ಕನ್ನಡ ಕಿರುತೆರೆಯಲ್ಲಿ ಸಂಚಲನ ಮೂಡಿಸಿದ್ದ ಪೌರಾಣಿಕ ಶನಿ ಧಾರಾವಾಹಿಯಲ್ಲಿ ಶನಿಯ ತಾಯಿ ಛಾಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ನಿಖಿಲ ಸುಮನ್.
ಸೂರ್ಯ ದೇವನ ಪತ್ನಿಯಾಗಿ, ಶನಿಯ ತಾಯಿಯಾಗಿ ಅಧ್ಬುತ ಅಭಿನಯ ನೀಡಿ, ರಾಜ್ಯಾದ್ಯಂತ ಜನಮನ ಗೆದ್ದಿದ್ದ ನಟಿ.
ತಮಿಳು ಕಿರುತೆರೆಯಲ್ಲೂ ಸಖತ್ ಬ್ಯುಸಿಯಾಗಿದ್ದಾರೆ. ಇವರು ಖ್ಯಾತ ನಟಿ ರಾಧಿಕಾ ಶರತ್ ಕುಮಾರ್ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಇವರು ರಂಗಭೂಮಿ ಕಲಾವಿದೆಯಾಗಿದ್ದಾರೆ. ರಂಗಶಂಕರದಲ್ಲಿ ಹಲವಾರು ನಾಟಕಗಳಲ್ಲೂ ಪ್ರಮುಖ ಪಾತ್ರದ ಮೂಲಕ ಮಿಂಚಿದ್ದಾರೆ.
ನಿಖಿಲ ಪತಿ ಕೂಡ ಕನ್ನಡ ಸಿನಿಮಾ ಜಗತ್ತಿಗೆ ಹತ್ತಿರದವರು. ನಟ, ನಿರ್ದೇಶಕ, ಬರಹಗಾರ ಜೊತೆಗೆ ವಾಯ್ಸ್ ಆರ್ಟಿಸ್ಟ್ ಕೂಡ ಹೌದು.
ಕನ್ನಡದಲ್ಲಿ ಮಹಾಭಾರತ ಸೀರಿಯಲ್‌ನಲ್ಲಿ ಶಕುನಿ ಪಾತ್ರಕ್ಕೆ ಧ್ವನಿ ನೀಡಿದ್ದು ಸುಮನ್ ಜಾದೂಗಾರ್. ಅವರ ಮಗುವೇ… ನನ್ನ ಮಗುವೇ ಡೈಲಾಗ್ ತುಂಬಾ ಫೇಮಸ್.
ನಿಖಿಲ ಶ್ರೀನಿವಾಸ ಕಲ್ಯಾಣ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟರು. ಅದಾದ ಬಳಿಕ ಶನಿಯಲ್ಲಿ ಅವಕಾಶ ಪಡೆದು, ಸದ್ಯ ಹಿರಿತೆರೆ, ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
ಒಂದು ಮುದ್ದಾದ ಮಗುವಿಗೆ ತಾಯಿಯಾಗಿರುವ ಅಖಿಲ, ಈಗಲೂ ನಟನೆಯಲ್ಲಿ ತೊಡಗಿದ್ದು, ಇತ್ತೀಚೆಗಷ್ಟೇ ರಂಗಶಂಕರದಲ್ಲಿ ಹಯವದನ ನಾಟಕದಲ್ಲಿ ಪದ್ಮಿನಿ ಪಾತ್ರದಲ್ಲಿ ಮಿಂಚಿದ್ದರು.
ಅನುಶ್ರೀಗೆ ಬಾಲ್ಯದಲ್ಲೇ ಒಲಿದಿತ್ತು ನಿರೂಪಣಾ ಕಲೆ!
ನನ್ನ, ಭವ್ಯಾ ಬಗ್ಗೆ ಸುಮ್ ಸುಮ್ನೆ ಗಾಸಿಪ್ ಮಾಡ್ಬೇಡಿ: ಗೀತಾ ಸೀರಿಯಲ್ ಹೀರೋ
ಸಿನಿಮಾದಿಂದ ದೂರ ಉಳಿದ ಬಾಲನಟಿ ಸಿಂಧು ರಾವ್‌ಗೆ ಗಂಡು ಮಗು!
ಸೌಂದರ್ಯದಲ್ಲೂ, ಸ್ಟೈಲಲ್ಲೂ ನಂ.1 ಈ ಟಾಪ್ ಸೀರಿಯಲ್ ವಿಲನ್ ಶಾರ್ವರಿ