ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಅವರು ʼಪ್ರೇಮಿಗಳ ದಿನ’ಕ್ಕೂ ಮುನ್ನವೇ ವಿದೇಶಕ್ಕೆ ಹಾರಿದ್ದಾರೆ. ಅಲ್ಲಿ ಅವರು ಪತಿಯ ಜೊತೆಗೆ ʼವ್ಯಾಲಂಟೈನ್ಸ್ ಡೇʼ ಆಚರಿಸಿದ್ದಾರೆ.
ಪ್ರಣೀತಾ ಸುಭಾಷ್ ಈಗ ಎರಡು ಮಕ್ಕಳ ತಾಯಿ. ಕೆಲ ತಿಂಗಳುಗಳ ಹಿಂದೆ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು.
ಲಾಕ್‌ಡೌನ್ ಸಮಯದಲ್ಲಿ ಪ್ರಣೀತಾ ಸುಭಾಷ್ ಅವರು ಉದ್ಯಮಿ ನಿತಿನ್ ರಾಜು ಜೊತೆ ಬಹಳ ಸರಳವಾಗಿ ಮದುವೆಯಾಗಿದ್ದಾರೆ. ಇನ್ನು ಇವರ ಮದುವೆ ಲೈಫ್ ಬಗ್ಗೆ ಅಷ್ಟಾಗಿ ಹೇಳಿಕೊಂಡಿಲ್ಲ.
ಈಗ ಪ್ರಣೀತಾ ಅವರು ಪತಿ ನಿತಿನ್ ಜೊತೆ ಸ್ವೀಡನ್ ದೇಶದ ಐಸ್‌ಹೋಟೆಲ್‌ಗೆ ಭೇಟಿ ಕೊಟ್ಟಿದ್ದಾರೆ. ಸ್ವೀಡನ್ ದೇಶಕ್ಕೆ ಹೋದವರೆಲ್ಲ ಇಲ್ಲಿಗೆ ಭೇಟಿ ಕೊಡಲೇಬೇಕಾದಂತಹ ಸ್ಥಳ ಇದಾಗಿದೆ.
ಐಸ್ ಹೋಟೆಲ್ ಎನ್ನುವ ಹೆಸರೇ ಹೇಳುವಂತೆ ಸಂಪೂರ್ಣ ಮಂಜುಗಡ್ಡೆ, ಹಿಮದಿಂದ ಕಟ್ಟಲಾಗಿದೆ. ಪಕ್ಕಾ ಕಲಾವಿದರನ ಕೈಚಳಕ ಇಲ್ಲಿ ಇದೆಯಂತೆ.
ಐಸ್ ಹೋಟೆಲ್ ಅತಿ ದುಬಾರಿ ಸ್ಥಳ ಎನ್ನಬಹುದು. ಒಟ್ಟೂ 55 ರೂಮ್‌ಗಳು ಇಲ್ಲಿವೆ. ಇಲ್ಲಿ ಬಂದವರು ಉಳಿಯಲೂಬಹುದು, ಅಷ್ಟರಮಟ್ಟಿಗೆ ವ್ಯವಸ್ಥೆ ಮಾಡಲಾಗಿದೆ.
ಈ ಹೋಟೆಲ್‌ನಲ್ಲಿ ಒಂದು ರಾತ್ರಿ ತಂಗಲು ರೂಮ್‌ಗೆ 41844 ರೂಪಾಯಿ ಕೊಡಬೇಕಂತೆ. ಅರವತ್ತು ಸಾವಿರ ರೂಪಾಯಿವರೆಗೆ ದರ ಏರಿಕೆಯಾದ ಇತಿಹಾಸ ಇದೆಯಂತೆ.
ಗಂಡನ ಕ್ಯಾಮೆರಾದಲ್ಲಿ ಮುದ್ದಾಗಿ ಸೆರೆಯಾದ ನಟಿ ಜ್ಯೋತಿ ರೈ
ಗಯ್ಯಾಳಿ ಹೆಂಗಸಾಗಿ ಕಾಣಿಸೋ ಅನುಪಲ್ಲವಿ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದು ಹೀಗೆ!
ಕೆಂಪು ಸೀರೆಯುಟ್ಟು Valentine's day ಗೆ ರೆಡಿಯಾಗೆ ಬಿಟ್ರು ವೈಷ್ಣವಿ ಗೌಡ
ಪ್ರಣಯ ನಗರಿಯಲ್ಲಿ ಮಗಳ ಜೊತೆ ಕಾವ್ಯಾ ಗೌಡ ಮೋಜು,ಮಸ್ತಿ