Kannada

ಕಿಶನ್ -ಕೃಷಿ

ಜನಪ್ರಿಯ ಡ್ಯಾನ್ಸರ್, ಬಿಗ್ ಬಾಸ್ ಸ್ಪರ್ಧಿ ಹಾಗೂ ನಟ ಕಿಶನ್ ಬಿಳಗಲಿ ಮತ್ತು ನಟಿ ಕೃಷಿ ತಾಪಂಡ ಜೋಡಿಯ ರೆಟ್ರೋ ಥೀಮ್ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಪಡೆಯುತ್ತಿದೆ.

Kannada

ರೆಟ್ರೋ ಲುಕ್ ನಲ್ಲಿ ಕಿಶನ್ ಮತ್ತು ಕೃಷಿ

ರೆಟ್ರೋ ಲುಕ್ ನಲ್ಲಿ ಕೃಷಿ ಮತ್ತು ಕಿಶನ್ ಜೋಡಿ ಸಖತ್ ಆಗಿ ಮಿಂಚುತ್ತಿದ್ದು, ಇಬ್ಬರ ಮುದ್ದಾದ ಪೋಸ್ ಗಳು ಸೂಪರ್ ಆಗಿದ್ದು, ಇಬ್ಬರ ಕೆಮೆಸ್ಟ್ರಿ ಸಖತ್ ಆಗಿ ವರ್ಕ್ ಔಟ್ ಆಗಿದೆ.

Image credits: Instagram
Kannada

ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಜೋಡಿ

ಮೈಸೂರಿನ ಸೊಬಗಿನ ಹಿನ್ನಲೆಯಲ್ಲಿ ಸೆರೆಹಿಡಿದಿರುವ ಈ ಚಿತ್ರಗಳಲ್ಲಿ ಕಿಶನ್ ಬಿಳಿ ಬಣ್ಣದ ರೆಟ್ರೋ ಶೈಲಿಯ ಉಡುಪಿನಲ್ಲಿ ಮಿಂಚಿದ್ದರೆ, ಕೃಷಿ ಗಾಢ ಕಂದು ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

Image credits: Instagram
Kannada

ಮುದ್ದಾದ ಫೋಟೊ ಶೂಟ್

ದೊಡ್ಡ ಎಲೆಯನ್ನು ಛತ್ರಿಯಂತೆ ಹಿಡಿದುಕೊಂಡು ಮಳೆಯ ಹನಿಗಳ ನಡುವೆ ನಗುತಿರುವ ಈ ಜೋಡಿಯ ಮುದ್ದಾದ ಫೋಟೊಗಳು ಸಿನೆಮಾ ದೃಶ್ಯವನ್ನೇ ನೆನಪಿಸುತ್ತವೆ.

Image credits: Instagram
Kannada

ಕಿಶನ್ ತೋಳಲ್ಲಿ ಕೃಷಿ ಬಂಧಿ

ಕಿಶನ್ ತೋಳಲ್ಲಿ ಕೃಷಿ ಬಂಧಿಯಾಗಿರುವ ಫೋಟೊಗಳು, ಆ ಅಪ್ಪುಗೆ, ಸೆರಳು ಹಿಡಿದ ರೀತಿ ಇವೆಲ್ಲವೂ ರೆಟ್ರೋ ಕಾಲದ ಮಧುರ ಪ್ರೀತಿಯ ಅಮೃತವನ್ನೆ ಸುರಿದಂತೆ ಕಾಣಿಸುತ್ತಿದೆ.

Image credits: Instagram
Kannada

ರೆಟ್ರೋ ಲುಕ್ ಸೂಪರ್

ಫೋಟೋಶೂಟ್‌ಗೆ ರೆಟ್ರೋ ಸ್ಪರ್ಶ ನೀಡಿರುವ ವಿಂಟೇಜ್ ಕಾರು, ಮಳೆಯ ವಾತಾವರಣ, ಹೂವಿನ ಮಾರ್ಕೆಟ್, ಸ್ಕೂಟರ್ , ನೈಸರ್ಗಿಕ ಸನ್ನಿವೇಶಗಳು ಚಿತ್ರಗಳ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.

Image credits: Instagram
Kannada

ವೈರಲ್ ಆಗುತ್ತಿರುವ ಫೋಟೊಗಳು

ಕಿಶನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ "Retro frames!!" ಎಂಬ ಟೈಟಲ್ ಕೊಟ್ಟು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಜನ ಮೆಚ್ಚಿಕೊಂಡಿದ್ದಾರೆ.

Image credits: Instagram
Kannada

ಹೃದಯ ಗೆದ್ದ ರೆಟ್ರೋ ಫ್ರೇಮ್

ಕಿಶನ್ ಬಿಳಗಲಿ ಹಾಗೂ ಕೃಷಿ ತಾಪಂಡ ಅವರ ಈ ರೊಮ್ಯಾಂಟಿಕ್ ರೆಟ್ರೋ ಫ್ರೇಮ್‌ಗಳು ನೆಟ್ಟಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಅಭಿಮಾನಿಗಳು ಈ ಜೋಡಿಗೆ ದೃಷ್ಟಿ ತೆಗೆಯುತ್ತಿದ್ದಾರೆ.

Image credits: Instagram
Kannada

ಅಭಿಮಾನಿಗಳು ಫಿದಾ

ಕಿಶನ್ ಯಾವುದೇ ನಾಯಕಿಯರೊಂದಿಗೆ ಕಾಣಿಸಿಕೊಂಡರೂ ಸೂಪರ್ ಆಗಿರುತ್ತೆ, ಈ ಜೋಡಿಯಂತೂ ಮೇಡ್ ಫಾರ್ ಈಚ್ ಅದರ್ ಎನ್ನುವಂತಿದೆ ಎಂದಿದ್ದಾರೆ.

Image credits: Instagram
Kannada

ಯಾವ ಹಾಡಿನ ದೃಶ್ಯ?

ಕಿಶನ್ ಹೆಚ್ಚಾಗಿ ಹಳೆ ಹಾಡಿಗೆ ನಾಯಕಿಯರೊಂದಿಗೆ ಹೆಜ್ಜೆ ಹಾಕುತ್ತಿದ್ದು, ಇದು ಕೂಡ ಕನ್ನಡದ ಒಂದು ಹಳೆಯ ಹಾಡಿನ ವಿಡಿಯೋ ಚಿತ್ರೀಕರಣದ ತುಣುಕುಗಳಾಗಿವೆ.

Image credits: Instagram

ಪಿಂಕ್ ಸೀರೆಯಲ್ಲಿ ಮಿಂಚಿದ ಕರ್ಣ ಸೀರಿಯಲ್ ನಟಿಗೆ ಫ್ಯಾನ್ಸ್ ಏನಂದ್ರು ಗೊತ್ತಾ?

Happy Birthday Bangari…ಐಷಾರಾಮಿ ಹೊಟೇಲಲ್ಲಿ ಕಾವ್ಯಾ ಗೌಡ ಬರ್ತ್ ಡೇ ಸೆಲೆಬ್ರೇಶನ್

ಈ ವಾರ ಅತಿ ಹೆಚ್ಚು TRP ಪಡೆದು ನಂಬರ್ 1 ಸ್ಥಾನ ಪಡೆದ ಸೀರಿಯಲ್ ಯಾವುದು?

ಅಮೃತಧಾರೆ ಧಾರಾವಾಹಿ ನಟನ ಅಳಿಯ IPL ಕ್ರಿಕೆಟ್‌ ಕಾಮೆಂಟರಿ ಕೊಡ್ತಾರೆ; ಯಾರದು?