ಸ್ಟಾರ್ ಸುವರ್ಣ ವಾಹಿನಿಯ ಆಸೆ ಧಾರಾವಾಹಿಯಲ್ಲಿ ಸೂರ್ಯ ಪಾತ್ರದ ಮೂಲಕ ಜನಮನ ಗೆದ್ದ ನಟ ನಿನಾದ್ ಹರಿತ್ಸಾ. ಮೀನಾ ಮತ್ತು ಸೂರ್ಯ ಜೋಡಿ ಸದ್ಯದ ಜನಪ್ರಿಯ ಜೋಡಿಯೂ ಹೌದು.
ಮೀನಾ- ಮತ್ತು ಸೂರ್ಯ ಜೋಡಿಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ. ರಿಯಲ್ ಆಗಿ ಸೂರ್ಯ ಅಂದ್ರೆ ನಿನಾದ್ ಹರಿತ್ಸಾ ಮತ್ತು ಪತ್ನಿ ರಮ್ಯಾ ಜೋಡಿಯೂ ಸೂಪರ್.
ನಿನಾದ್ ಅವರು ತಮ್ಮ ಪತ್ನಿ ರಮ್ಯಾ ಜೊತೆ ರೊಮ್ಯಾಂಟಿಕ್ ಕ್ಷಣಗಳನ್ನು ಕಳೆದಿದ್ದು, ತಮ್ಮ ಮುದ್ದಾದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪ್ರಕೃತಿಯ ಮಧ್ಯೆ ಈ ಜೋಡಿ ಕೈ ಕೈ ಹಿಡಿದು ಡ್ಯಾನ್ಸ್ ಮಾಡುತ್ತಾ, ಕ್ಯಾಂಡಿಡ್ ಮೂಮೆಂಟ್ ಗಳಿಗೆ ಸಾಕ್ಷಿಯಾಗುತ್ತಾ ಆನಂದವಾಗಿ ಸಮಯ ಕಳೆದಿದ್ದಾರೆ.
ಅಷ್ಟೇ ಅಲ್ಲ ನಿನಾದ ಮುದ್ದಾದ ಫೋಟೊಗಳಿಗೆ ಕ್ಯಾಪ್ಶನ್ ಕೂಡ ಕೊಟ್ಟಿದ್ದು, ನಿನ್ನೊಂದಿಗಿರುವ ಕ್ಷಣವೇ ಆಸೆ ಎಂದು ಬರೆದಿದ್ದಾರೆ.
ಮುದ್ದಾದ ಜೋಡಿಗೆ ಕಾಮೆಂಟ್ ಸೆಕ್ಷನ್ ಪೂರ್ತಿಯಾಗಿ ಹಾರ್ಟ್ ಇಮೋಜಿಗಳ ಮೂಲಕ ಪ್ರೀತಿಯ ಸುರಿಮಳೆಯಾಗಿದೆ. ಮುದ್ದಾದ ಜೋಡಿ ಎಂದು ಸಹ ಜನರು ಹೇಳಿದ್ದಾರೆ.
ನಿನಾದ್ ಮತ್ತು ರಮ್ಯಾ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ನಂತರ ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ನಿನಾದ್ ರಂಗಭೂಮಿ ಕಲಾವಿದರಾಗಿದ್ದು, ಹಲವು ನಾಟಕಗಳಲ್ಲಿ, ಕಿರುಚಿತ್ರಗಳಲ್ಲಿ ಹಾಗೂ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಪತ್ನಿ ರಮ್ಯಾ ಸಿಎ ಆಗಿದ್ದಾರೆ.
ನಿನಾದ್ ಹರಿತ್ಸಾ ಅರಮನೆ, ಬಿಳಿಹೆಂಡ್ತಿ ಸೀರಿಯಲ್ ನಲ್ಲಿ ನಟಿಸಿದ್ದು, ನಾಯಕನಾಗಿ ನಾಗಿಣಿ 2 ನಲ್ಲಿ ನಟಿಸಿ ತ್ರಿಶೂಲ್ ಪಾತ್ರದ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ್ದರು.
ಇದೀಗ ಆಸೆ ಧಾರಾವಾಹಿಯಲ್ಲಿ ಕ್ಯಾಬ್ ಡ್ರೈವರ್ ಸೂರ್ಯ ಪಾತ್ರದ ಮೂಲಕ ಮಿಡಲ್ ಕ್ಲಾಸ್ ನ ಮನೆಮನೆಯನ್ನು ತಲುಪಿದ್ದಾರೆ ಸೂರ್ಯ. ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಸಹ ಪಡೆದಿದ್ದಾರೆ.
ಕರ್ಣನ ಬ್ಯೂಟಿ ನಿಧಿ ಸಲ್ವಾರ್ ಮಾತ್ರವಲ್ಲ ಸೀರೆಯಲ್ಲೂ ಕ್ಯೂಟಿ
ಗುಡ್‌ನ್ಯೂಸ್ ಕೊಟ್ಟ 'ರಾಧಾ ಕಲ್ಯಾಣʼ ಧಾರಾವಾಹಿ ನಟಿ ಚೈತ್ರಾ ರೈ! ಏನದು?
ಯಾರೀ 'ಅಮೃತಧಾರೆ' ಧಾರಾವಾಹಿ ದಿಯಾ? ಏನು ಓದುತ್ತಿದ್ದಾರೆ? ವಯಸ್ಸೆಷ್ಟು?
ಯಾರೀ 'ಅಣ್ಣಯ್ಯ' ಧಾರಾವಾಹಿ ರಾಣಿ? ಸಿಕ್ಕಾಪಟ್ಟೆ ಓದಿದ್ರೂ ನಟಿಯಾದ ರಾಘವಿ!