Small Screen
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಲುಂಗಿಗೆ ಫೇಮಸ್ ಎಂದ್ರೆ ಅದು ಸಿಂಗರ್ ಹನುಮಂತ. ಅದು ಬಿಟ್ರೆ ಗೋಲ್ಡ್ ಸುರೇಶ್.
ಇದೀಗ ಮಹಿಳಾ ಮಣಿಗಳು ಕೂಡ ಬಿಗ್‌ಬಾಸ್ ಮನೆಯಲ್ಲಿ ಲುಂಗಿ ತೊಟ್ಟಿದ್ದಾರೆ.
ಕ್ಯಾಪ್ಟನ್ಸಿ ಟಾಸ್ಕ್ ಆಯ್ಕೆ ಮಾಡುವಾಗ ಭವ್ಯಾ ಗೌಡ ಲುಂಗಿ ಮತ್ತು ಶರ್ಟ್ ನಲ್ಲಿ ಮಿಂಚಿದ್ದರು.
ಜೋಡಿ ಟಾಸ್ಕ್ ಸಂದರ್ಭದಲ್ಲಿ ಹನುಮಂತ ಜೋಡಿಯಾಗಿದ್ದ ಗೌತಮಿ ಲುಂಗಿ ತೊಟ್ಟಿದ್ದರು.
ತನ್ನ ಜೋಡಿ ಹನುಮಂತಗೆ ಗೌತಮಿ ಹನಮಿ ಎಂದು ಖುಷಿಯಿಂದ ಹನುಮಂತನ ಶರ್ಟ್ ಮತ್ತು ಲುಂಗಿ ಧರಿಸಿ ಮ್ಯಾಚ್ ಮಾಡಿದ್ದರು.
ಗುರುವಾರದ ಎಪಿಸೋಡ್‌ನಲ್ಲಿ ರಜತ್ ಮತ್ತು ತ್ರಿವಿಕ್ರಮ್ ಕಪ್ಪುಬಣ್ಣದ ಶರ್ಟ್ ಮತ್ತು ಲುಂಗಿ ಧರಿಸಿದ್ದರು. ಅಂತೆಯೇ ಮಾಮುಲಿಯಂತೆ ಹನುಮಂತ ಕೂಡ ಲುಂಗಿ ಧರಿಸಿದ್ರು.
ತನ್ನ ಅತ್ಯಂತ ಆತ್ಮೀಯ ಸ್ನೇಹಿತ ತ್ರಿವಿಕ್ರಮ್ ಕೂಡ ಕ್ಯಾಪ್ಟನ್ಸಿ ಟಾಸ್ಕ್ ಆಯ್ಕೆ ಸಂದರ್ಭದಲ್ಲಿ ಲುಂಗಿ ತೊಟ್ಟಿದ್ದರು. ಹೀಗಾಗಿ ಭವ್ಯ ಕೂಡ ಲುಂಗಿ ಧರಿಸಿರಬಹುದು ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.
ಇನ್ನು ಭವ್ಯಾ ಗೌಡ ನಿನ್ನೆಯ ಎಪಿಸೋಡ್‌ನಲ್ಲಿ ಧರಿಸಿದ್ದ ಲುಂಗಿ ಮತ್ತು ಶರ್ಟ್ ಯಾರದೆಂಬ ಚರ್ಚೆ ಆರಂಭವಾಗಿದೆ.
ಭವ್ಯಾ ಧರಿಸಿದ್ದ ಲುಂಗಿ ಹನುಮಂತುದ್ದು, ಶರ್ಟ್ ಖಂಡಿತಾ ತ್ರಿವಕ್ರಮ್‌ದೆಂದು ಚರ್ಚೆ ಆರಂಭವಾಗಿದ್ದು, ಹುಡುಗರ ಬಟ್ಟೆ ಧರಿಸಿದ್ರೆ ಇನ್ನು ನಮ್ಮ ಗತಿಯೇನಪ್ಪ ಎಂದು ಗಂಡೈಕ್ಳು ತಲೆ ಕೆಡಿಸಿಕೊಂಡು ಟ್ರೋಲ್ ಮಾಡುತ್ತಿದ್ದಾರೆ.