Small Screen
ಕಿಶನ್ ಬಿಳಗಲಿ ಅವರು ಮೊದಲು ಡ್ಯಾನ್ಸರ್, ಆಮೇಲೆ ನಟ.
ಕಿಶನ್ ಬಿಳಗಲಿ ಅವರು ಹಿಂದಿಯ ʼಡ್ಯಾನ್ಸ್ ದೀವಾನೆʼ ರಿಯಾಲಿಟಿ ಶೋನಲ್ಲಿ ಗೆದ್ದಿದ್ದಾರೆ.
ಕಿಶನ್ ಬಿಳಗಲಿ ಡ್ಯಾನ್ಸ್ ನೋಡಿ ಮಾಧುರಿ ದೀಕ್ಷಿತ್ ಮುಂತಾದ ಬಾಲಿವುಡ್ ದಿಗ್ಗಜರೇ ಹೊಗಳಿದ್ದರು.
ಕನ್ನಡದ ʼಬಿಗ್ ಬಾಸ್ ಕನ್ನಡ ಸೀಸನ್ 7ʼ ಶೋನಲ್ಲಿ ಕಿಶನ್ ಬಿಳಗಲಿ ಅವರು ಭಾಗವಹಿಸಿದ್ದರು. ಈ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರ ಆದರು.
ದಿವ್ಯಾ ಉರುಡುಗ ಅವರ ʼನಿನಗಾಗಿʼ ಧಾರಾವಾಹಿಯಲ್ಲಿ ಕಿಶನ್ ನಟಿಸಿದ್ದಾರೆ. ಇಲ್ಲಿ ಅವರದ್ದು ನೆಗೆಟಿವ್ ಪಾತ್ರ.
ಡ್ಯಾನ್ಸ್ ಇರಬಹುದು, ಫೋಟೋಶೂಟ್ ಇರಬಹುದು. ಕಿಶನ್ ಬಿಳಗಲಿ ಅವರು ಒಂದಿಲ್ಲೊಂದು ಪ್ರಯೋಗ ಮಾಡುತ್ತಾರೆ.