Kannada

ನಟಿ ವೈಷ್ಣವಿ ಗೌಡ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ ತಮ್ಮ ಹೊಸ ಪ್ರವಾಸದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Kannada

ಪ್ರಕೃತಿ ಮಡಿಲಲ್ಲಿ ವೈಷ್ಣವಿ

ಪ್ರಕೃತಿಯ ಮಡಿಲಲ್ಲಿ ಪತಿ ಜೊತೆ ಸುತ್ತಾಡಿಕೊಂಡು, ಪ್ರಕೃತಿ ಸೊಬಗನ್ನು ಆಸ್ವಾದಿಸುತ್ತಿರುವ ವೈಷ್ಣವಿ ಅವರ ಈ ಫೋಟೊಗಳು ಎಲ್ಲರ ಗಮನ ಸೆಳೆಯುತ್ತಿವೆ.

Image credits: Instagram
Kannada

ಮೇಘಾಲಯದಲ್ಲಿ ವೈಷ್ಣವಿ ಗೌಡ

ವೈಷ್ಣವಿ ಗೌಡ ತಮ್ಮ ಪತಿ ಜೊತೆ ಮಾನ್ಸೂನ್ ಆರಂಭದಲ್ಲಿ ಪ್ರಕೃತಿ ಸೌಂದರ್ಯದ ರಮಣೀಯರ ತಾಣವಾದ ಮೇಘಾಲಯಕ್ಕೆ ತೆರಳಿದ್ದು, ಅಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

Image credits: Instagram
Kannada

ಪತಿ ಜೊತೆ ಟ್ರಾವೆಲ್ ಮೂಡಲ್ಲಿ ನಟಿ

ಹಸಿರು ಹೊಲಗಳು, ದೂರದಲ್ಲಿ ಕಾಣುವ ಬೆಟ್ಟಗಳು ಮತ್ತು ಅಸ್ತಮಿಸುತ್ತಿರುವ ಸೂರ್ಯನ ಕಂಗೊಳಿಸುವ ದೃಶ್ಯಗಳ ನಡುವೆ ಗಂಡನ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.

Image credits: Instagram
Kannada

ವೈಷ್ಣವಿ ಗೌಡ ಪೋಸ್ಟ್ ವೈರಲ್

ಫೋಟೋಗಳ ಜೊತೆಗೆ ಅವರ ಕ್ಯಾಪ್ಶನ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಭಾರತದಂತಹ ಸುಂದರ ತಾಣ ಇರುವಾಗ? ಯಾಕೆ ಎಲ್ಲರೂ ವಿದೇಶಕ್ಕೆ ಹಾರೋದು ಎಂದಿದ್ದಾರೆ ನಟಿ.

Image credits: Instagram
Kannada

ಭಾರತವಿರುವಾಗ ವಿದೇಶ ಯಾಕೆ?

ನಮ್ಮ ಭಾರತವೇ ಎಲ್ಲವನ್ನೂ ಹೊಂದಿರುವಾಗ ಜನರು ಸಾವಿರಾರು ಮೈಲುಗಳಷ್ಟು ದೂರ ವಿದೇಶಗಳಿಗೆ ಪ್ರಯಾಣಿಸುವುದು ಏಕೆ ಎಂದು ನನಗೆ ಕೆಲವೊಮ್ಮೆ ಆಶ್ಚರ್ಯವಾಗುತ್ತದೆ.

Image credits: Instagram
Kannada

ಭಾರತದಲ್ಲಿ ಎಲ್ಲವೂ ಇದೆ

ನಮ್ಮ ಭಾರತದಲ್ಲೇ ಹಿಮಾಚ್ಛಾದಿತ ಪರ್ವತಗಳಿವೆ, ಸ್ವಚ್ಛವಾದ ಸರೋವರಗಳಿವೆ, ದಟ್ಟ ಕಾಡುಗಳಿವೆ, ಚಿನ್ನದಂತೆ ಹೊಳೆಯುವ ಮರುಭೂಮಿಗಳಿವೆ, ಸುಂದರ ಕಡಲತೀರಗಳಿವೆ, ಪುರಾತನ ದೇವಾಲಯಗಳಿವೆ.

Image credits: Instagram
Kannada

ಮೈಲಿ ದೂರ ಹೋಗೋದು ಯಾಕೆ?

ವೈವಿಧ್ಯಮಯ ಸಂಸ್ಕೃತಿಗಳಿವೆ ಹಾಗೂ ರುಚಿಕರವಾದ ಆಹಾರಗಳಿವೆ. ಹಾಗಿದ್ದಾಗ ಸಾವಿರಾರು ಮೈಲಿ ದೂರದ ದೇಶಗಳಿಗೆ ಏಕೆ ಹೋಗಬೇಕು?" ಎಂದು ಪ್ರಶ್ನಿಸಿದ್ದಾರೆ.

Image credits: Instagram
Kannada

ಭಾರತವನ್ನು ಎಕ್ಸ್ ಪ್ಲೋರ್ ಮಾಡಿ

ನಾನು ಭಾರತವನ್ನು ಹೆಚ್ಚು ಎಕ್ಸ್’ಪ್ಲೋರ್ ಮಾಡಿದಷ್ಟು, ಸ್ವರ್ಗವು ಯಾವಾಗಲೂ ವಿದೇಶದಲ್ಲಿ ಇರುವುದಿಲ್ಲ, ಅದು ಇಲ್ಲಿಯೇ ಇದೆ ಎಂದು ನನಗೆ ಅರಿವಾಗುತ್ತದೆ ಎಂದು ನಟಿ ಹೇಳಿದ್ದಾರೆ.

Image credits: Instagram
Kannada

ಭಾರತವೇ ಸ್ವರ್ಗ

ಭಾರತದ ಬಗ್ಗೆ ವೈಷ್ಣವಿ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಅಭಿಮಾನಿಗಳು ಸಹಮತ ವ್ಯಕ್ತಪಡಿಸಿದ್ದು, ಭಾರತವೇ ಸ್ವರ್ಗ, ನಮ್ಮ ದೇಶದ ಸೌಂದರ್ಯವನ್ನು ಇನ್ನಷ್ಟು ಎಕ್ಸ್ ಪ್ಲೋರ್ ಮಾಡಬೇಕು ಎಂದಿದ್ದಾರೆ.

Image credits: Instagram

ಕಿಶನ್ ಬಿಳಗಲಿ ತೋಳಲ್ಲಿ ಬಂಧಿಯಾದ ಕೃಷಿ ತಾಪಂಡ… ದೃಷ್ಟಿ ತೆಗೆದ ಫ್ಯಾನ್ಸ್

ಪಿಂಕ್ ಸೀರೆಯಲ್ಲಿ ಮಿಂಚಿದ ಕರ್ಣ ಸೀರಿಯಲ್ ನಟಿಗೆ ಫ್ಯಾನ್ಸ್ ಏನಂದ್ರು ಗೊತ್ತಾ?

Happy Birthday Bangari…ಐಷಾರಾಮಿ ಹೊಟೇಲಲ್ಲಿ ಕಾವ್ಯಾ ಗೌಡ ಬರ್ತ್ ಡೇ ಸೆಲೆಬ್ರೇಶನ್

ಈ ವಾರ ಅತಿ ಹೆಚ್ಚು TRP ಪಡೆದು ನಂಬರ್ 1 ಸ್ಥಾನ ಪಡೆದ ಸೀರಿಯಲ್ ಯಾವುದು?