Small Screen
ಕನ್ನಡ ಸಿನಿಮಾಗಳಲ್ಲಿ ಒಂದು ಕಾಲದಲ್ಲಿ ಸಖತ್ ಸ್ಟೈಲಿಶ್ ಆಗಿ ಗ್ಲಾಮರಸ್ ರೋಲ್ ಗಳ ಮೂಲಕವೇ ಸದ್ದು ಮಾಡಿದ ನಟಿ ವನಿತಾ ವಾಸು.
ಈಗಂತೂ ನಟಿ ಕನ್ನಡ ಕಿರುತೆರೆಯ ನೆಚ್ಚಿನ ವಿಲನ್ ಆಗಿ ಬದಲಾಗಿದ್ದಾರೆ. ವನಿತಾ ವಾಸು ಕಳೆದ ಹಲವು ವರ್ಷಗಳಿಂದ ಟಿವಿ ಸೀರಿಯಲ್ ಗಳಲ್ಲಿ ನಟಿಸುತ್ತಿದ್ದು, ಹೆಚ್ಚಾಗಿ ಕಾಣಿಸಿಕೊಂಡಿದ್ದು ವಿಲನ್ ಆಗಿ.
ಸದ್ಯ ವನಿತಾ ವಾಸು ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಕೂಡ ತಾಯಿಯ ರೂಪದಲ್ಲಿರುವ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಅಷ್ಟೇ ಅಲ್ಲ ಈಗ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಅನುಪಲ್ಲವಿ ಧಾರಾವಾಹಿಯಲ್ಲೂ ಸಹ ಇವರು ನೆಗೆಟಿವ್ ಪಾತ್ರದಲ್ಲಿ ಭೀಮಾಂಬಿಕ ದೇವಿಯಾಗಿ ನಟಿಸುತ್ತಿದ್ದಾರೆ.
ವನಿತಾ ವಾಸು ಒಂದರ ನಂತರ ಒಂದು ಸೀರಿಯಲ್ ಗಳಲ್ಲಿ ನಟಿಸುತ್ತಿದ್ದಾರೆ, ಇವರ ಧಾರಾವಾಹಿ, ಪಾತ್ರಗಳು ಬದಲಾದರೂ ಸಹ ನಟಿ ರೇಷ್ಮೆ ಸೀರೆ ಬಿಡುತ್ತಲೇ ಇಲ್ಲ.
ವನಿತಾ ವಾಸು ನಟಿಸಿದ ಹೆಚ್ಚಿನ ಎಲ್ಲಾ ಧಾರಾವಾಹಿಗಳನ್ನು ಇವರು ರೇಷ್ಮೆ ಸೀರೆಗಳನ್ನೇ ಧರಿಸುತ್ತಿದ್ದಾರೆ.
ಹಾಗಂತ ಇವರು ಸಾಧಾರಣ ಸೀರೆ ಉಡೋದೇ ಇಲ್ಲ, ಪಾತ್ರಗಳು ಮಾತ್ರ ಬದಲಾಗುತ್ತಿವೆ, ಆದರೆ ನಟಿ ದೊಡ್ಡ ಅಂಚಿನ ಜರತಾರಿ ರೇಷ್ಮೆ ಸೀರೆಯಲ್ಲಿ ಮಿಂಚೋದು ಮಾತ್ರ ಬದಲಾಗಿಲ್ಲ.
ವನಿತಾ ವಾಸು ಒಂದು ಸೀರಿಯಲ್ ನಲ್ಲಿ ಉಟ್ಟ ಸೀರೆಗಳನ್ನು ಮತ್ತೊಂದು ಸೀರಿಯಲ್ ನಲ್ಲಿ ಉಟ್ಟಿದ್ದು ಕಡಿಮೆಯೇ. ವಿವಿಧ ಬಣ್ಣಗಳ, ವಿವಿಧ ಡಿಸೈನ್ ಗಳುಳ್ಳ ಇವರ ರೇಷ್ಮೆ ಸೀರೆ ಕಲೆಕ್ಷನ್ ನೋಡೋಕೆ ಚೆಂದ.