ಕನ್ನಡ ಕಿರುತೆರೆಯ ಮೂಲಕ ಕನ್ನಡಿಗರಿಗೆ ಪರಿಚಯವಾದ ಸುಂದರಿ ಸದ್ಯ ಹಿರಿತೆರೆಯಲ್ಲಿ ಸಖತ್ ಬ್ಯುಸಿ.
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದ ಮೂಲಕ ಜನಮನ ಗೆದ್ದ ಬೆಡಗಿ.
ಮೇಘಾ ಶೆಟ್ಟಿ ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದು,ಮತ್ತಷ್ಟು ಸಿನಿಮಾಗಳು ನಟಿಯ ಕೈಯಲ್ಲಿದೆ.
ಮೇಘಾ ಶೆಟ್ಟಿ ಸದ್ಯ ದೇಶ ವಿದೇಶ ಟ್ರಾವೆಲ್ ಮಾಡುತ್ತಾ ಎಂಜಾಯ್ ಮಾಡ್ತಿದ್ದಾರೆ. ಕೆಲ ಸಮಯದ ಹಿಂದೆ ಸಿಂಗಾಪುರದಲ್ಲಿದ್ದ ನಟಿ, ಈಗ ದುಬೈನಲ್ಲಿದ್ದಾರೆ.
ಸೋಶಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿರುವ ಮೇಘಾ ಶೆಟ್ಟಿ ಇದೀಗ ದುಬೈನಲ್ಲಿ ಎಂಜಾಯ್ ಮಾಡಿರುವ ಫೋಟೊಗಳನ್ನು ಶೇರ್ ಮಾಡಿದ್ದಾರೆ.
ಮೇಘಾ ದುಬೈನ ಅತ್ಯಂತ ಜನಪ್ರಿಯವಾಗಿರುವ ದುಬೈ ಅಕ್ವೇರಿಯಂ ಮತ್ತು ಅಂಡರ್ ವಾಟರ್ ಝೂಗೆ ಭೇಟಿ ನೀಡಿದ್ದಾರೆ ನಟಿ.
ದುಬೈನಲ್ಲಿ ನಿರ್ಮಾಣವಾಗಿರುವ ಈ ಝೂನಲ್ಲಿ ಮುದ್ದಾದ ಪೆಂಗ್ವಿನ್ ಗಳ ಜೊತೆ ಮೇಘಾ ಶೆಟ್ಟಿ ಪೋಸ್ ಕೊಟ್ಟಿದ್ದಾರೆ.
ಮೇಘಾ ಶೆಟ್ಟಿ ದುಬೈನ ಮತ್ಸ್ಯ ಜಗತ್ತಿಗೆ ಭೇಟಿ ನೀಡಿ ಅಲ್ಲಿನ ಅಚ್ಚರಿಯ ಜಗತ್ತಿನ ಅನಾವರಣ ಮಾಡಿದ್ದಾರೆ.
ಮೇಘಾ ಶೆಟ್ಟಿ ಕಪ್ಪು ಬಣ್ಣದ ಶಾರ್ಟ್ಸ್ ಹಾಗೂ ಬಿಳಿ ಬಣ್ಣದ ಸ್ಲೀವ್ ಲೆಸ್ ಟೀ ಶರ್ಟ್ ಮತ್ತು ಬಿಳಿ ಜಾಕೆಟ್ ಧರಿಸಿ, ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ನಟಿಯ ಒಂದೊಂದು ಫೋಟೊ ನೋಡಿ ವರ್ಣಿಸುತ್ತಿರುವ ಅಭಿಮಾನಿಗಳು, ನಟಿಯ ಅಂದ, ಚಂದ, ಸ್ಟೈಲ್ ಗೆ ಫಿದಾ ಆಗಿದ್ದಾರೆ.
ಹೆಂಗಳೆಯರ ಮನಗೆದ್ದ ಗುಳಿಗೆನ್ನೆ ಚೆಲುವನ ಹೊಸ ಫೋಟೊ ಶೂಟ್
ತಾಯಿಯಾದ್ಮೇಲೆ ನಟನೆಯಿಂದ ದೂರ ಇರುವ ಕನ್ನಡ ಕಿರುತೆರೆ ನಟಿಯರಿವರು!
ಪ್ರತಿಷ್ಠಿತ ಉದ್ಯೋಗ ತೊರೆದಿರೋ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಸ್ನೇಹಾ ಪಾತ್ರಧಾರಿ!
'ಅಮೃತಧಾರೆ' ಧಾರಾವಾಹಿ ಸಚಿನ್ ಪಾತ್ರಧಾರಿ ಯಾರು? ಹಿನ್ನಲೆ ಏನು?