ಕನ್ನಡ ಕಿರುತೆರೆಯಲ್ಲಿ ತಮ್ಮ ಮುಗ್ಧ ಅಭಿನಯದ ಮೂಲಕವೇ ಜನಪ್ರಿಯತೆ ಪಡೆದ ನಟಿ ಅಮೂಲ್ಯ ಭಾರಧ್ವಜ್. ಸಿಂಪಲ್ ಲುಕ್, ಕಣ್ಣೋಟದಲ್ಲೇ ಮಾತನಾಡುವ ಬೆಡಗಿ ಅಮೂಲ್ಯ.
tv-talk Oct 30 2026
Author: Pavna Das Image Credits:Instagram
Kannada
ಅಮೂಲ್ಯ ನಟಿಸಿದ ಧಾರಾವಾಹಿಗಳು
ಅಮೂಲ್ಯ ಈ ಹಿಂದೆ ದಾಸ ಪುರಂದರದಲ್ಲಿ ಪುರಂದರ ದಾಸ ಪತ್ನಿಯಾಗಿ ಅದ್ಭುತವಾಗಿ ನಟಿಸಿದ್ದರು. ಅದಾದ ಬಳಿಕ ‘ಬೃಂದಾವನ’ ಧಾರಾವಾಹಿಯಲ್ಲಿ ಗ್ರಾಮೀಣ ಬೆಡಗಿಯಾಗಿ ನಟಿಸಿದ್ದರು.
Image credits: Instagram
Kannada
ಪವಿತ್ರ ಬಂಧನದ ನಾಯಕಿ
ಇದೀಗ ಕಲರ್ಸ್ ಕನ್ನಡದ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ನಾಯಕಿ ಪವಿತ್ರಾ ಆಗಿ ನಟಿಸುತ್ತಿದ್ದಾರೆ. ಇಲ್ಲೂ ಕೂಡ ಸಿಂಪಲ್ ಶ್ರೀಮಂತರ ಮನೆಗೆ ಸೊಸೆಯಾಗಿ ಬರುವ ಬಡ ಕುಟುಂಬದ ಹುಡುಗಿಯ ಪಾತ್ರ.
Image credits: Instagram
Kannada
ಸೀರಿಯಲ್ ನಿಂದ ಬ್ರೇಕ್
ವೀಕ್ಷಕರಂತೂ ಪವಿ ಮತ್ತು ದೇವ್ ಜೋಡಿಯನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಸದ್ಯ ಪವಿತ್ರ ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡು ದುಬೈನಲ್ಲಿ ಎಂಜಾಯ್ ಮಾಡ್ತಿದ್ದಾರೆ.
Image credits: Instagram
Kannada
ದುಬೈ ಕಡಲ ತೀರದಲ್ಲಿ ಅಮೂಲ್ಯ
ಅಮೂಲ್ಯ ದುಬೈನ ಜುಮೈರ ಬೀಚ್ ನಲ್ಲಿ ಬಿಂದಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸುಂದರವಾದ ಫೋಟೊಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
Image credits: Instagram
Kannada
ಸೀರೆ ಬಿಟ್ಟು ಮಾರ್ಡನ್ ಲುಕ್
ಸದಾ ಸೀರಿಯಲ್ ನಲ್ಲಿ ಸೀರೆಯಲ್ಲಿ ಕಾಣಿಸಿಕೊಳ್ಳುವ ಬೆಡಗಿ ಇದೀಗ, ಮಾಡರ್ನ್ ಡ್ರೆಸ್ ಧರಿಸಿ, ಕಡಲ ತೀರದಲ್ಲಿ ಬಿಂದಾಸ್ ಲುಕ್ ನೀಡಿದ್ದಾರೆ. ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
Image credits: Instagram
Kannada
ಟ್ರಾವೆಲ್ ಪ್ರಿಯೆ ಅಮೂಲ್ಯ
ಅಮೂಲ್ಯ ಟ್ರಾವೆಲ್ ಪ್ರಿಯೆಯಾಗಿದ್ದು, ಹೆಚ್ಚಾಗಿ ದೇಶ ವಿದೇಶ ಟ್ರಾವೆಲ್ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ಟರ್ಕಿ ಟ್ರಾವೆಲ್ ಮಾಡಿ ಬಂದಿದ್ದರು. ಇದೀಗ ದುಬೈನಲ್ಲಿ ಎಂಜಾಯ್ ಮಾಡ್ತಿದ್ದಾರೆ.