ಸಿನಿಮಾ, ಸೀರಿಯಲ್ ಗಳಲ್ಲಿ ಮಿಂಚಿದ್ದರೂ ಸಹ ಸಂಗೀತ ಶೃಂಗೇರಿ ಜನಪ್ರಿಯತೆ ಪಡೆದುಕೊಂಡಿದ್ದು ಬಿಗ್ ಬಾಸ್ ಸೀಸನ್ 10 ರಮೂಲಕ.
ಬಿಗ್ ಬಾಸ್ ನಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಆಡಿ, ಟಾಪ್ 3ಗೆ ಬಂದಿದ್ದ ಸಂಗೀತ ಶೃಂಗೇರಿ ಬಿಗ್ ಬಾಸ್ ಸಿಂಹಿಣಿ ಅಂತಾನೆ ಹೆಸರು ಪಡೆದಿದ್ದರು.
ತಮ್ಮ ಬೋಲ್ಡ್ ಮಾತು, ನಡೆಯಿಂದಾಗಿಯೇ ಸಂಗೀತ ಕನ್ನಡಿಗ ಮನ ಗೆದ್ದು, ಕರ್ನಾಟಕದ ಕ್ರಶ್ ಆಗಿದ್ದಾರೆ.
ಸೋಶಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿರುವ ಸಂಗೀತ, ಹೊಸ ಹೊಸ ಫೋಟೊ ಶೂಟ್ ಮೂಲಕ ಸುದ್ದಿಯಲ್ಲಿರುತ್ತಾರೆ.
ಇದೀಗ ಸಂಗೀತ ಹೊಸ ಫೋಟೊಗಳನ್ನು ತಮ್ಮ ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಬಿಳಿ ಬಣ್ಣದ ಸೀರೆಯುಟ್ಟು ನಟಿ ಮುದ್ದಾಗಿ ಕಾಣಿಸುತ್ತಿದ್ದಾರೆ.
ಸಂಗೀತ ಶೃಂಗೇರಿ ಸಿಂಪಲ್ ಲುಕ್ ಗೆ ಅಭಿಮಾನಿಗಳು ಮನಸೋತಿದ್ದು, ಶ್ವೇತ ಸುಂದರಿ ಎನ್ನುತ್ತಿದ್ದಾರೆ.
ಕಳೆದು ಹೋದ ಹೃದಯವೀಗ ನಿನ್ನ ನೋಡಿ ಮತ್ತೆ ಬದುಕಿದಂತಾಗಿದೆ, ಇವಳು ಗಾಂಧಾರ ಲೋಕದ ಶ್ವೇತಕನ್ಯೆಯೋ..ಈ ಭೂ ಲೋಕದ ದಂತದ ಗೊಂಬೆಯೋ ಎಂದು ಹೊಗಳಿದ್ದಾರೆ.
ಸಂಗೀತಾ ಫೋಟೊಗೆ 53 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಜನರ ಈ ಬ್ಯೂಟಿಯನ್ನು ನೋಡಿ ಕ್ರಶ್, ದೇವತೆ, ಸುಂದರಿ, ಮ್ಯಾಜಿಕ್, ಏಂಜಲ್ ಎನ್ನುತ್ತಿದ್ದಾರೆ.
ಇನ್ನು ಅಭಿಮಾನಿಗಳು ನಟಿ ಬಳಿ ಮುಂದಿನ ಸಿನಿಮಾ ಯಾವಾಗ? ನಿಮ್ಮನ್ನ ತೆರೆ ಮೇಲೆ ನೋಡಲು ಕಾಯ್ತುದ್ದೇವೆ ಎನ್ನುತ್ತಿದ್ದಾರೆ ಜನ.
ಆಫ್ರಿಕಾದ ಬುಡಕಟ್ಟು ಜನಾಂಗದ ಜೊತೆ ಇಶಿತಾ ವರ್ಷ… ವೈರಲ್ ಆಗ್ತಿವೆ ಫೋಟೊಸ್
ಮೋಕ್ಷಿತಾ ನೋಡಿ… ಯಾಕೆ ಇಷ್ಟು ಚೆಂದ ನೀನು… ಹಾಡು ನೆನಪಾಗೋದು ಗ್ಯಾರಂಟಿ
Naari in sareee… ದೀಪಿಕಾ ದಾಸ್ ನೋಡಿ ನಿನ್ನಂದಕ್ಕೆ ಸಮನಾರು ಎಂದ ಫ್ಯಾನ್ಸ್
ದೀಪಿಕಾ ದಾಸ್ ಸಿಂಪಲ್ ಟ್ರೆಡಿಶನಲ್ ಲುಕ್ ಗೆ ಮನಸೋತ ಫ್ಯಾನ್ಸ್