Kannada

ನಮ್ರತಾ ಗೌಡ

ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪಿಂಕ್ ಸೀರೆಯುಟ್ಟು ಸಿಂಗರಿಸಿಕೊಂಡಿರುವ ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ್ದು, ನಟಿಯ ಲುಕ್ ಗಮನ ಸೆಳೆಯುತ್ತಿದೆ.

Kannada

ಪಿಂಕ್ ಸೀರೆಯಲ್ಲಿ ಕರ್ಣ ನಟಿ

ಕರ್ಣ ಧಾರಾವಾಹಿ ನಟಿ ನಮ್ರತಾ ಗೌಡ ಪಿಂಕ್ ಬಣ್ಣದ ಸೀರೆ ಹಾಗೂ ಹಸಿರು ಬಣ್ಣದ ಬ್ಲೌಸ್ ಧರಿಸಿದ್ದು, ಅದಕ್ಕೊಪ್ಪುವಂತೆ ಹಸಿರು ಬಳೆ ಹಾಗೂ ಜ್ಯುವೆಲ್ಲರಿ ಕೂಡ ಧರಿಸಿದ್ದಾರೆ.

Image credits: Instagram
Kannada

ಟ್ರಾವೆಲ್ ಪ್ರಿಯೆ ನಮ್ರತಾ

ನಮ್ರತಾ ಗೌಡ ಟ್ರಾವೆಲ್ ಪ್ರಿಯೆಯಾಗಿದ್ದು, ಇತ್ತೀಚೆಗೆ ತಂದೆ -ತಾಯಿ ಜೊತೆ ಮಲೆನಾಡು ಟ್ರಾವೆಲ್ ಮಾಡಿ ಬಂದಿದ್ದರು. ಇದೀಗ ತಮ್ಮ ಹಳೆಯ ಸುಂದರ ಕ್ಷಣಗಳ ಫೋಟೋಗಳನ್ನು ಮೆಲುಕು ಹಾಕುತ್ತಿದ್ದಾರೆ ನಟಿ.

Image credits: Instagram
Kannada

ದೃಷ್ಟಿ ತೆಗೆಸಿಕೊಳ್ಳಿ ಎಂದ ಫ್ಯಾನ್ಸ್

ನಮ್ರತಾ ಗೌಡ ಮುದ್ದಾದ ಫೋಟೊಗೆ ಕಾಮೆಂಟ್ ಮಾಡಿರುವ ಅಭಿಮಾನಿಗಳು, ಮೇಡಂ ಬೊಂಬೆ ಥರ ಕಾಣಿಸ್ತೀರಾ. ದೃಷ್ಟಿ ತೆಗೆಸಿಕೊಳ್ಳಿ ಎಂದಿದ್ದಾರೆ. ಸೀರೆ ಸೂಪರ್ ಎಂದಿದ್ದಾರೆ ಫ್ಯಾನ್ಸ್.

Image credits: Instagram
Kannada

ಕರ್ಣ ಧಾರಾವಾಹಿಯಿಂದ ಹೊರ ಬಂದ್ರ?

ನಮ್ರತಾ ಗೌಡ ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಪಾತ್ರದಲ್ಲಿ ನಟಿಸುತ್ತಿದ್ದು, ಕರ್ಣ ಮತ್ತು ನಿಧಿ ಮದುವೆ ಎಪಿಸೋಡ್ ಬಳಿಕ ನಟಿ ಧಾರಾವಾಹಿಯಲ್ಲಿ ಕಾಣಿಸುತ್ತಿಲ್ಲ. ಸೀರಿಯಲ್ ನಿಂದ ಹೊರಬಂದ್ರ ಎನ್ನುವ ಪ್ರಶ್ನೆ ಮೂಡಿದೆ.

Image credits: Instagram
Kannada

ನಿತ್ಯಾ ಪಾತ್ರ ಎಂಥದ್ದು?

ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಸ್ವಾಭಿಮಾನದ ಹುಡುಗಿಯ ಪಾತ್ರದಲ್ಲಿ ನಟಿಸಿದ್ದು, ತಂಗಿಯ ಬೆನ್ನೆಲುಬಾಗಿ ನಿಲ್ಲುವ ಪಾತ್ರ. ಆದರೆ ಪ್ರೀತಿಯಲ್ಲಿ ಮೋಸ ಹೋಗಿ, ಕರ್ಣನ ಹೆಂಡತಿಯಾಗುವ ಪರಿಸ್ಥಿತಿಯಲ್ಲಿ ನಿಲ್ಲುವ ಪಾತ್ರ.

Image credits: Instagram
Kannada

ನಿತ್ಯಾ ತೆರೆ ಮೇಲೆ ಬರೋದು ಯಾವಾಗ?

ಕರ್ಣ ಧಾರಾವಾಹಿಯಲ್ಲಿ ನಿತ್ಯಾಳನ್ನು ವೀಕ್ಷಕರು ಮಿಸ್ ಮಾಡುತ್ತಿದ್ದು, ಮತ್ತೆ ನಿತ್ಯಾಳನ್ನು ಯಾವಾಗ ತೆರೆ ಮೇಲೆ ನೋಡೋದು ಎಂದು ವೀಕ್ಷಕರು ಕಾಯುತ್ತಿದ್ದಾರೆ.

Image credits: Instagram

Happy Birthday Bangari…ಐಷಾರಾಮಿ ಹೊಟೇಲಲ್ಲಿ ಕಾವ್ಯಾ ಗೌಡ ಬರ್ತ್ ಡೇ ಸೆಲೆಬ್ರೇಶನ್

ಈ ವಾರ ಅತಿ ಹೆಚ್ಚು TRP ಪಡೆದು ನಂಬರ್ 1 ಸ್ಥಾನ ಪಡೆದ ಸೀರಿಯಲ್ ಯಾವುದು?

ಅಮೃತಧಾರೆ ಧಾರಾವಾಹಿ ನಟನ ಅಳಿಯ IPL ಕ್ರಿಕೆಟ್‌ ಕಾಮೆಂಟರಿ ಕೊಡ್ತಾರೆ; ಯಾರದು?

ಮಾಲ್ಡೀವ್ಸ್’ನಲ್ಲಿ ‘ಕರ್ಣ’ ಸೀರಿಯಲ್ ಬ್ಯೂಟಿ ನಮೃತಾ ಗೌಡ… ಸೀರೆಯಲ್ಲಿ ಮಿಂಚಿಂಗ್