ಕನ್ನಡ ಸೀರಿಯಲ್ ನಟಿಯರು ನಟಿಯಾಗಿ ಎಂಟ್ರಿ ಕೊಡೋದಕ್ಕೂ ಮೊದಲು ಕಾರ್ಪರೇಟ್, ಮಾಡೆಲಿಂಗ್, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದರು ಅನ್ನೋದು ನಿಮಗೆ ಗೊತ್ತೆ?
ಅಣ್ಣಯ್ಯ ಸೀರಿಯಲ್ ಮತ್ತು ಗಟ್ಟಿಮೇಳದ ಫೇವರಿಟ್ ರೌಡಿ ಬೇಬಿ ನಿಶಾ ರವಿಕೃಷ್ಣನ್ ಸೀರಿಯಲ್ ಗಳಲ್ಲಿ ನಟಿಸುವ ಮುನ್ನ ಚಿಂಟು ಟಿವಿಯಲ್ಲಿ ಆಂಕರಿಂಗ್ ಮಾಡುತ್ತಿದ್ದರು.
ರಾಮಾಚಾರಿ ಸೀರಿಯಲ್ ಖ್ಯಾತಿಯ ಮೌನ ಗುಡ್ಡೆಮನೆ ಸೀರಿಯಲ್ ಗೆ ಎಂಟ್ರಿ ಕೊಡುವ ಮೊದಲು ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.
ಪಾರು ಸೀರಿಯಲ್ ಹಾಗೂ ಬಿಗ್ ಬಾಸ್ ಸೀಸನ್ 11ರ ಮೂಲಕ ಮೋಡಿ ಮಾಡಿದ ಚೆಲುವೆ ಮೋಕ್ಷಿತಾ ಪೈ ನಟಿಯಾಗೋದಕ್ಕೂ ಮೊದಲು ಟ್ಯೂಶನ್ ಹೇಳಿಕೊಡುತ್ತಿದ್ದರು.
ಗಟ್ಟಿಮೇಳದಲ್ಲಿ ಆದ್ಯಾ ಆಗಿ, ಅಮೃತಧಾರೆಯಲ್ಲಿ ಮಲ್ಲಿಯಾಗಿ ಮಿಂಚುತ್ತಿರುವ ನಟಿ ಅನ್ವಿತಾ ಸಾಗರ್ ಅದಕ್ಕೂ ಮೊದಲು ಈವೆಂಟ್ ಮ್ಯಾನೆಜ್’ಮೆಂಟ್ ನಡೆಸಿಕೊಡುತ್ತಿದ್ದರು.
ನೂರು ಜನ್ಮಕೂ ಹಾರರ್ ಸ್ಟೋರಿ ಮೂಲಕ ನಟನೆಗೆ ಎಂಟ್ರಿ ಕೊಟ್ಟ ನಟಿ ಶಿಲ್ಪಾ ಕಾಮತ್ ಬ್ಯಾಂಕ್ ಉದ್ಯೋಗಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಾಯಕಿ ಆಸಿಯಾ ಫಿರ್ದೋಸೆ ಕನ್ಯಾಕುಮಾರಿ ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟರು, ಅದಕ್ಕೂ ಮುನ್ನ ನಟಿ ಮಾಡೆಲ್ ಆಗಿದ್ದರು.
ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ದೃಷ್ಟಿಯಾಗಿ ಗಮನ ಸೆಳೆದ ನಟಿ ಅರ್ಪಿತಾ ಮೋಹಿತೆ ನಟಿಯಾಗೋದಕ್ಕೂ ಮೊದಲು ಮೇಕಪ್ ಆರ್ಟಿಸ್ಟ್ ಆಗಿ ಕರಿಯರ್ ಆರಂಭಿಸಿದ್ದರು.
ಇದೀಗ ಪ್ರಸಾರವಾಗುತ್ತಿರುವ ಯಜಮಾನ ಸೀರಿಯಲ್ ನಾಯಕಿ ಮಧುಶ್ರೀ ಭೈರಪ್ಪ ಮೊದಲು ಯೂಟ್ಯೂಬರ್ ಆಗಿದ್ದರು. ರೀಲ್ಸ್ ಮೂಲಕವೇ ನಟನೆಗೆ ಅವಕಾಶವನ್ನು ಪಡೆದುಕೊಂಡರು.
ಚಳಿಗಾಲದ ಟೈಮಲ್ಲೇ ಹಾಟ್‌ಬ್ಯೂಟಿ ಆದ ರಾಧಾಮಿಸ್!
ಈ ವರ್ಷ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡ ಸೀರಿಯಲ್ ತಾರೆಯರು!
ಕನ್ನಡದಲ್ಲಿ ಸೂಪರ್ ಹಿಟ್ ಆಗಿ ಜನಮೆಚ್ಚುಗೆ ಪಡೆದ ರಿಮೇಕ್ ಧಾರಾವಾಹಿಗಳು
ಒಂದೇ ಪ್ರಶ್ನೆ, ಅಲ್ಲೇ ಡ್ರಾ ಅಲ್ಲೇ ಬಹುಮಾನ; Rakshita Shetty ಮುಖವಾಡ ಕಳಚೋಯ್ತು