ಪಾರು ಖ್ಯಾತಿಯ ನಟಿ ಮೋಕ್ಷಿತಾ ಪೈ ಬಿಗ್ ಬಾಸ್ ಸೀಸನ್ 11ರ ಬಳಿಕ ಸಿನಿಮಾ, ಶಾರ್ಟ್ ಫಿಲಂ ಎಂದು ಶೂಟಿಂಗ್ ನಲ್ಲೆ ಸಖತ್ ಬ್ಯುಸಿಯಾಗಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ಐಶ್ವರ್ಯ ಸಿಂಧೋಗಿ ಕೂಡ ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡಿದ್ದು, ಇದರ ಜೊತೆಗೆ ಟ್ರಾವೆಲ್ ಮಾಡ್ತಾನೆ ಇರುತ್ತಾರೆ.
ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದ ನಟ ಶಿಶಿರ್ ಶಾಸ್ತ್ರಿ ಕೂಡ ಬಿಗ್ ಬಾಸ್ ಬಳಿಕ ಬಿಂದಾಸ್ ಆಗಿ ಲೈಫ್ ಎಂಜಾಯ್ ಮಾಡ್ತಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಮೋಕ್ಷಿತಾ, ಐಶ್ವರ್ಯಾ ಹಾಗೂ ಶಿಶಿರ್ ಅವರ ಸ್ನೇಹ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿದೆ.
ಈ ಮೂವರ ಗ್ಯಾಂಗ್ ಹೆಚ್ಚಾಗಿ ಜೊತೆಯಾಗಿ ಟೂರ್, ಟ್ರಿಪ್, ದೇಗುಲ ದರ್ಶನ ಮಾಡುತ್ತಾ ಸಖತ್ ಎಂಜಾಯ್ ಮಾಡುತ್ತಿರುತ್ತಾರೆ.
ಇದೀಗ ಮೋಕ್ಷಿತಾ ಮತ್ತೊಬ್ಬ ಸ್ನೇಹಿತೆ ಹಾಗೂ ಐಶ್, ಶಿಶಿರ್ ಸೇರಿ ಮತ್ತೊಂದು ಟ್ರಿಪ್ ಮಾಡಿದ್ದು, ಸುಂದರವಾದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ತಮ್ಮ ಮುದ್ದಾದ ಗ್ರೂಪ್ ಫೋಟೊಗಳನ್ನು ಹಂಚಿಕೊಂಡಿರುವ ಮೋಕ್ಷಿತಾ ಪೈ Friends become our chosen family ಎಂದು ಬರೆದುಕೊಂಡಿದ್ದಾರೆ.
ಮೋಕ್ಷಿತಾ, ಶಿಶಿರ್ ಮತ್ತು ಐಶ್ ಜೊತೆಯಾಗಿರೋದನ್ನು ನೋಡಿ ಈ ನಟ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
ನೀವು ಮೂವರು ನಮ್ಮ ಫೇವರಿಟ್ ಟ್ರಿಯೋ, ಸ್ಪರ್ಧಿಗಳು ಸ್ನೇಹಿತರಾಗೋದು ಕಡಿಮೆ. ನಿಮ್ಮನ್ನ ನೋಡಿ ಖುಷಿಯಾಗುತ್ತೆ, ನಿಮ್ಮ ಸ್ನೇಹ ಯಾವಾಗ್ಲೂ ಹೀಗೆ ಇರಲಿ ಎಂದ ಜನ.
ಅಂದ ಹಾಗೇ ಅಭಿಮಾನಿಗಳು ಈ ತ್ರಿಮೂರ್ತಿಗಳ ಮೇಲೆ ಯಾರದೇ ದೃಷ್ಟಿ ಬೀಳದೇ ಇರಲಿ ಎಂದು ಸಹ ಆಶಿಶಿದ್ದಾರೆ.
ಹೊಸ ಸ್ಟೈಲಿಶ್ ಲುಕ್ ನಲ್ಲಿ ಲಕ್ಷ್ಮೀ ಬಾರಮ್ಮ ಸುಪ್ರೀತಾ
ವಿದೇಶದಲ್ಲಿ HR ಆಗಿರೋ ಪುನೀತ್ ರಾಜ್‌ಕುಮಾರ್ ಸೀರಿಯಲ್ ಹೀರೋಯಿನ್ ಅರ್ಚನಾ!
ದುಬೈನಲ್ಲಿ ಮೇಘಾ ಶೆಟ್ಟಿ….ಪೆಂಗ್ವಿನ್ , ಮತ್ಸ್ಯ ಲೋಕದಲ್ಲಿ ಕಳೆದೋದ ಸುಂದ್ರಿ
ಹೆಂಗಳೆಯರ ಮನಗೆದ್ದ ಗುಳಿಗೆನ್ನೆ ಚೆಲುವನ ಹೊಸ ಫೋಟೊ ಶೂಟ್