ಕನ್ನಡ ಕಿರುತೆರೆ ನಟಿ ರಜಿನಿ ಇತ್ತೀಚೆಗಷ್ಟೇ ತಮ್ಮ ಬಾಯ್ ಫ್ರೆಂಡ್ ಜಿಮ್ ಟ್ರೈನರ್ ಅರುಣ್ ಗೌಡ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಇದೀಗ ಮದುವೆಯಾದ ಬಳಿಕ ಮೊದಲ ಬಾರಿ ತಮ್ಮ ಮನೆಯಲ್ಲಿ ಪತಿ ಜೊತೆ ಸತ್ಯನಾರಾಯಣ ಪೂಜೆ ಮಾಡಿದ್ದಾರೆ.
ನಟಿ ರಜಿನಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸತ್ಯನಾರಾಯಣ ಪೂಜೆಯ ಫೋಟೊ, ವಿಡಿಯೋ ರೀಲ್ಸ್ ಮಾಡಿ ಹಂಚಿಕೊಂಡಿದ್ದಾರೆ.
ರಜಿನಿ ಮನೆಯ ಸತ್ಯನಾರಾಯಣ ಸ್ವಾಮಿ ಪೂಜೆಗೆ ಕಿರುತೆರೆ ನಟಿಯರಾದ ಸಿತಾರ, ಜಗ್ಗಪ್ಪ ಸೇರಿ ಹಲವು ನಟ-ನಟಿಯರು ಆಗಮಿಸಿದ್ದರು.
ಪೂಜೆ ರೀಲ್ಸ್ ಶೇರ್ ಮಾಡಿರುವ ರಜಿನಿ ಸತ್ಯನಾರಾಯಣ ಸ್ವಾಮಿ ಎಲ್ಲರಿಗು ಒಳ್ಳೆದು ಮಾಡಲಿ ಎಂದು ಎಲ್ಲರಿಗೂ ಶುಭ ಹಾರೈಸಿದ್ದಾರೆ.
ರಜಿನಿ, ‘ಅಮೃತವರ್ಷಿಣಿ’, 'ಆತ್ಮ ಬಂಧನ', 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇದೀಗ 'ನೀ ಇರಲು ಜೊತೆಯಲಿ' ಸೀರಿಯಲ್ ನಲ್ಲಿ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ನಟಿ ರಜಿನಿ 'ಅಂಬುಜ', 'ಅಸುರನ ಕೈಯಲ್ಲಿ ಪಾರಿಜಾತ', 'ಡವ್ ಮಂಜ', 'ಜೈ ಕರ್ನಾಟಕ' ಸಿನಿಮಾಗಳಲ್ಲೂ ನಟಿಸಿದ್ದಾರೆ.
ರಜಿನಿ ಸೋಶಿಯಲ್ ಮೀಡಿಯಾದಲ್ಲಿ ಫಿಟ್ನೆಸ್, ಕಾಮಿಡಿ ರೀಲ್ಸ್ ಮಾಡುತ್ತಾ ಇತ್ತೀಚಿನ ದಿನಗಳಲ್ಲಿ ಆಕ್ಟಿವ್ ಆಗಿದ್ದಾರೆ.
ಜೊತೆಯಾಗಿ ರೀಲ್ಸ್ ಮಾಡುತ್ತಿದ್ದ ಅರುಣ್ ಗೌಡ ಜೊತೆಗೆ ದಿಢೀರ್ ಆಗಿ ಸಪ್ತಪದಿ ತುಳಿಯುವ ಮೂಲಕ ಅಭಿಮಾನಿಗಳಿ ಶಾಕ್ ಕೊಟ್ಟಿದ್ದರು ರಜಿನಿ.
ತೆಲುಗು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಶೈನ್ ಆಗ್ತಿದ್ದಾರೆ ಕನ್ನಡದ ಮಹಾಲಕ್ಷ್ಮೀ
ಹೊಸ ವರ್ಷಕ್ಕೆ ಶ್ವೇತಾ ಪ್ರಸಾದ್ ಸ್ಪೆಷಲ್ ಗಿಫ್ಟ್… ರಾಧಾ ಮಿಸ್ ಅಂದಕ್ಕೆ ಫ್ಯಾನ್ಸ್ ಫಿದಾ
ಸೀರಿಯಲ್’ಗೆ ಎಂಟ್ರಿ ಕೊಡೋದಕ್ಕೂ ಮುನ್ನ ಏನ್ ಕೆಲ್ಸ ಮಾಡ್ತಿದ್ರು ಈ ನಟಿಯರು
ಚಳಿಗಾಲದ ಟೈಮಲ್ಲೇ ಹಾಟ್‌ಬ್ಯೂಟಿ ಆದ ರಾಧಾಮಿಸ್!