ಕನ್ನಡ ಕಿರುತೆರೆಯ ಜನಪ್ರಿಯ ನಟ ಕಿರಣ್ ರಾಜ್. ಸಿನಿಮಾದಲ್ಲೂ ಬ್ಯುಸಿಯಾಗಿರುವ ನಟ ಇದೀಗ ಬ್ರೇಕ್ ತೆಗೆದುಕೊಂಡು ಹೇರ್ ಕಟ್ ಮಾಡ್ಸೋದಕ್ಕೆ ವಿದೇಶಕ್ಕೆ ಹಾರಿದ್ದಾರೆ.
ಸೋಶಿಯಲ್ ಮೀಡೀಯಾದಲ್ಲಿ ಒಂದಷ್ಟು ಫೋಟೊಗಳನ್ನು ಹಂಚಿಕೊಂದಿರುವ ಕಿರಣ್ ರಾಜ್ Life is really good , when you can travel just for a haircut ಎಂದು ಬರೆದುಕೊಂಡಿದ್ದಾರೆ.
ಅಂದ ಹಾಗೆ ಕಿರಣ್ ರಾಜ್ ಥೈಲ್ಯಾಂಡ್ ಗೆ ಹಾರಿದ್ದಾರೆ, ಅಲ್ಲಿ ನಟ ಪುಟ್ಟ ಮನೆ ಕೂಡ ಮಾಡಿದ್ದಾರೆ. ಹೆಚ್ಚಾಗಿ ಥೈಲ್ಯಾಂಡ್ ಗೆ ಹಾರುತ್ತಲೇ ಇರುತ್ತಾರೆ ಕರ್ಣ.
ಇನ್ನು ಏರ್ ಪೋರ್ಟ್ ನಲ್ಲಿ ಸ್ಟಾರ್ ಬಕ್ಸ್ ಸಿಬ್ಬಂದಿಗಳು ಕಿರಣ್ ರಾಜ್ ಅವರಿಗೆ ನಿಮ್ಮ ಎಲ್ಲಾ ಪ್ರಾಜೆಕ್ಟ್ ಗಳಿಗೆ ಆಲ್ ದಿ ಬೆಸ್ಟ್ ಎಂದು ಶುಭ ಕೋರಿದ್ದಾರೆ.
ನಿಮಗೆ ಸುಸ್ವಾಗತ ಕಿರಣ್ ರಾಜ್ (ಕರ್ಣ), ನಿಮ್ಮ ಅಂತಾರಷ್ಟ್ರೀಯ ಜರ್ನಿ ಉತ್ತಮ ಕ್ಷಣಗಳು, ಉತ್ತಮ ಜನ ಮತ್ತು ಸಂತೋಷದ ಕ್ಷಣಗಳಿಂದ ತುಂಬಿರಲಿ ಎಂದು ಹಾರೈಸಿದ್ದಾರೆ.
ಥೈಲ್ಯಾಂಡಲ್ಲಿ ನಟ ತಾವಾಗಿಯೇ ಲೋಕಲ್ ಮಾರ್ಕೆಟ್ ಗೆ ತೆರಳಿ ಅಲ್ಲಿ ತಮಗೆ ಬೇಕಾದ ತರಕಾರಿಗಳು ಹಾಗೂ ಹಣ್ಣು ಹಂಪಲುಗಳನ್ನು ಖರೀದಿ ಮಾಡಿದ್ದಾರೆ.
ಕಿರಣ್ ಪ್ಲಾಸ್ಟಿಕ್ ಕವರ್ ನಲ್ಲಿ ಹಣ್ಣು ಕಂಪಲುಗಳನ್ನು ಖರೀದಿಸಿ, ತಾವೇ ಜ್ಯೂಸ್ ಮಾಡಿ ಸವಿದ ಫೋಟೊಗಳನ್ನು ಪೋಸ್ಟ್ ಮಾಡಿ, ತಾವೆಷ್ಟು ಸಿಂಪಲ್ ಅನ್ನೋದನ್ನು ತೋರಿಸಿದ್ದಾರೆ.
ಅಂದ ಹಾಗೆ ಕೆಲವು ದಿನಗಳ ಹಿಂದೆ ಭವ್ಯ ಗೌಡ ಕೂಡ ಥೈಲ್ಯಾಂಡ್ ಗೆ ತೆರಳಿದ್ದು, ಅಲ್ಲಿ ಬೀಚ್ ಗಳಲ್ಲಿ ಎಂಜಾ ಮಾಡ್ತಿದ್ದಾರೆ.
ಲಕ್ಷ್ಮೀಯ ಮಾಡರ್ನ್ ಅವತಾರ ನೋಡಿ… ಸ್ವಲ್ಪ ಫೇಮಸ್ ಆಗಿದ್ದೆ ತಡ ಶುರು ಹಚ್ಕೊಂಡ್ರು ಎನ್ನೋದ ಜನ
ಕಾಡಿನ ಟೆಂಪ್ರೇಚರ್ ಹೆಚ್ಚಿಸಿದ ಬೋಲ್ಡ್ ಬ್ಯೂಟಿ ಜ್ಯೋತಿ ರೈ… Photos Viral
ಮನೆ ಜಗಳದ ಮಧ್ಯೆ ಗಂಡನ ಜೊತೆ ಉಜ್ಜಯಿನಿ ಮಹಾಕಾಳನ ದರ್ಶನ ಪಡೆದ ನಟಿ ಕಾವ್ಯಾ ಗೌಡ
ಜೋಡಿ ನಂ 1 ಶೋನಲ್ಲಿ ಯಾರ್ಯಾರಿದ್ದಾರೆ? ಟ್ರೆಂಡಲ್ಲಿ ಇರೋರಿಗೆ ಅವಕಾಶ!