ಕನ್ನಡ ಕಿರುತೆರೆ ನಟಿ ಭೂಮಿ ಶೆಟ್ಟಿ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿದ್ದಾರೆ.
ಇತ್ತಿಚೇಗಷ್ಟೇ ದೀಪಿಕಾ ದಾಸ್ ಅವರು ಕಾಮಾಕ್ಯ ಮಂದಿರಕ್ಕೆ ಭೇಟಿ ಕೊಟ್ಟು ಬಂದಿದ್ದರು. ಇದೀಗ ಭೂಮಿ ತಮ್ಮ ಸ್ನೇಹಿತರ ಜೊತೆ ಶಕ್ತಿ ದೇವತೆಯ ದರ್ಶನ ಪಡೆದಿದ್ದಾರೆ.
ಶಕ್ತಿ ದೇವತೆ ಕಾಮಾಕ್ಯ ದೇವಿಯ ದರ್ಶನ ಪಡೆದ ಭೂಮಿ ಶೆಟ್ಟಿ ಹೆಣ್ಣಿನ ಜನ್ಮದ ಕುರಿತು ತಮ್ಮ ಮನದಾಳದ ಮಾತುಗಳನ್ನು ಬರೆದುಕೊಂಡಿದ್ದಾರೆ.
ನಾನು ಯಾಕೆ ಹೆಣ್ಣಾಗಿ ಹುಟ್ಟಿದೆ ಎಂದು ಪ್ರಶ್ನಿಸುತ್ತಿದ್ದೆ... ನನ್ನ ಚರ್ಮಕ್ಕೆ ನಾಚಿಕೆ ಪಡುತ್ತಿದ್ದೆ, ನಾನು ಎಂದಿಗೂ ಆರಿಸದ ನಿಯಮಗಳಿಂದ ಮೌನ ವಹಿಸಿದ್ದೆ.
ಆದರೆ ನಾನು ನನ್ನನ್ನು ಆರಿಸಿಕೊಂಡ ದಿನ, ನಾಚಿಕೆ ಬಿಟ್ಟು ಸರಿಯಾದ ದಾರಿಯಲ್ಲಿ ನನ್ನ ಪ್ರಯಾಣ ಪ್ರಾರಂಭವಾಯಿತು.
ಹೀಲಿಂಗ್ ನನ್ನನ್ನು ಹೊರಗೆ ಅಲ್ಲ, ಒಳಗಿನ "ಶಕ್ತಿ"ಯತ್ತ ಕೊಂಡೊಯ್ದಿತು. ಆ ಶಕ್ತಿ ನನ್ನೊಂದಿಗೆ ಪ್ರತಿ ನೆರಳು, ಪ್ರತಿ ಗಾಯದಲ್ಲೂ ನನ್ನ ಜೊತೆ ನಡೆಯಿತು.
ಕಾಮಾಕ್ಯದಲ್ಲಿ, ನಾನು ಆ ಶಕ್ತಿಯನ್ನು ಅನುಭವಿಸಿದೆ... ಮಹಿಳೆಯಾಗಿರುವುದು, ನಿಜವಾದ ಶಕ್ತಿ. ಮತ್ತು ಈ ಬಾರಿ, ನಾನು ಅದರಿಂದ ಓಡಿಹೋಗಲಿಲ್ಲ. ನಾನು ಅದಕ್ಕೆ ನಮಸ್ಕರಿಸಿದೆ.
ನಾನು ನನ್ನ ಕೈಗಳನ್ನು ಮಡಿಸಿದ ಕೈಮುಗಿದ ಕ್ಷಣ ನನ್ನ ಕಣ್ಣಲ್ಲಿ ಕಣ್ಣೀರು ಹರಿಯಿತು. ನಾನು ಶರಣಾದೆ.. ಸಾಬೀತುಪಡಿಸಲು ಏನೂ ಇಲ್ಲ, ಆದರೆ ಎಲ್ಲವನ್ನೂ ಅನುಭವಿಸಿದೆ.
ಭೂಮಿ ಶೆಟ್ಟಿ ಈ ರೀತಿಯಾಗಿ ಕಾಮಾಕ್ಯ ಮಂದಿರದಲ್ಲಿ ತಮಗಾದ ವಿಶೇಷ ಅನುಭವದ ಬಗ್ಗೆ ಮಾಹಿತಿ ನೀಡಿದ್ದಾರೆ.
ಭೂಮಿ ಶೆಟ್ಟಿ ತಮ್ಮ ಸ್ನೇಹಿತೆಯರ ಜೊತೆ ಕಾಮಾಕ್ಯ ಮಂದಿರಕ್ಕೆ ಭೇಟಿ ಕೊಟ್ಟಿದ್ದು, ಕೆಂಪು ಸೀರೆಯಲ್ಲಿ ದೈವೀಕ ಕಳೆಯಿಂದ ಕಂಗೊಳಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ನಟಿಯರು ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿ ಶಕ್ತಿ ದೇವತೆಯ ದರ್ಶನ ಪಡೆದು ಬರುತ್ತಿದ್ದಾರೆ.
Bigg Boss Kannada Season 12 ಶೋಗೆ ಕಾಲಿಡಲಿರೋ ಸ್ಪರ್ಧಿಗಳ ಲಿಸ್ಟ್ ಲೀಕ್!
ಈ ಕಿರು ಚಿತ್ರಗಳು ವಿಭಿನ್ನ ಕಥೆ ಜೊತೆಗೆ ಥ್ರಿಲ್ಲಿಂಗ್ ಮನರಂಜನೆ ನೀಡುತ್ತೆ!
ಶಕ್ತಿ ದೇವತೆ ಕಾಮಾಕ್ಯ ದೇವಿಯ ಸನ್ನಿಧಿಯಲ್ಲಿ ನಟಿ ದೀಪಿಕಾ ದಾಸ್
ಬೇಬಿ ಬಂಪ್ ಲುಕ್ ನಲ್ಲಿ 'ನನ್ನರಸಿ ರಾಧೆ' ನಟಿ ಕೌಸ್ತುಭ ಮಣಿ