ಕನ್ನಡ ಕಿರುತೆರೆಯ ನಟ-ನಟಿಯರು ದೂರದ ಫುಕೇಟ್, ಥೈಲ್ಯಾಂಡಲ್ಲಿ ಎಂಜಾಯ್ ಮಾಡ್ತಿದ್ರೆ, ನಮೃತಾ ಗೌಡ ಕರಾವಳಿ ತೀರದ ದೇವಸ್ಥಾನಗಳಿಗೆ ಭೇಟಿ ನೀಡಿ ಧನ್ಯರಾಗುತ್ತಿದ್ದಾರೆ.
ಕರಾವಳಿ ಟ್ರಾವೆಲ್ ಮಾಡುತ್ತಿರುವ ನಮೃತಾ ಗೌಡ, ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು ಬಂದಿದ್ದಾರೆ.
ಇನ್ನು ಮಂಗಳೂರಿನ ಕುತ್ತಾರು ಸಮೀಪ ಇರುವ ಕೊರಗಜ್ಜ ಕ್ಷೇತ್ರಕ್ಕೂ ಭೇಟಿ ನೀಡಿ, ಆಶೀರ್ವಾದ ಪಡೆದಿದ್ದಾರೆ ನಮೃತಾ ಗೌಡ.
ತಾಯಿ ದುರ್ಗಾಪರಮೇಶ್ವರಿ ನೆಲೆಸಿರುವ ಕಟೀಲು ಕ್ಷೇತ್ರಕ್ಕೂ ನಮೃತಾ ಗೌಡ ತೆರಳಿ, ತಾಯಿಯ ಕೃಪೆಗೆ ಪಾತ್ರರಾಗಿದ್ದಾರೆ.
ಮಂಗಳೂರು ಬಳಿಕ ಉಡುಪಿಗೂ ತೆರಳಿದ್ದು, ವಿಶ್ವಪ್ರಸಿದ್ಧ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಕೃಷ್ಣನ ದರ್ಶನ ಪಡೆದಿದ್ದಾರೆ ‘ಕರ್ಣ’ ಧಾರಾವಾಹಿ ನಟಿ.
ಎರಡು ದಿನಗಳ ಕಾಲ ಮಂಗಳೂರು, ಉಡುಪಿಯ ಹಲವು ಧಾರ್ಮಿಕ ಕ್ಷೇತ್ರಗಳಿಗೆ ನಮೃತಾ ಭೇಟಿ ನೀಡಿದ್ದಾರೆ. ಗೋಸೇವೆಯನ್ನೂ ಕೂಡ ಮಾಡಿದ್ದಾರೆ ನಟಿ.
ಉಡುಪಿ ಬಳಿಕ ಕೊಲ್ಲೂರಿಗೂ ತೆರಳಿದ್ದು, ಆದಿಶಂಕರಾಚಾರ್ಯರಿಂದ ಪ್ರತಿಷ್ಟಾಪಿತಳಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದಿದ್ದಾರೆ.
ಉಡುಪಿಯ ಮೂಡುಗಲ್ಲಿನಲ್ಲಿರುವ ಕೇಶವನಾಥೇಶ್ವರ ಗುಹಾಂತರ ದೇಗುಲಕ್ಕೆ ಭೇಟಿ ನೀಡಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಐಸ್ ಕ್ರೀ ಕ್ಯಾಪಿಟಲ್ ಗೆ ಬಂದಿರುವ ನಮೃತಾ ಗೌಡ, ಮಂಗಳೂರಿನ ಪ್ರಸಿದ್ಧ ಪಬ್ಬಾಸ್ ಐಸ್ ಕ್ರೀಂ ಪಾರ್ಲರ್ ಗೆ ಭೇಟಿ ನೀಡಿ ಗಡ್ ಬಡ್ ಸವೆದಿದ್ದಾರೆ.
ಕರಾವಳಿ ತೀರಕ್ಕೆ ಬಂದರೆ, ಸಮುದ್ರಕ್ಕೆ ಇಳಿಯದೇ ಇರಲಾದೀತೆ ಎನ್ನುವಂತೆ ನೀರಲ್ಲಿ ಇಳಿದು ಅಲೆಗಳೊಂದಿಗೆ ಆಟವಾಡಿದ್ದಾರೆ.
ಥೈಲಾಂಡಲ್ಲಿ ಕಿರುತೆರೆ ನಟರ ಸಮ್ಮರ್ ವೆಕೇಶನ್… ಎಷ್ಟು ಕ್ಯೂಟಾಗಿ ಕಾಣಿಸ್ತಿದ್ದಾರೆ ನೋಡಿ ಭವ್ಯಾ
ಹೇರ್ ಕಟ್ ಮಾಡಿಸಲು ವಿದೇಶಕ್ಕೆ ಹಾರಿದ ಕಿರಣ್ ರಾಜ್… ಹೊಸ ಸ್ಟೈಲ್ ಹೇಗಿದೆ?
ಲಕ್ಷ್ಮೀಯ ಮಾಡರ್ನ್ ಅವತಾರ ನೋಡಿ… ಸ್ವಲ್ಪ ಫೇಮಸ್ ಆಗಿದ್ದೆ ತಡ ಶುರು ಹಚ್ಕೊಂಡ್ರು ಎನ್ನೋದ ಜನ
ಕಾಡಿನ ಟೆಂಪ್ರೇಚರ್ ಹೆಚ್ಚಿಸಿದ ಬೋಲ್ಡ್ ಬ್ಯೂಟಿ ಜ್ಯೋತಿ ರೈ… Photos Viral