ಕನ್ನಡ ಕಿರುತೆರೆ ಮತ್ತು ಹಿರಿತೆರೆಯ ಜನಪ್ರಿಯ ನಟಿ ನೀತಾ ಅಶೋಕ್. ಸದ್ಯ ತಮ್ಮ ಮುದ್ದಾದ ದೆವ್ವದ ರೋಲ್ ಮೂಲಕ ಜನಮನ ಗೆದ್ದಿದ್ದಾರೆ.
tv-talk Jan 06 2026
Author: Pavna Das Image Credits:Instagram
Kannada
ನಾ ನಿನ್ನ ಬಿಡಲಾರೆ
ನೀತಾ ಅಶೋಕ್ ಈಗ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಾ ನಿನ್ನ ಬಿಡಲಾರೆ ಎನ್ನುವ ಹಾರರ್ ಕಥೆಯಲ್ಲಿ, ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ದೆವ್ವವಾಗಿ ನಟಿಸುತ್ತಿದ್ದಾರೆ.
Image credits: Instagram
Kannada
ಸೀರಿಯಲ್ ಬ್ರೇಕ್ ವಿದೇಶದಲ್ಲಿ ನೀತಾ
ಇದೀಗ ನಟಿ ಸೀರಿಯಲ್ ಗೆ ಬ್ರೇಕ್ ಕೊಟ್ಟು ತಮ್ಮ ಪತಿ ಜೊತೆ ವಿದೇಶದಲ್ಲಿ - 2 ಡಿಗ್ರಿ ಚಳಿಯಲ್ಲಿ ಎಂಜಾಯ್ ಮಾಡ್ತಿದ್ದಾರೆ.
Image credits: Instagram
Kannada
ಎಲ್ಲಿದ್ದಾರೆ ನೀತಾ?
ಅಜರಬೈಜಾನ್ ಗೆ ನೀತಾ ತೆರಳಿದ್ದು, ಅಲಿ ಲಾಜಾ ಗ್ರಾಮ, ಉಫಾನ್ ದಾಗ್ ಗೆ ತೆರಳಿ ಪ್ರಕೃತಿ, ಹಿಮದ ಮಧ್ಯೆ ಕಾಲ ಕಳೆದು ಬಂದಿದ್ದಾರೆ ನಟಿ.
Image credits: Instagram
Kannada
ಸುಂದರವಾದ ಪ್ರದೇಶ
ಲಾಜಾ ಅಜೆರ್ಬೈಜಾನ್‌ನ ಕುಸಾರ್ ರೇಯಾನ್‌ನಲ್ಲಿರುವ ಒಂದು ಹಳ್ಳಿ. ಈ ಗ್ರಾಮವು ಗ್ರೇಟರ್ ಕಾಕಸಸ್‌ನ ಈಶಾನ್ಯದಲ್ಲಿರುವ ಮೌಂಟ್ ಶಾಹದಾಗ್‌ನ ಬುಡದಲ್ಲಿದ್ದು, ಸಮುದ್ರ ಮಟ್ಟದಿಂದ 1300 ಮೀ ಎತ್ತರದಲ್ಲಿದೆ.
Image credits: Instagram
Kannada
ಗಂಡನ ಜೊತೆ ಜಾಲಿ ಮೂಡ್
- 2 ಡಿಗ್ರಿ ಚಳಿಯಲ್ಲಿ ಪತಿ ಜೊತೆ ರೊಮ್ಯಾಂಟಿಕ್ ಮೂಡಲ್ಲಿ ಮುದ್ದಾದ ಫೋಟೋಗಳನ್ನು ನೀತಾ ಶೇರ್ ಮಾಡಿದ್ದಾರೆ.
Image credits: Instagram
Kannada
ನಟಿ ಹೇಳಿದ್ದೇನು?
ವಿಂಟರ್, ಉಷ್ಣತೆ ಮತ್ತು ನೀವು, 5 ನೇ ದಿನ ಲಾಜಾ ಗ್ರಾಮ ಮತ್ತು ತುಫಾನ್ ದಾಗ್, ಅತ್ಯಂತ ಭಯಾನಕ ಸವಾರಿಗಳು - ಹಗ್ಗದ ಮಾರ್ಗ ಮತ್ತು ರೋಲರ್ ಕೋಸ್ಟರ್, ತಾಪಮಾನ -3 ಡಿಗ್ರಿ. ಎಂದು ಬರೆದಿದ್ದಾರೆ.
Image credits: Instagram
Kannada
ಮದುವೆಯಾಗಿದ್ದು ಯಾವಾಗ?
ನೀತಾ ಅಶೋಕ್ ಅವರು 2023ರಲ್ಲಿ ತಾವು ಪ್ರೀತಿಸಿದ ಹುಡುಗ ಸತೀಶ್ ಮೇಸ್ತಾ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
Image credits: Instagram
Kannada
ಸೀರಿಯಲ್ ನಲ್ಲಿ ಏನಾಗ್ತಿದೆ?
ಸದ್ಯ ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ದುರ್ಗಾಳನ್ನು ಮನೆಯಿಂದ ಓಡಿಸಲು ಮತ್ತು ಹಿತಾಳನ್ನು ಬಲಿ ಕೊಡಲು ಮಾಳವಿಕಾ ಎಲ್ಲಾ ರೀತಿಯಲ್ಲಿ ಪ್ಲ್ಯಾನ್ ಮಾಡುತ್ತಿದ್ದಾಳೆ.
Image credits: Instagram
Kannada
ಮಾಳವಿಕಾ ಸತ್ಯ ತಿಳಿಯದ ಅಂಬಿಕಾ
ಅಂಬಿಕಾಗೆ ಮನೆಯಲ್ಲಿ ಯಾರೆಲ್ಲಾ ಕೆಟ್ಟವರು ಅನ್ನೋದು ಗೊತ್ತಿದೆ. ಆದರೆ ಮಾಳವಿಕಾ ಕೆಟ್ಟವಳು ಅನ್ನೋದು ಮಾತ್ರ ಅಂಬಿಕಾಗೆ ಇನ್ನೂ ಗೊತ್ತಾಗಿಲ್ಲ. ಇನ್ನು ಮುಂದೆ ಕಥೆ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕು.