Small Screen

ಅನುಶ್ರೀ

ನಟಿ ನಿರೂಪಕಿ ಅನುಶ್ರೀ ಬಗ್ಗೆ ಎಲ್ಲರಿಗೂ ಗೊತ್ತಿರೋದು. ಕರ್ನಾಟಕದ ಜನಪ್ರಿಯ ನಿರೂಪಕಿ ಯಾರು ಎಂದು ಕೇಳಿದ್ರೆ, ಎಲ್ಲರೂ ಕಣ್ಣುಮುಚ್ಚಿ ಅನುಶ್ರೀ ಎನ್ನುತ್ತಾರೆ.
 

Image credits: instagram

ಹುಟ್ಟಿದ್ದೆಲ್ಲಿ?

ಅನುಶ್ರೀ ನೆಲೆ ನಿಂತಿರೋದು ಬೆಂಗಳೂರಲ್ಲಿ. ಹುಟ್ಟಿದ್ದು, ಮಂಗಳೂರಿನ ಸುರತ್ಕಲ್‌ನಲ್ಲಿ, ಅಲ್ಲಿಯೇ ಶಾಲೆ, ಕಾಲೇಜು ವಿದ್ಯಾಭ್ಯಾಸ ಮಾಡಿದ್ದು.
 

Image credits: instagram

ಪುನೀತ್ ರಾಜ್ ಕುಮಾರ್ ಅಭಿಮಾನಿ

ಪವರ್ ಸ್ಟಾರ್ ಅಪ್ಪಟ ಅಭಿಮಾನಿಯಾಗಿರುವ ಅನುಶ್ರೀ, ತಮ್ಮ ಮಾತಿನಲ್ಲಿ ಪ್ರತಿಬಾರಿಯೂ ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತಿರುತ್ತಾರೆ.
 

Image credits: instagram

ಮುದ್ದಾದ ಫ್ಯಾಮಿಲಿ

ಅನುಶ್ರೀ ಯಿ ಶಶಿಕಲಾ ಮತ್ತು ತಮ್ಮ ಅಭಿಜೀತ್ ಜೊತೆ ವಾಸವಾಗಿದ್ದಾರೆ. ತಂದೆ ಬಾಲ್ಯದಲ್ಲಿಯೇ ಇವರನ್ನ ಬಿಟ್ಟು ಹೋಗಿದ್ದರಂತೆ. 
 

Image credits: instagram

ಬಾಲ್ಯದಲ್ಲೇ ನಿರೂಪಕಿ

ಬೆಂಗಳೂರಿಗೆ ಬರೋದಕ್ಕೂ ಮುನ್ನ ಅನುಶ್ರೀ ಮಂಗಳೂರಿನಲ್ಲಿನಮ್ಮ ಟಿವಿಯಲ್ಲಿ ನಿರೂಪಕಿಯಾಗಿದ್ದರು. ಅರಳು ಹುರಿದಂತೆ ಮಾತನಾಡುವ ಇವರ ಮಾತುಗಳೇ ಇವರ ಜನಪ್ರಿಯತೆಗೆ ಕಾರಣ.
 

Image credits: instagram

ಈ ಟಿವಿಯಲ್ಲಿ ನಿರೂಪಕಿ

ಮಾತುಗಾರಿಕೆ ನೋಡಿಯೇ ಅನುಶ್ರೀಗೆ ಈ ಟಿವಿಯ ಡಿಮಾಡಂಪ್ಪೋ ಡಿಮಾಂಡ್ ಕಾರ್ಯಕ್ರಮದಲ್ಲಿ ನಿರೂಪಕಿಯಾಗೋ ಚಾನ್ಸ್, ಸಿಕ್ತು, ನಂತರ ಇಲ್ಲಿವರೆಗೂ ಇವರೇ ನಂ.1 ನಿರೂಪಕಿಯಾಗಿದ್ದಾರೆ.
 

Image credits: instagram

ಕಷ್ಟ ಪಟ್ಟು ಸಾಕಿದ ತಾಯಿ

ತಂದೆ ಅರ್ಧದಲ್ಲೇ ಬಿಟ್ಟು ಹೋದ ಮೇಲೆ ತಾಯಿ ಬೀಡಿ ಕಟ್ಟಿ ಕಷ್ಟಪಟ್ಟು ಸಾಕಿದ್ದು, ಅದೇ ಹಠದಿಂದಲೇ ಏನಾದರೂ ಸಾಧಿಸಬೇಕೆಂಬ ಛಲವೇ ಅವರೀಗ ಈ ಸ್ಥಾನದಲ್ಲಿರಲು ಕಾರಣ. 
 

Image credits: instagram

ನಟಿಯೂ ಹೌದು

ಕನ್ನಡದ ಹೆಚ್ಚಿನ ಶೋಗಳಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಇವರು, ನಟಿಯಾಗಿ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ಜೊತೆಗೆ ಡಬ್ಬಿಂಗ್ ಆರ್ಟಿಸ್ಟ್ ಸಹ ಹೌದು.

Image credits: our own

ಕನ್ನಡದ ನಂ.1 ಆ್ಯಂಕರ್ ಅನುಶ್ರೀ ಕುರಿತ ಇಂಟರೆಸ್ಟಿಂಗ್ ಸಂಗತಿ

Zee Kanandaದಲ್ಲಿ ಆ್ಯಂಕರ್ ಆಗಿರುವ ಅನುಶ್ರೀ ಜೀವನವೇ ಎಲ್ಲರಿಗೂ ಒಂದು ಸ್ಫೂರ್ತಿ.

Credits: others

ನನ್ನ, ಭವ್ಯಾ ಬಗ್ಗೆ ಸುಮ್ ಸುಮ್ನೆ ಗಾಸಿಪ್ ಮಾಡ್ಬೇಡಿ: ಗೀತಾ ಸೀರಿಯಲ್ ಹೀರೋ

ಸಿನಿಮಾದಿಂದ ದೂರ ಉಳಿದ ಬಾಲನಟಿ ಸಿಂಧು ರಾವ್‌ಗೆ ಗಂಡು ಮಗು!

ಸೌಂದರ್ಯದಲ್ಲೂ, ಸ್ಟೈಲಲ್ಲೂ ನಂ.1 ಈ ಟಾಪ್ ಸೀರಿಯಲ್ ವಿಲನ್ ಶಾರ್ವರಿ

ವೈನ್‌ಯಾರ್ಡಲ್ಲಿ ಭಾಗ್ಯಲಕ್ಷ್ಮಿ ನಟಿಯರು, ತೇರೆ ಮೇಲೆ ಮಾತ್ರ ಗೌರಮ್ಮ ಎಂದ್ರು!