ಕನ್ನಡ ಕಿರುತೆರೆ ಮತ್ತು ಹಿರಿತೆರೆಯ ತಾರೆಯರು ಜೊತೆಯಾಗಿ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ, ತಾಯಿ ಚಾಮುಂಡಿಯ ದರ್ಶನ ಪಡೆದು ಬಂದಿದ್ದಾರೆ.
ನಟಿ ಮಾಳವಿಕಾ ಅವಿನಾಶ್, ನಟ ಪ್ರೇಮ್ ಹಾಗೂ ಪತ್ನಿ ಜ್ಯೋತಿ ಜೊತೆಗೆ ನಿರೂಪಕಿ ಶ್ವೇತಾ ಚೆಂಗಪ್ಪ ಜೊತೆಯಾಗಿ ಚಾಮುಂಡೇಶ್ವರಿಯ ದರ್ಶನ ಪಡೆದು ಬಂದಿದ್ದಾರೆ.
ಈ ಸ್ನೇಹ ಮತ್ತು ಬಾಂಧವ್ಯಕ್ಕೆ ದೇವಿ ಚಾಮುಡೇಶ್ವರಿಯ ಕೃಪೆ. ಕೆಲವು ಸ್ನೇಹ ಸಂಬಂಧಗಳು ಪದಗಳಿಗೂ ಮೀರಿದ್ದು ಎಂದು ಶ್ವೇತಾ ಚೆಂಗಪ್ಪಾ ಬರೆದುಕೊಂಡಿದ್ದಾರೆ.
ನಿರೂಪಕಿ ಶ್ವೇತಾ ಫೋಟೊ ಹಂಚಿಕೊಂಡು ಸರ್ವರಿಗೂ ತಾಯಿ ಚಾಮುಂಡೇಶ್ವರಿ ಒಳ್ಳೆಯದನ್ನ ಮಾಡಲಿ ಎಂದು ಬೇಡಿಕೊಂಡಿದ್ದಾರೆ.
ಮಾಳವಿಕಾ, ಪ್ರೇಮ್, ಶ್ವೇತಾ ಇವರೆಲ್ಲರೂ ಜೋಡಿ ನಂ 1 ಕಾರ್ಯಕ್ರಮದಲ್ಲಿ ಜೊತೆಯಾಗಿದ್ದರು. ಅಲ್ಲಿಂದ ಆರಂಭವಾದ ಇವರ ಸ್ನೇಹ ಇನ್ನೂ ಕೂಡ ಮುಂದುವರೆದಿದೆ.
ಸದ್ಯ ಮಾಳವಿಕಾ ಅವರ ಯಾವುದೇ ಸಿನಿಮಾಗಳ ಬಗ್ಗೆ ಮಾಹಿತಿ ಇಲ್ಲ. ಪ್ರೇಮ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಶ್ವೇತಾ ಚೆಂಗಪ್ಪ ಕಿರುತೆರೆಯಲ್ಲಿ ರಿಯಾಲಿಟಿ ಶೋ ನಿರೂಪಕಿಯಾಗಿ ಕಾಣಿಸಿಕೊಂಡು ವರ್ಷಗಳೇ ಕಳೆದಿವೆ. ಮತ್ತೆ ಯಾವಾಗ ನಿರೂಪಣೆ ಮಾಡುತ್ತಾರೆ ಎನ್ನುವ ಕುರಿತು ಮಾಹಿತಿ ಇಲ್ಲ.
ಜೀವನದಲ್ಲಿ ಫೋಕಸ್ಡ್ ಆಗಿರಬೇಕು ಅಂದ್ರೆ ಈ ಪುಸ್ತಕಗಳನ್ನ ಓದಿ
Anupama Gowdaಗೆ ಮತ್ತೆ ಲವ್ ಆಗಿದ್ಯಾ? ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ ಗೆಳೆಯ ಯಾರು?
ಒಬ್ಬಂಟಿಯಾಗಿ ಥೈಲ್ಯಾಂಡ್ ಹೊರಟ ಭವ್ಯಾ ಗೌಡಾಗೆ Indigo ಸಿಬ್ಬಂದಿಯಿಂದ ಸರ್ಪ್ರೈಸ್
ಸೀರೆಯಲ್ಲಿ ಕೊಂಚ ಹೆಚ್ಚೇ ಬೋಲ್ಡ್ ಆಗಿ ಕಾಣಿಸಿಕೊಂಡ ಇಶಿತಾ ವರ್ಷ