡಿ

ನಂತರ ನಿಮ್ಮ ಬೆರಳುಗಳಿಂದ ಸ್ತನಗಳ ಮೇಲೆ ನಿಧಾನವಾಗಿ ಮುಟ್ಟಿ ನೋಡಿ. ವೃತ್ತಾಕಾರದಲ್ಲಿ ಕೈಗಳನ್ನ ಚಲಿಸಿ. ನಿಮ್ಮ ಕೈಗೆ ಗಡ್ಡೆ ಅಥವಾ ಗಟ್ಟಿಯಾದ ಭಾಗ ಸಿಗುತ್ತದೆಯೇ ಎಂದು ಪರೀಕ್ಷೆ ಮಾಡಿ

Image credits: freepik
Kannada

ಕಂಕುಳಿನ ಭಾಗವನ್ನೂ ಚೆಕ್ ಮಾಡಿ

ಕೇವಲ ಸ್ತನ ಮಾತ್ರವಲ್ಲ, ಕಂಕುಳಿನ ಭಾಗವನ್ನು ಚೆಕ್ ಮಾಡಿ . ಯಾಕೆಂದರೆ ಈ ಕ್ಯಾನ್ಸರ್ ಗೆಡ್ಡೆಗಳು ಕಂಕುಳಿನ ಭಾಗದಲ್ಲೂ ಇರುವ ಸಾಧ್ಯತೆ ಇದೆ. ಹಾಗಾಗಿ ಅಲ್ಲಿಯೂ ಚೆಕ್ ಮಾಡುವುದನ್ನು ಮರೆಯಬೇಡಿ.

Image credits: freepik
Kannada

ಭಯ ಬೀಳುವ ಅವಶ್ಯಕತೆ ಇಲ್ಲ

ನಿಮ್ಮ ದೇಹದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದರೆ ಗಾಬರಿಯಾಗಬೇಡಿ. ಯಾಕಂದರೆ ಎಲ್ಲಾ ಗೆಡ್ಡೆಗಳು ಅಪಾಯಕಾರಿ ಆಗಿರುವುದಿಲ್ಲ.

Image credits: social media
Kannada

ಪರೀಕ್ಷೆ ಮಾಡಿ ಚಿಕಿತ್ಸೆ ಪಡೆಯಿರಿ

ಹಾಗಾಗಿ ಬದಲಾವಣೆ ಕಂಡ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿ. ಅಗತ್ಯ ಚಿಕಿತ್ಸೆ ಪಡೆದುಕೊಳ್ಳಿ. ಇದರಿಂದ ಶೀಘ್ರದಲ್ಲಿ ನೀವು ಚೇತರಿಸಿಕೊಳ್ಳಬಹುದು.

Image credits: Pinterest

ದೋಸೆ ಹಂಚಿನ ಜಿಡ್ಡು ಕಲೆ ಸ್ವಚ್ಛಗೊಳಿಸಬೇಕಾ? ಇಲ್ಲಿವೆ ನೋಡಿ 7 ಸಿಂಪಲ್ ಟಿಪ್ಸ್

ವಾಶ್‌ಬೇಸಿನ್‌ನ ಹಳದಿ ಕಲೆ ತೆಗೆಯಲು ಇಲ್ಲಿದೆ ಸೂಪರ್‌ ಟ್ರಿಕ್

Rajwadi Mehndi: ಹಬ್ಬಕ್ಕೆ ಟ್ರೈ ಮಾಡಿ 7 ರಜ್ವಾಡಿ ಮೆಹೆಂದಿ ಡಿಸೈನ್ಸ್, ಕೈ ತುಂಬಾ ಹಾಕಿದ್ರೆ ಮಹಾರಾಣಿ ಲುಕ್!

ಕರಿಬೇವು ಗಿಡಕ್ಕೆ 15 ದಿನಕ್ಕೊಮ್ಮೆ ಇದನ್ನು ಹಾಕಿ ಸಾಕು, ಕಾಡಿನಂತೆ ಕಾಣುತ್ತೆ