ಕನ್ನಡ ಚಿತ್ರರಂಗದ ಖ್ಯಾತ ನಟ ಲೋಕೇಶ್ ಮತ್ತು ಗಿರಿಜಾ ಲೋಕೇಶ್ ಪುತ್ರಿ ಪೂಜಾ ಲೋಕೇಶ್ ಹಲವಾರು ವರ್ಷಗಳ ನಂತರ ಕನ್ನಡಿಗರಿಗೆ ಮನರಂಜನೆ ನೀಡಲು ಬಂದಿದ್ದಾರೆ.
Image credits: Instagram
ಸೀತಾ ರಾಮ ಮೂಲಕ ಎಂಟ್ರಿ
ಝೀ ಕನ್ನಡದಲ್ಲಿ ಮುಂದಿನ ವಾರದಿಂದ ಆರಂಭವಾಗಲಿರುವ ಸೀತಾ ರಾಮ ಸೀರಿಯಲ್ ಮೂಲಕ ಪೂಜಾ ಲೋಕೇಶ್ ಕನ್ನಡ ಕಿರುತೆರೆಗೆ ಎಂಟ್ರಿಕೊಡಲಿದ್ದಾರೆ.
Image credits: Instagram
ವಿಲನ್ ಪಾತ್ರ
ಸೀತಾ ರಾಮ ಪ್ರೋಮೋ ರಿಲೀಸಾಗಿದ್ದು, ಪೂಜಾ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು, ಅವರ ಡೈಲಾಗ್‌ನಲ್ಲೇ ಗೊತ್ತಾಗಿದೆ. ಆದರೆ ತಾಯಿ, ಸಹೋದರಿ ಯಾವ ಪಾತ್ರ ಅನ್ನೋದು ಗೊತ್ತಾಗಿಲ್ಲ.
Image credits: Instagram
ಕನ್ನಡ ಸಿನಿಮಾ
ಕನ್ನಡ ಚಿತ್ರರಂಗದಲ್ಲಿ ಪೂಜಾ ಲೋಕೇಶ್ ಬೆರಳೆಣಿಕೆಯ ಚಿತ್ರಗಳಲ್ಲಿ ನಟಿಸಿದ್ದರೂ ಸಹ, ಜನರು ಇಂದಿಗೂ ನೆನಪಿಟ್ಟುಕೊಳ್ಳುವ ಪಾತ್ರಗಳ ಮೂಲಕ ಅವರು ಇಂದಿಗೂ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ.
Image credits: Instagram
ತಮಿಳು ಕಿರುತೆರೆ
ಕನ್ನಡದಿಂದ ದೂರವೇ ಇದ್ದ ಪೂಜಾ 2003ರಿಂದ ತಮಿಳು ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿರುವ ನಟಿಯಾಗಿದ್ದಾರೆ. ರಿಯಾಲಿಟಿ ಶೋ, ಸೀರಿಯಲ್ ಗಳಲ್ಲಿ ನಟಿಸಿದ್ದಾರೆ.
Image credits: Instagram
ಡ್ಯಾನ್ಸರ್
ಪೂಜಾ ಲೋಕೇಶ್ ಅದ್ಭುತ ನೃತ್ಯಗಾರ್ತಿಯಾಗಿದ್ದು, ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಸೃಜನ್ ಪತ್ನಿ ಗ್ರೀಷ್ಮಾ ಜೊತೆಗೂ ನೃತ್ಯ ಮಾಡಿದ್ದಾರೆ.
Image credits: Instagram
ಸೀರಿಯಲ್ ಯಾವಾಗ ಆರಂಭ?
ಇನ್ನು ಸೀತಾರಾಮ ಸೀರಿಯಲ್ ಝೀಕನ್ನಡದಲ್ಲಿ ಜು.17 ರಿಂದ ರಾತ್ರಿ. 9.30ಕ್ಕೆ ಪ್ರಸಾರವಾಗಲಿದೆ. ಇದು ಗಂಡನಿಂದ ದೂರವಾದ ಸೀತೆ ಮತ್ತು ಮಗಳು ಸಿಹಿ ಹಾಗೂ ಪ್ರೀತಿನೇ ಬೇಡ ಎನ್ನುವ ರಾಮನ ಕತೆಯಾಗಿದೆ.