ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಹೊಸ ಪೋಸ್ಟ್ ಗಳ ಮೂಲಕ ಹಾಗೂ ರೀಲ್ಸ್ ಮೂಲಕ ಕಿಚ್ಚು ಹಚ್ಚುವ ಬೆಡಗಿ ನಿವೇದಿತಾ ಗೌಡ ಮೇ 2ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
tv-talk May 12 2026
Author: Pavna Das Image Credits:Instagram
Kannada
ಬರ್ತ್ ಡೇ ಗರ್ಲ್ ನಿವ್ವಿ
ನಿವೇದಿತಾ ಗೌಡ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, 12 ಗಂಟೆಯಿಂದಲೇ ಭರ್ಜರಿಯಾಗಿ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡುತ್ತಿದ್ದಾರೆ ಈ ಬೆಡಗಿ.
Image credits: Instagram
Kannada
ಬೆಸ್ಟ್ ಫ್ರೆಂಡ್ ಜೊತೆ ಸೆಲೆಬ್ರೇಶನ್
ನಿವೇದಿತಾ ಗೌಡ ಹುಟ್ಟುಹಬ್ಬವನ್ನು ಬೆಸ್ಟ್ ಫ್ರೆಂಡ್ ಆಗಿರುವ ವಾಣಿ ಹಾಗೂ ತಮ್ಮನ ಜೊತೆ ಬಲು ಜೋರಾಗಿಯೇ ಸೆಲೆಬ್ರೇಟ್ ಮಾಡಿದ್ದಾರೆ. ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Image credits: Instagram
Kannada
ಹ್ಯಾಪಿ ಬರ್ತ್ ಡೇ ಟು ಮಿ
‘ಈ ಯೂನಿವರ್ಸ್ ಅದರ ಫೇವರಿಟ್ ಹುಡುಗಿಯ ಮತ್ತೊಂದು ಅಧ್ಯಾಯ ಬರೆದಾಗಿದೆ. ಹ್ಯಾಪಿ ಬರ್ತ್ ಡೇ ಟಿ ಮಿ’ ಎಂದು ತಮಗೆ ತಾವೇ ವಿಶ್ ಮಾಡಿದ್ದಾರೆ.
Image credits: Instagram
Kannada
ಡೈಮಂಡ್ ಗಿಫ್ಟ್ ಕೊಟ್ಟ ಗೆಳತಿ
ನಿವೇದಿತಾ ಗೌಡ, ತಮ್ಮ ಬರ್ತ್ ಡೇ ಪೋಸ್ಟ್ ನಲ್ಲಿ ಡೈಮಂಡ್ ಜ್ಯುವೆಲ್ಲರಿ ಸೆಟ್ ಫೋಟೊ ಕೂಡ ಪೋಸ್ಟ್ ಮಾಡಿದ್ದು, ಬೆಸ್ಟ್ ಫ್ರೆಂಡ್ ಕೊಟ್ಟ ಉಡುಗೊರೆ ಇದಾಗಿರಬಹುದು.
Image credits: Instagram
Kannada
ಗೆಳತಿ ಕೊಟ್ಟ ಮುದ್ದಾದ ಗ್ರೀಟಿಂಗ್
ಇದಷ್ಟೇ ಅಲ್ಲದೇ ಗೆಳತಿ ವಾಣಿ ನಿವೇದಿತಾ ಗೌಡ ಅವರ ಫೋಟೊ ಪ್ರಿಂಟ್ ಇರುವ ಮುದ್ದಾದ ಗ್ರೀಟಿಂಗ್ ಹಾಗೂ ಹೂಗುಚ್ಚವನ್ನು ಸಹ ಉಡುಗೊರೆಯಾಗಿ ನೀಡಿದ್ದಾರೆ.
Image credits: Instagram
Kannada
ಅಂದ ಹಾಗೇ ನಿವೇದಿತಾ ಗೌಡ ವಯಸ್ಸೆಷ್ಟು?
ಮೈಸೂರಿನ ಬೆಡಗಿ ನಿವೇದಿತಾ ಗೌಡ 1998 ಮೇ 12ರಂದು ಜನಿಸಿದರು. ಅಂದರೆ ಈ ವರ್ಷ ನಿವೇದಿತಾ ಗೌಡ ತಮ್ಮ 28ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
Image credits: Instagram
Kannada
ಟಿಕ್ ಟಾಕ್ ನಿಂದ ಸಿನಿಮಾವರೆಗೂ
ನಿವೇದಿತಾ ಗೌಡ ಟಿಕ್ ಟಾಕ್ ಮೂಲಕ ಸದ್ದು ಮಾಡಿದ್ದರು, ಬಳಿಕ ಬಿಗ್ ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಸುವ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದು, ಬಾರ್ಬಿ ಡಾಲ್ ಎಂದೇ ಖ್ಯಾತಿ ಪಡೆದರು.
Image credits: Instagram
Kannada
ರಿಯಾಲಿಟಿ ಶೋಗಳಲ್ಲಿ ಮಿಂಚಿಂಗ್
ಇದಾದ ಬಳಿಕ ರಾಜಾ ರಾಣಿ, ಗಿಚ್ಚಿ ಗಿಲಿಗಿಲಿ, ಕಾಮಿಡಿ ಕಿಚನ್ ಸೇರಿ ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ, ಜನಪ್ರಿಯತೆ ಪಡೆದವರು ನಿವೇದಿತಾ ಗೌಡ. ಸದ್ಯ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.
Image credits: Instagram
Kannada
ಮದುವೆ-ಡಿವೋರ್ಸ್
ಬಿಗ್ ಬಾಸ್ ಸಹಸ್ಪರ್ಧಿ ಚಂದನ್ ಜೊತೆ ಪ್ರೀತಿಸಿ ಮದುವೆಯಾಗಿದ್ದ ನಿವೇದಿತಾ, ಮದುವೆಯಾಗಿ 4 ವರ್ಷಗಳ ಬಳಿಕ 2024ರ ಜೂನ್ 7ರಂದು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದಿದ್ದರು.