ಕನ್ನಡ ಕಿರುತೆರೆ, ಬಿಗ್ ಬಾಸ್ ಹಾಗೂ ಸಿನಿಮಾ ಮೂಲಕ ಜನಪ್ರಿಯತೆ ಪಡೆದ ನಟಿ ದೀಪಿಕಾ ದಾಸ್.
ದೀಪಿಕಾ ದಾಸ್ ಇದೀಗ ಅಸ್ಸಾಂನ ಗುವಾಹಟಿಗೆ ಒಂದು ವಿಶೇಷ ಕಾರ್ಯದ ಸಲುವಾಗಿ ತೆರಳಿದ್ದಾರೆ.
ಗುವಾಹಟಿಯಲ್ಲಿರುವ ಶಕ್ತಿ ಪೀಠವಾದ ಕಾಮಾಕ್ಯ ದೇವಿ ಮಂದಿರಕ್ಕೆ ಭೇಟಿ ನೀಡಿದ್ದಾರೆ ದೀಪಿಕಾ ದಾಸ್.
ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿ ಅಲ್ಲಿ ಪೂಜೆ ಸಲ್ಲಿಸಿರುವ ನಟಿ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಕಾಮಾಕ್ಯ ಮಂದಿರದಲ್ಲಿ ವಾರ್ಷಿಕ ಅಂಬುಬಾಚಿ ಉತ್ಸವ ನಡೆದಿತ್ತು.
ಈ ದೇಗುಲದಲ್ಲಿ ಸತಿ ದೇವಿಯ ಯೋನಿಯನ್ನು ಪೂಜಿಸಲಾಗುತ್ತದೆ. ವರ್ಷದಲ್ಲಿ ಮೂರು ದಿನ ದೇವಿ ಋತುಮತಿಯಾಗುತ್ತಾಳೆಂಬ ನಂಬಿಕೆ ಇದೆ.
ದೇವಿಯ ಋತುಸ್ರಾವದ ಸಮಯದಲ್ಲಿ ದೇಗುಲವನ್ನು ಮೂರು ದಿನ ಮುಚ್ಚಲಾಗುತ್ತದೆ. ದೇವಿಗೆ ಇಟ್ಟಂತಹ ಋತುಸ್ರಾವವಾದ ಬಟ್ಟೆಯೇ ಇಲ್ಲಿನ ಪ್ರಸಾದವಾಗಿದೆ.
ಇದೊಂದು ಶಕ್ತಿಧಾಮವಾಗಿದ್ದು, ಇಲ್ಲಿ ಪೂಜೆ ಮಾಡಿದರೆ ಎಲ್ಲಾ ಬೇಡಿಕೆಗಳು ಈಡೇರುತ್ತೆ, ಹಾಗಾಗಿ ಸೆಲೆಬ್ರಿಟಿಗಳು ಹೆಚ್ಚಾಗಿ ಈ ದೇಗುಲಕ್ಕೆ ಭೇಟಿ ನೀಡುತ್ತಿರುತ್ತಾರೆ.
ಕಾಮಾಕ್ಯ ಮಂದಿರಕ್ಕೆ ನಟಿಯರಾದ ನಿಶ್ವಿಕಾ ನಾಯ್ಡು, ಪ್ರೇಮಾ, ಕಾವ್ಯಾ ಶಾಸ್ತ್ರೀ, ಜಾಹ್ನವಿ, ಅಷ್ಟೇ ಅಲ್ಲ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಭೇಟಿ ನೀಡು ಪೂಜೆ ಸಲ್ಲಿಸಿದ್ದಾರೆ.
ಇದೀಗ ನಟಿ ದೀಪಿಕಾ ದಾಸ್ ಕೆಂಪು ಸೀರೆಯನ್ನು ಧರಿಸಿ, ಕಾಮಾಕ್ಯ ದೇವಿಯ ಮಂದಿರದಲ್ಲಿ ಪೂಜೆ ಸಲ್ಲಿಸಿ ಬಂದಿದ್ದಾರೆ.
ಬೇಬಿ ಬಂಪ್ ಲುಕ್ ನಲ್ಲಿ 'ನನ್ನರಸಿ ರಾಧೆ' ನಟಿ ಕೌಸ್ತುಭ ಮಣಿ
ಟೆಲಿಫೋನ್ ಗೆಳತಿ ನಾನಲ್ಲ ಎನ್ನುತ್ತಾ ಬೂತ್ ಮುಂದೆ ಪೋಸ್ ಕೊಟ್ಟ ಅನುಶ್ರೀ
ಹಲವು ದಿನಗಳ ಬಳಿಕ ಕಾಣಿಸಿಕೊಂಡ ಭವ್ಯಾ ಗೌಡ… ಅಭಿಮಾನಿಗಳು ಖುಶ್
ಸ್ಟೈಲಿಶ್ ಅವತಾರದಲ್ಲಿ ನಿರೂಪಕಿ ಜಾಹ್ನವಿ…. ರಾಕ್ ಸ್ಟಾರ್ ಲುಕ್ ಸೂಪರ್