ವಾಸ್ತು ಪ್ರಕಾರ, ಕೆಲವು ಸಸ್ಯಗಳನ್ನು ಮನೆಯಲ್ಲಿಟ್ಟರೆ ಸುಖ, ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ. ಧನಲಾಭಕ್ಕೆ ಮನಿ ಪ್ಲಾಂಟ್ ಮಾತ್ರವಲ್ಲದೆ ಇನ್ನೂ ಕೆಲವು ವಿಶೇಷ ಗಿಡಗಳಿವೆ. ಅವು ಯಾವುವು ಎಂದು ಇಲ್ಲಿ ತಿಳಿಯಿರಿ.
vaastu Jul 26 2026
Author: Ashwini HR Image Credits:chatgpt
Kannada
ತುಳಸಿ ಗಿಡ (Tulsi Plant)
ಧಾರ್ಮಿಕ ಮತ್ತು ವಾಸ್ತು ದೃಷ್ಟಿಯಿಂದ ತುಳಸಿ ಅತ್ಯಂತ ಶುಭ. ಇದನ್ನು ಉತ್ತರ, ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಿ. ಇದು ಮನೆಯಲ್ಲಿ ಪಾಸಿಟಿವ್ ಎನರ್ಜಿ ತುಂಬುತ್ತದೆ ಮತ್ತು ಆರ್ಥಿಕ ಪ್ರಗತಿಗೆ ದಾರಿಯಾಗುತ್ತದೆ.
Image credits: Our own
Kannada
ಸ್ನೇಕ್ ಪ್ಲಾಂಟ್ (Snake Plant)
ವಾಸ್ತು ಪ್ರಕಾರ ಸ್ನೇಕ್ ಪ್ಲಾಂಟ್ ಲಾಭದಾಯಕವಾಗಿದೆ. ಇದನ್ನು ದಕ್ಷಿಣ ಅಥವಾ ಆಗ್ನೇಯ ದಿಕ್ಕಿನಲ್ಲಿ ಇರಿಸುವುದರಿಂದ ಧನ-ಸಮೃದ್ಧಿ ಹೆಚ್ಚುತ್ತದೆ. ಇದು ಮನೆಯ ವಾತಾವರಣ ಹಸನಾಗಿರಿಸಿ, ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.
Image credits: Getty
Kannada
ಜೇಡ್ ಪ್ಲಾಂಟ್
ಜೇಡ್ ಪ್ಲಾಂಟನ್ನು ಮನೆಯ ಮುಖ್ಯ ದ್ವಾರದ ಬಳಿ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಿ. ಇದು ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಕುಟುಂಬದ ಸದಸ್ಯರಿಗೆ ಪ್ರತಿ ಕೆಲಸದಲ್ಲೂ ಯಶಸ್ಸನ್ನು ತಂದುಕೊಡುತ್ತದೆ.
Image credits: chatgpt
Kannada
ಬ್ಯಾಂಬೂ ಪ್ಲಾಂಟ್
ಬಿದಿರಿನ ಗಿಡವನ್ನು (Bamboo Plant) ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ಪೂರ್ವ ಅಥವಾ ಆಗ್ನೇಯ ದಿಕ್ಕಿನಲ್ಲಿ ಇರಿಸುವುದರಿಂದ ಮನೆಗೆ ಸುಖ-ಸೌಭಾಗ್ಯ ಮತ್ತು ಸಂತೋಷ ಪ್ರಾಪ್ತಿಯಾಗುತ್ತದೆ.
Image credits: Getty
Kannada
ಇಂದೇ ನಿಮ್ಮ ಮನೆಗೆ ತನ್ನಿ!
ವಾಸ್ತುವಿನಲ್ಲಿ ಈ ಸಸ್ಯಗಳಿಗೆ ವಿಶೇಷ ಮಹತ್ವವಿದೆ. ಜೀವನದಲ್ಲಿ ಸಮೃದ್ಧಿ ಮತ್ತು ಸಕಾರಾತ್ಮಕ ಬದಲಾವಣೆಗಾಗಿ ಈ ಸಸ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿ ನೋಡಿ.