ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ರಾಣಿ ಪಾತ್ರ ಸಾಕಷ್ಟು ಜನರ ಮನಸ್ಸು ಗೆದ್ದಿದೆ.
ಈ ಧಾರಾವಾಹಿಯಲ್ಲಿ ರಾಣಿ ಪಾತ್ರದಲ್ಲಿ ನಟಿ ರಾಘವಿ ಅರಳಗುಂಡಗಿ ಅವರು ಅಭಿನಯಿಸುತ್ತಿದ್ದಾರೆ.
ಅಣ್ಣ ಶಿವು, ಕುಟುಂಬ ಅಂದರೆ ರಾಣಿಗೆ ತುಂಬ ಇಷ್ಟ. ಈಗ ರಾಣಿ ಮನುವನ್ನು ಮದುವೆಯಾಗಲು ರೆಡಿಯಾಗಿದ್ದಾಳೆ.
ಕಲಬುರಗಿ ಮೂಲದ ರಾಣಿ ಅವರಿಗೆ ನಟನೆ ಅಂದರೆ ತುಂಬ ಇಷ್ಟ. ಹೀಗಾಗಿ ಈ ರಂಗವನ್ನು ಆಯ್ಕೆ ಮಾಡಿಕೊಂಡರಂತೆ.
ಈ ಹಿಂದೆ ಸ್ಟಾರ್‌ಸುವರ್ಣ ವಾಹಿನಿಯ ಜೇನುಗೂಡು ಧಾರಾವಾಹಿಯಲ್ಲಿ ನಯನಾ ಪಾತ್ರದಲ್ಲಿ ನಟಿಸಿದ್ದರು.
ಕಲರ್ಸ್‌ಕನ್ನಡ ವಾಹಿನಿಯ ಅಂತರಪಟ ಧಾರಾವಾಹಿಯಲ್ಲಿ ದಿಶಾ ಪಾತ್ರ ಹಾಗೂ ಮಂಗಳಗೌರಿ ಧಾರಾವಾಹಿಯಲ್ಲಿ ಚಿನ್ಮಯಿ ಪಾತ್ರದಲ್ಲಿ ನಟಿಸಿದ್ದರು.
ʼಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀʼ, ʼಜಸ್ಟ್ ಮ್ಯಾರೀಡ್ʼ ಸಿನಿಮಾದಲ್ಲಿಯೂ ಅವರು ನಟಿಸಿದ್ದಾರೆ.
ಅಂದಹಾಗೆ ರಾಘವಿ ಅವರು ಎಂಎಸ್‌ಸಿ ಓದಿದ್ದಾರೆ. ಅವರಿಗೆ ನಟನೆಯಲ್ಲಿ ಮುಂದುವರೆಯುವ ಆಸೆಯಂತೆ.
ರಾಘವಿ ಅವರು ವಿಧ ವಿಧವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲು ತುಂಬ ಇಷ್ಟಪಡುತ್ತಾರೆ. ಮುಂದಿನ ದಿನಗಳಲ್ಲಿ ಅವರು ಹಿರಿತೆರೆ, ಕಿರುತೆರೆಯಲ್ಲಿ ಕಾಣಿಸಿಕೊಳ್ಳಲು ಬಯಸುತ್ತಿದ್ದಾರೆ.
ದೀಪಿಕಾ ಬಳಿಕ ಕಾಮಾಕ್ಯ ಮಂದಿರದಲ್ಲಿ ಭೂಮಿ ಶೆಟ್ಟಿ… ನಟಿಯರೆಲ್ಲಾ ಶಕ್ತಿ ಪೀಠದತ್ತ ಮುಖ ಮಾಡಿರೋದ್ಯಾಕೆ?
Bigg Boss Kannada Season 12 ಶೋಗೆ ಕಾಲಿಡಲಿರೋ ಸ್ಪರ್ಧಿಗಳ ಲಿಸ್ಟ್ ಲೀಕ್!
ಈ ಕಿರು ಚಿತ್ರಗಳು ವಿಭಿನ್ನ ಕಥೆ ಜೊತೆಗೆ ಥ್ರಿಲ್ಲಿಂಗ್ ಮನರಂಜನೆ ನೀಡುತ್ತೆ!
ಶಕ್ತಿ ದೇವತೆ ಕಾಮಾಕ್ಯ ದೇವಿಯ ಸನ್ನಿಧಿಯಲ್ಲಿ ನಟಿ ದೀಪಿಕಾ ದಾಸ್