Kannada

ಶಿಶಿರ್-ಐಶ್ವರ್ಯ

ಕನ್ನಡ ಕಿರುತೆರೆಯ ಜನಪ್ರಿಯ ನಟರು ಹಾಗೂ ಬಿಗ್ ಬಾಸ್ ಸ್ಪರ್ಧಿಗಳಾದ ಶಿಶಿರ್ ಶಾಸ್ತ್ರೀ ಮತ್ತು ಐಶ್ವರ್ಯ ಸಿಂಧೋಗಿ ಮತ್ತೊಮ್ಮೆ ಜೊತೆಯಾಗಿ ವಿದೇಶಕ್ಕೆ ಹಾರಿದ್ದಾರೆ.

Kannada

ವಿಯೆಟ್ನಾಂನಲ್ಲಿ ಜೋಡಿ ಹಕ್ಕಿ

ಶಿಶಿರ್ ಮತ್ತು ಐಶ್ವರ್ಯ ಈ ಬಾರಿ ಜೊತೆಯಾಗಿ ವಿಯೆಟ್ನಾಂಗೆ ಹಾರಿದ್ದು, ಅಲ್ಲಿನ ಸುಂದರ ತಾಣಗಳಿಗೆ ಭೇಟಿ ನೀಡಿ ಸಖತ್ ಆಗಿ ಎಂಜಾಯ್ ಮಾಡಿದ್ದಾರೆ ಜೋಡಿ ಹಕ್ಕಿ.

Image credits: Instagram
Kannada

ಫೋಟೊ ಹಂಚಿಕೊಂಡ ಶಿಶಿರ್

ಇದೀಗ ಶಿಶಿರ್ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಇಬ್ಬರು ಜೊತೆಯಾಗಿ ವಿಯೆಟ್ನಾಂನಲ್ಲಿ ಜಾಲಿಯಾಗಿ ಹಾರಡುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

Image credits: Instagram
Kannada

ಒಬ್ಬರನ್ನೊಬ್ಬರು ಅರಿಯಲು ಟ್ರಾವೆಲ್

ಶಿಶಿರ್ ತಮ್ಮ ಫೋಟೊಗಳ ಜೊತೆಗೆ ‘Looking at the world, but finding each other’ ಎಂದು ಕ್ಯಾಪ್ಶನ್ ಹಾಕಿದ್ದು, ಒಬ್ಬರನ್ನೊಬ್ಬರು ಅರಿಯಲು ಜೊತೆಯಾಗಿ ಟ್ರಾವೆಲ್ ಮಾಡುತ್ತಿದ್ದಾರೆ ಎಂದಿದೆ.

Image credits: Instagram
Kannada

ಲವ್ ಮಾಡ್ತಿದ್ದಾರ ಈ ಜೋಡಿ

ಶಿಶಿರ್ ಮತ್ತು ಐಶ್ವರ್ಯ ಲವ್ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಹಲವಾರು ಪ್ರಶ್ನೆಗಳು ಬಂದಿವೆ, ಆದರೆ ಈ ಜೋಡಿ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿದ್ದು, ಫ್ಯಾನ್ಸ್ ಮಾತ್ರ ಈ ಜೋಡಿಯನ್ನು ಇಷ್ಟಪಟ್ಟಿದ್ದಾರೆ.

Image credits: Instagram
Kannada

ಬಿಗ್ ಬಾಸ್ ನಿಂದ ಆರಂಭವಾದ ಸ್ನೇಹ

ಶಿಶಿರ್ ಮತ್ತು ಐಶ್ವರ್ಯ ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಇಬ್ಬರ ನಡುವೆ ಸ್ನೇಹ ಬೆಳೆದದ್ದು ಬಿಗ್ ಬಾಸ್ ಸೀಸನ್ 11ರಲ್ಲಿ, ಇಲ್ಲಿವರೆಗೂ ಮುಂದುವರೆದಿದೆ.

Image credits: Instagram
Kannada

ಟ್ರಾವೆಲ್ ಪ್ರಿಯ ಜೋಡಿ

ಬಿಗ್ ಬಾಸ್ ನಂತರ ಈ ಜೋಡಿ ಜೊತೆಯಾಗಿ ಟ್ರಾವೆಲ್ ಮಾಡಲು ಶುರು ಮಾಡಿದ್ದು, ಕಳೆದ ಎರಡು ವರ್ಷಗಳಲ್ಲಿ, ದೇಶದ, ವಿದೇಶದ ಹಲವು ತಾಣಗಳಿಗೆ ಜಂಟಿಯಾಗಿ ಟ್ರಾವೆಲ್ ಮಾಡಿದ್ದಾರೆ.

Image credits: Instagram
Kannada

ಏನು ಮಾಡ್ತಿದ್ದಾರೆ ಇವರು

ಐಶ್ವರ್ಯ ಬಿಗ್ ಬಾಸ್ ಬಳಿಕ ಒಂದೆರಡು ಸೀರಿಯಲ್ ಗಳಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇನ್ನು ಶಿಶಿರ್ ಸದ್ಯ ‘ಶ್ರೀ ಗಂಧದಗುಡಿ’ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

Image credits: Instagram

ನವಿಲುಗರಿ ಕಾಂಟ್ರವರ್ಸಿ ಬಳಿಕ ಮತ್ತೊಮ್ಮೆ ಮಿಂಚಿದ ನಿವೇದಿತಾ ಗೌಡ

ಭಾರತವೇ ಸ್ವರ್ಗ, ವಿದೇಶ ಯಾಕೆ? ವೈಷ್ಣವಿ ಗೌಡ ಪೋಸ್ಟ್‌ಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ!

ಕಿಶನ್ ಬಿಳಗಲಿ ತೋಳಲ್ಲಿ ಬಂಧಿಯಾದ ಕೃಷಿ ತಾಪಂಡ… ದೃಷ್ಟಿ ತೆಗೆದ ಫ್ಯಾನ್ಸ್

ಪಿಂಕ್ ಸೀರೆಯಲ್ಲಿ ಮಿಂಚಿದ ಕರ್ಣ ಸೀರಿಯಲ್ ನಟಿಗೆ ಫ್ಯಾನ್ಸ್ ಏನಂದ್ರು ಗೊತ್ತಾ?