Kannada

‘ರಣಬಾಲಿ’ ಸಿನಿಮಾ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ರಣಬಾಲಿ’ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಹೊತ್ತಲ್ಲಿ ಕನ್ನಡದ ಈ ಜೋಡಿಗಳ ಲುಕ್ ಕೂಡ ವೈರಲ್ ಆಗುತ್ತಿದೆ.

Kannada

ಕಿಶನ್ ಬಿಳಗಲಿ-ರಾಶಿಕಾ ಶೆಟ್ಟಿ ವಿಂಟೇಜ್ ಲುಕ್

ಜನಪ್ರಿಯ ಡ್ಯಾನ್ಸರ್ ಹಾಗೂ ನಟನಾಗಿರುವ ಕಿಶನ್ ಬಿಳಗಲಿ ಮತ್ತು ಬಿಗ್ ಬಾಸ್ ಖ್ಯಾತಿಯ ನಟಿ ರಾಶಿಕಾ ಶೆಟ್ಟಿ ವಿಂಟೇಜ್ ಲುಕ್ ನಲ್ಲಿ ಸಖತ್ ಮಿಂಚುತ್ತಿದ್ದಾರೆ.

Image credits: Instagram
Kannada

ರಣಬಾಲಿ ರೀಕ್ರಿಯೇಟ್ ಮಾಡಿದ್ರಾ?

ರಣಬಾಲಿ ಸಿನಿಮಾದಲ್ಲಿ ರಶ್ಮಿಕಾ ಹಾಗೂ ವಿಜಯ್ ಹೋಲುವಂತಹ ಲುಕ್ ಹಾಗೂ ದೃಶ್ಯಗಳನ್ನು ಈ ಜೋಡಿ ರೀಕ್ರಿಯೇಟ್ ಮಾಡಿದ್ದು, ಅಭಿಮಾನಿಗಳ ಮೆಚ್ಚುಗೆ ಪಡೆದುಕೊಂಡಿದ್ದಾರೆ.

Image credits: Instagram
Kannada

ವೀಂಟೇಜ್ ಸೀರೆ ಹೂವು ಮುಡಿದ ರಾಶಿಕಾ

ರಾಶಿಕಾ ಶೆಟ್ಟಿ ವೀಂಟೇಜ್ ಸೀರೆ ಜೊತೆ, ತಲೆತುಂಬಾ ಹೂವು ಮುಡಿದು, ಕತ್ತಿನಲ್ಲಿ ತಾಳಿ ಧರಿಸಿ, ಹಳೆ ಕಾಲದ ನಾಯಕಿಯಂತೆ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

Image credits: Instagram
Kannada

ಪಂಚೆ, ಧೋತಿ ಮೀಸೆಯಲ್ಲಿ ಕಿಶನ್

ಇನ್ನೊಂದೆಡೆ ಕಿಶನ್ ಬಿಳಗಲಿ ಪಂಚೆ, ಧೋತಿ ಧರಿಸಿ, ಸಣ್ಣದಾಗಿ ಮೀಸೆ ಬಿಟ್ಟು, ರೆಟ್ರೋ ನಾಯಕನಂತೆ ತುಂಬಾನೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

Image credits: Instagram
Kannada

ಸಿನಿಮ್ಯಾಟಿಕ್ ಲುಕ್ ಗೆ ಫ್ಯಾನ್ಸ್ ಫಿದಾ

ಕಿಶನ್ ಮತ್ತು ರಾಶಿಕಾ ಸಿನಿಮ್ಯಾಟಿಕ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ರಶ್ಮಿಕಾ-ವಿಜಯ್ ಲುಕ್ ಅನ್ನೇ ಮೀರಿಸುವಂತಿದ್ದೀರಿ ಎಂದಿದ್ದಾರೆ ಫ್ಯಾನ್ಸ್.

Image credits: Instagram
Kannada

ವಿಡಿಯೋ ನೋಡಲು ಕಾತುರ

ಹೆಚ್ಚಾಗಿ ಕಿಶನ್ ನಟಿಯರ ಜೊತೆ ಸುಂದರವಾದ ವಿಡಿಯೋ ಕ್ರಿಯೇಟ್ ಮಾಡುತ್ತಿರುತ್ತಾರೆ. ಹಾಗಾಗಿ ಜನರಿಗೆ ಇದೀಗ ಇಬ್ಬರ ವಿಂಟೇಜ್ ಲುಕ್ ನೋಡಿ ಕುತೂಹಲ ಹೆಚ್ಚಾಗಿದೆ.

Image credits: Instagram
Kannada

ರಾಶಿಕಾ ಅಂದಕ್ಕೆ ಮನಸೋತ ಫ್ಯಾನ್ಸ್

ಇನ್ನು ರಾಶಿಕಾ ಶೆಟ್ಟಿಯ ಈ ಹೊಸದಾದ ಲುಕ್ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ನೀವು ಎಲ್ಲಾ ಫೋಟೊದಲ್ಲೂ ಡ್ರೀಮ್ ಗರ್ಲ್ ರೀತಿ ಕಾಣುತ್ತಿದ್ದೀರಿ ಎಂದಿದ್ದಾರೆ.

Image credits: Instagram
Kannada

ಏನು ಮಾಡ್ತಿದ್ದಾರೆ ರಾಶಿಕಾ ಶೆಟ್ಟಿ

ರಾಶಿಕಾ ಶೆಟ್ಟಿ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ರವಿಚಂದ್ರನ್ ಜೊತೆ ಪ್ಯಾರ್ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

Image credits: Instagram
Kannada

ಕಿಶನ್ ಸಿನಿಮಾ ಮಾಡ್ತಿದ್ದಾರ?

ಕಿಶನ್ ಬಿಳಗಲಿ ಕೂಡ ಸದ್ಯ ಸಿನಿಮಾ, ಡ್ಯಾನ್ಸ್ ಶೋ, ರೀಲ್ಸ್, ಶೂಟ್ ಎನ್ನುತ್ತಾ ಸದ್ಯ ಬ್ಯುಸಿಯಾಗಿದ್ದಾರೆ. ಹೊಸ ವಿಡಿಯೋ ಯಾವಾಗ ರಿಲೀಸ್ ಆಗುತ್ತೆ ಕಾದು ನೋಡಬೇಕು.

Image credits: Instagram

ಮಗಳ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಲಕ್ಷ್ಮೀ ಬಾರಮ್ಮ’ ನಟಿ

ಬಿಗ್ ಬಾಸ್ ಪ್ರೋಮೋದಲ್ಲಿ ಮಿಂಚಿದ 'ಸೌಂದರ್ಯ' ಬೆಡಗಿ! ಯಾರು ಅಂತಾ ಗೊತ್ತಾಯ್ತಾ?

ತನ್ನವರ ಜೊತೆ ಹಬ್ಬ ಆಚರಿಸಿದ ಅನುಪಮಾ ಗೌಡ… ಗೆಳತಿ ಕೃಷಿ ಮಿಸ್ಸಿಂಗ್ ಬಗ್ಗೆ ನೆಟ್ಟಿಗರ ಪ್ರಶ್ನೆ

ಚೊಚ್ಚಲ ತಾಯ್ತನದ ಸಂಭ್ರಮದಲ್ಲಿ ‘ಕಮಲಿ’ ಸೀರಿಯಲ್ ನಟಿ Photos Viral