ಆದಿತ್ಯ ಧರ್ ನಿರ್ಮಾಣದ ಗೂಢಾಚಾರಿಕೆ ಕಥೆಯುಳ್ಳ ‘ಧುರಂಧರ್’ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಕಲೆಕ್ಷನ್ ಕೂಡ ಸಖತ್ತಾಗಿದೆ. ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ನಾಲ್ಕನೇ ಚಿತ್ರವಾಗಿದೆ.
ರಣವೀರ್ ಸಿಂಗ್ ನಟನೆಯ 'ಧುರಂಧರ್'ನಲ್ಲಿ ಮೊದಲ ಫ್ರೇಮ್‌ನಿಂದ ಕೊನೆಯವರೆಗೆ ಪ್ರಾಬಲ್ಯ ಸಾಧಿಸಿದ ನಾಯಕರಲ್ಲಿ ಅಕ್ಷಯ್ ಖನ್ನಾ ಕೂಡ ಒಬ್ಬರು. ಅವರ ಕ್ರೇಜ್ ಎಷ್ಟರ ಮಟ್ಟಿಗಿದೆ ಎಂಬುದಕ್ಕೆ ಈ ಮೆಹಂದಿ ಡಿಸೈನ್ ಸಾಕ್ಷಿ.
Image credits: priya_mehndi_art__Instagram
Kannada
ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿ
ಸೆಪ್ಟೆಂಬರ್ 5ರಂದು ಬಿಡುಗಡೆಯಾದ ‘ಧುರಂಧರ್’ನಲ್ಲಿ ಅಕ್ಷಯ್ ಖನ್ನಾ ರೆಹಮಾನ್ ಡಕಾಯಿತ್ ಪಾತ್ರ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದೆ.
Image credits: priya_mehndi_art__Instagram
Kannada
ಮೆಹಂದಿ ಡಿಸೈನ್ ಕೂಡ ಟ್ರೆಂಡ್
ಸದ್ಯ ಅಕ್ಷಯ್ ಖನ್ನಾ ಸ್ಟೈಲ್, ಅಭಿನಯ, ನೃತ್ಯ ವೈರಲ್ ಆಗಿರುವುದರ ಜೊತೆಗೆ ಮೆಹಂದಿ ಡಿಸೈನ್ ಕೂಡ ಟ್ರೆಂಡ್ ಆಗಿದೆ.
Image credits: priya_mehndi_art__Instagram
Kannada
ಸಾರ್ವತ್ರಿಕವಾಗಿ ಪ್ರಶಂಸೆ ವ್ಯಕ್ತ
ಪ್ರಸ್ತುತ ಅಕ್ಷಯ್ ಖನ್ನಾ ಅವರ ನಟನೆಯನ್ನ ಸಾರ್ವತ್ರಿಕವಾಗಿ ಪ್ರಶಂಸಿಸಲಾಗುತ್ತಿದೆ. ಚಿತ್ರದಲ್ಲಿ ಅವರು ಎಷ್ಟು ಚೆನ್ನಾಗಿ ಕಾಣುತ್ತಿದ್ದರೆಂದರೆ ರಣವೀರ್ ಸಿಂಗ್ ಕೂಡ ಇವರ ಮುಂದೆ ಸಪ್ಪೆಯಾಗಿದ್ದರು.
Image credits: priya_mehndi_art__Instagram
Kannada
ಅಕ್ಷಯ್ ಸ್ಟೈಲನ್ನೇ ಹೋಲುವ ಮೆಹೆಂದಿ ಡಿಸೈನ್
ಧುರಂಧರ್ ಮೂಲಕ ಅಕ್ಷಯ್ ಖನ್ನಾ ಅವರಿಗೆ ಬಹಳಷ್ಟು ಪ್ರೀತಿ ಸಿಕ್ಕಿದ್ದು, ಹೆಣ್ಮಕ್ಕಳು ಅಕ್ಷಯ್ ಸ್ಟೈಲನ್ನೇ ಹೋಲುವ ಮೆಹೆಂದಿ ಡಿಸೈನ್ ಹಾಕಿಸಿಕೊಳ್ಳುತ್ತಿದ್ದಾರೆ.
Image credits: instagram @akshaye khanna
Kannada
ಧುರಂಧರ್ ಭಾಗ-2 ರಲ್ಲಿ ಇರಲ್ಲ
ಅಕ್ಷಯ್ ಧುರಂಧರ್ ಭಾಗ-2 ರಲ್ಲಿ ಇರುವುದಿಲ್ಲ. ಮುಂದಿನ ಭಾಗದಲ್ಲಿ ಯಾರು ಇದೇ ರೀತಿಯ ಸಂಚಲನವನ್ನು ಸೃಷ್ಟಿಸುತ್ತಾರೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ.