Kannada

ಶ್ರೀರಸ್ತು ಶುಭಮಸ್ತು

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಮೆಚ್ಚಿನ ಧಾರಾವಾಹಿ ಶ್ರೀರಸ್ತು ಶುಭಮಸ್ತು. ಈ ಸೀರಿಯಲ್ ನಲ್ಲಿ ಪೂರ್ಣಿ ಪಾತ್ರ ಜನರ ಫೇವರಿಟ್. ಅದರಲ್ಲೂ ಪೂರ್ಣಿ ತನ್ನ ತಂಗಿ ದೀಪಿಕಾಗೆ ಠಕ್ಕರ್ ಕೊಡೋದನ್ನು ನೋಡೋದೆ ಚೆಂದ. 
 

Kannada

ದೀಪಿಕಾಗೆ ಪೂರ್ಣಿಯ ಪಾಠ

ಅಡುಗೆ ಕಲಿಯಲು ಬಂದ ನಿಧಿಯನ್ನು ತಡೆದ ದೀಪಿಕಾಗೆ ಅಕ್ಕ ಪೂರ್ಣಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾಳೆ. ಕಲಿಯೋ ಆಸೆ ಇದ್ದೋರನ್ನ ತಡೆಯಬಾರದು. ಶ್ರೀಮಂತಾರಾದ್ರೆ ಅಡುಗೆ ಮಾಡೋದು ತಪ್ಪಾ ಅಂತ ಕೇಳಿದ ಪೂರ್ಣಿ. 
 

Image credits: our own
Kannada

ಪೂರ್ಣಿ ರಾಕ್ ದೀಪಿಕಾ ಶಾಕ್

ಕಲಿಯುವವರಿಗೆ ವಯಸ್ಸು ಆಗಲಿ, ಅಂತಸ್ತು ಆಗಲಿ ಅಡ್ಡ ಬರಬಾರದು ಎಂದ ಪೂರ್ಣಿ, ನೀನು ಇವತ್ತು ಶ್ರೀಮಂತರ ಮನೆಗೆ ಸೊಸೆಯಾಗಿ ಬಂದಿರೋದಕ್ಕೆ ಹೆಮ್ಮೆ ಪಡ್ತಿದ್ಯೋ, ಅಹಂಕಾರ ಪಡುತ್ತಿದ್ದಿಯೋ ಗೊತ್ತಿಲ್ಲ ಅಂತಿದ್ದಾಳೆ. 
 

Image credits: our own
Kannada

ಅಡುಗೆಯಿಂದ ಶ್ರೀಮಂತಿಕೆ

ಇವತ್ತು ಈ ಮನೆಗೆ ಹೆಸರು, ಶ್ರೀಮಂತಿಕೆ, ಗೌರವ ಎಲ್ಲವೂ ತಂದು ಕೊಟ್ಟಿದ್ದು, ಮಾವ ಮಾಡುವ ಅಡುಗೆ ಎನ್ನುವ ಮೂಲಕ, ಅಡುಗೆ ಮಾಡುವ ಬಗ್ಗೆ ತಿರಸ್ಕಾರ ವ್ಯಕ್ತಪಡಿಸಿದ ದೀಪಿಕಾಗೆ ಮಾತಿನ ಏಟು ನೀಡಿದ ಪೂರ್ಣಿ. 
 

Image credits: our own
Kannada

ಶ್ರೀಮಂತಿಕೆ ಬಗ್ಗೆ ಮಾತನಾಡಲು ಯೋಗ್ಯತೆ ಬೇಕು

ಪೂರ್ಣಿ ಮಾತಿನಿಂದ ಕೋಪಗೊಂಡ ದೀಪಿಕಾ ಶ್ರೀಮಂತಿಕೆ ಬಗ್ಗೆ ಮಾತನಾಡಲು ಯೋಗ್ಯತೆ ಬೇಕು ಎನ್ನುತ್ತಾರೆ, ಅದಕ್ಕೆ ತಿರುಗೇಟು ನೀಡಿದ ಪೂರ್ಣಿ ನನ್ನ ಶ್ರೀಮಂತಿಕೆನ ನಾನು ಇನ್ನೊಬ್ಬರಿಗೆ ದಾನ ಮಾಡಿದ್ದೇನೆ ಎನ್ನುತ್ತಾಳೆ. 
 

Image credits: our own
Kannada

ಹಸಿದವರ ಹೊಟ್ಟೆ ತುಂಬಿಸೋದು

ನನಗೆ ಶ್ರೀಮಂತಿಕೆ ಬಗ್ಗೆ ವ್ಯಾಮೋಹ ಇಲ್ಲ ಎನ್ನುವ ಪೂರ್ಣಿ ನಿಜವಾದ ಶ್ರೀಮಂತಿಕೆ ಅಂದ್ರೆ ಹಸಿದೋರ ಹೊಟ್ಟೆಯನ್ನು ತುಂಬಿಸೋದು ಎನ್ನುತ್ತಾಳೆ. 
 

Image credits: our own
Kannada

ನಿಜವಾದ ಶ್ರೀಮಂತಿಕೆಯ ಬಗ್ಗೆ ಪಾಠ

ಯಾರಿಗೆಲ್ಲಾ ಹೊಟ್ಟೆ ತುಂಬ ಊಟ, ಕಣ್ಣು ತುಂಬಾ ನಿದ್ದೆ ಬರುತ್ತೋ ಅವರೇ ನಿಜವಾದ ಶ್ರೀಮಂತರು ಎನ್ನುವ ಮೂಲಕ ಶ್ರೀಮಂತಿಕೆಯ ನಿಜವಾದ ಅರ್ಥವನ್ನು ದೀಪಿಕಾಗೆ ತಿಳಿ ಹೇಳಿದ್ದಾಳೆ ಪೂರ್ಣಿ. 
 

Image credits: our own
Kannada

ನೀವೇನು ಹೇಳ್ತೀರ?

ಪೂರ್ಣಿ ಮಾತು ಅದೆಷ್ಟು ನಿಜಾ. ಆಸ್ತಿ, ಅಂತಸ್ತು ಇದ್ರು ರೋಗಗಳಿಂದಾಗಿ ಸರಿಯಾಗಿ ಊಟ ಮಾಡಲು ಸಾಧ್ಯವಾಗದೇ ಇರೋದು, ಮನೆಯಲ್ಲಿ ನೆಮ್ಮದಿ ಇಲ್ಲದೇ ಸರಿಯಾಗಿ ನಿದ್ರೆ ಮಾಡಲೂ ಸಾಧ್ಯವಾಗದ ಶ್ರೀಮಂತಿಕೆ ಯಾಕೆ ಬೇಕು ಅಲ್ವಾ? 
 

Image credits: our own

ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಗೋಲ್ಡ್‌ ಸುರೇಶ್‌ಗೆ ಬಂತು ಬಂಪರ್ ಆಫರ್!

BBK11: ಗಂಡಸರಂತೆ ಲುಂಗಿ ತೊಟ್ಟ ಭವ್ಯಾ, ಇದೆಂಥ ಅವತಾರವೆಂದು ಕಾಲೆಳೆದ ನೆಟ್ಟಿಗರು!

ಬ್ರೋ.. ಬ್ರೋ.. ಎನ್ನುತ್ತಲೇ ಲವ್ ಮಾಡಿ ಮದ್ವೆಯಾದ ಕಿರುತೆರೆ ಜೋಡಿ!

ಉಪ್ಪಿ ಡೈಲಾಗ್‌ ಹೇಳಿ ನಿವೇದಿತಾ ಗೌಡಗೆ ತಿವಿದ ನೆಟ್ಟಿಗರು!