ಅಮೃತಧಾರೆ ಧಾರಾವಾಹಿ ನಟಿ ಇಶಿತಾ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಹೊಸ ವಿಭಿನ್ನವಾಗಿರುವ ಫೋಟೊ ಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ.
ನಟಿ ಇಶಿತಾ ವರ್ಷ ಆಫ್ರಿಕಾದ ಕೀನ್ಯಾದ ಮಸಾಯ್ ಮಾರಾ ಸಫಾರಿಗೆ ಹೋಗಿದ್ದಾಗ ತೆಗೆಸಿದಂತಹ ಫೋಟೊಗಳನ್ನು ಈವಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇಶಿತಾ ಆಫ್ರಿಕಾದ ಬುಡಕಟ್ಟು ಜನಾಂಗದ ಜೊತೆಗೆ ನಿಂತು ಪೋಸ್ ಕೊಟ್ಟಿದ್ದು, ಟ್ರೆಡಿಶನಲ್ ಹಾಗೂ ಡೇರಿಂಗ್ ಆಗಿರುವ ಈ ಫೋಟೊಗಳು ಸದ್ಯ ಇಂಟರ್ನೆಟಲ್ಲಿ ವೈರಲ್ ಆಗುತ್ತಿವೆ.
ಇಶಿತಾ ಕೇಸರಿ ಬಣ್ಣದ ಲಂಗ ಹಾಗೂ ನೀಲಿ ಬಣ್ಣದ ದಾವಣಿ ಧರಿಸಿದ್ದು, ಆಭರಣಗಳನ್ನು ಧರಿಸಿ, ಬುಡಕಟ್ಟು ಜನಾಂಗದ ಮಧ್ಯೆ ನಿಂತ ರಾಣಿಯಂತೆ ಕಾಣಿಸುತ್ತಿದ್ದಾರೆ.
ಇಶಿತಾ ಕಳೆದ ಎರಡು ವರ್ಷಗಳಿಂದ ನಟನೆ ಬಿಟ್ಟು, ಸಫಾರಿ ಮಾಡೋದ್ರಲ್ಲಿ ಹೆಚ್ಚಿನ ಸಮಯ ಕಳೆದಿದ್ದಾರೆ. ಅದರಲ್ಲೂ ವೈಲ್ಡ್ ಲೈಫ್ ಫೋಟೊಗ್ರಾಫಿ ಅಂದ್ರೆ ಇವರಿಗೆ ಬಲು ಇಷ್ಟ.
ಸರಸು ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಇಶಿತಾ ಹಲವು ಸೀರಿಯಲ್ ಗಳಲ್ಲಿ ನಟಿಸುತ್ತಿದ್ದರೂ ಸಹ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು ಅಗ್ನಿ ಸಾಕ್ಷಿಯ ಮಾಯಾ ಆಗಿ.
ಇಶಿತಾ ಇಲ್ಲಿವರೆಗೆ ಕೃಷ್ಣ ರುಕ್ಮಿಣಿ, ತಂಗಾಳಿ, ಮನಸು ಮಮತಾ ಎನ್ನುವ ಕನ್ನಡ ಸೀರಿಯಲ್ ಹಾಗೂ ಕಲ್ಯಾಣ ವೀಡು, ಕುಲದೈವಂ ಎನ್ನುವ ತಮಿಳು ಸೀರಿಯಲ್ ಗಳಲ್ಲೂ ನಟಿಸಿದ್ದಾರೆ.
ಪತ್ನಿ ಮುರುಗಾ ಜೊತೆ ರಾಜಾ- ರಾಣಿ ಸೀಸನ್ 1ರಲ್ಲಿ ಭಾಗವಹಿಸಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೇ ಹಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲೂ ನಟಿಸಿದ್ದಾರೆ.
ಸದ್ಯ ಜೀಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಿದ್ದಾರೆ.
ಡ್ಯಾನ್ಸ್ ಮಾಸ್ಟರ್ ಮುರುಗಾರನ್ನು 6 ವರ್ಷಗಳ ಕಾಲ ಪ್ರೀತಿಸಿ, 2019ರಲ್ಲಿ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಮೋಕ್ಷಿತಾ ನೋಡಿ… ಯಾಕೆ ಇಷ್ಟು ಚೆಂದ ನೀನು… ಹಾಡು ನೆನಪಾಗೋದು ಗ್ಯಾರಂಟಿ
Naari in sareee… ದೀಪಿಕಾ ದಾಸ್ ನೋಡಿ ನಿನ್ನಂದಕ್ಕೆ ಸಮನಾರು ಎಂದ ಫ್ಯಾನ್ಸ್
ದೀಪಿಕಾ ದಾಸ್ ಸಿಂಪಲ್ ಟ್ರೆಡಿಶನಲ್ ಲುಕ್ ಗೆ ಮನಸೋತ ಫ್ಯಾನ್ಸ್
ಯಾರೀ 'ಅಣ್ಣಯ್ಯ' ಧಾರಾವಾಹಿ ಪರಶು? ರಿಯಲ್ ವಿದ್ಯಾರ್ಹತೆ ಗೊತ್ತಾದ್ರೆ ಬೆರಗಾಗ್ತೀರಾ