ಕನ್ನಡ ಕಿರುತೆರೆಯಲ್ಲಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನುಸಿರಿಮನೆಯಾಗಿ ಏಂಟ್ರಿ ಕೊಟ್ಟು ವೀಕ್ಷಕರ ಮನಸಲ್ಲಿ ಭದ್ರ ಬುನಾದಿ ಹಾಕಿದ ನಟಿ ಮೇಘಾ ಶೆಟ್ಟಿ.
ಸದ್ಯಕ್ಕಂತೂ ಮೇಘಾ ಶೆಟ್ಟಿ ಚಂದನವನದಲ್ಲಿ ಸಖತ್ ಬ್ಯುಸಿಯಾಗಿರುವ ನಟಿಯಾಗಿದ್ದಾರೆ. ಇವರ ಕೈಯಲ್ಲಿ ಸುಮಾರು ನಾಲ್ಕು ಸಿನಿಮಾಗಳಿವೆ.
ಮೇಘಾ ಶೆಟ್ಟಿ ಈಗಾಗಲೇ ಗಣೇಶ್ ಜೊತೆ ಟ್ರಿಪಲ್ ರೈಡಿಂಗ್, ಕೃಷ್ಣ ಜೊತೆ ದಿಲ್ ಪಸಂದ್ ಮತ್ತು ಧನ್ವೀರ್ ಜೊತೆ ಕೈವಾ ಸಿನಿಮಾದಲ್ಲಿ ನಟಿಸಿದ್ದಾರೆ.
ಸದ್ಯ ನಟಿ ಕೈಯಲ್ಲಿ ಆಪ್ಟರ್ ಆಪರೇಶನ್ ಲಂಡನ್ ಕೆಫೆ, ಗ್ರಾಮಾಯಣ, ಚೀತಾ ಸಿನಿಮಾದಲ್ಲೂ ಮೇಘಾ ಶೆಟ್ಟಿ ನಟಿಸುತ್ತಿದ್ದಾರೆ.
ಇದಿಷ್ಟೇ ಅಲ್ಲ ಮೇಘಾ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದು, ಕಲರ್ಸ್ ಕನ್ನಡದ ಕೆಂಡಸಂಪಿಗೆ ಹಾಗೂ ಮುದ್ದು ಸೊಸೆ ಧಾರಾವಾಹಿ ನಿರ್ಮಾಪಕಿ ಇವರೇ.
ಮೇಘಾ ಶೆಟ್ಟಿ ಇಂದು ಅಂದ್ರೆ ಆಗಸ್ಟ್ 8ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಮಂಗಳೂರು ಬ್ಯೂಟಿಗೆ ಇದೀಗ 27 ವರ್ಷ ವಯಸ್ಸಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೇಘಾ ತಮ್ಮ ವಿಭಿನ್ನ ಫೋಟೊ ಶೂಟ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಸದ್ಯ ಹೊಸ ಫೋಟೊ ವೈರಲ್ ಆಗುತ್ತಿದೆ.
ಮೇಘಾ ತಿಳಿ ಹಸಿರು ಬಣ್ಣದ ಸ್ಯಾಟಿನ್ ಸೀರೆ ಹಾಗೂ ತೋಳಿಲ್ಲದ ಬ್ಲೌಸ್ ಧರಿಸಿ ವಿವಿಧ ಭಂಗಿಯಲ್ಲಿ ಪೋಸ್ ಕೊಟ್ಟಿದ್ದು, ಆಕೆಯ ಭಂಗಿಯೇ ಪಡ್ಡೆಗಳ ನಿದ್ದೆ ಕೆಡಿಸಿದೆ.
ಅಭಿಮಾನಿಯೊಬ್ಬರು ಮೇಡಂ ನಿಮ್ಮನ್ನು ನೋಡಿದ್ರೆ ನೀಲಾಂಬರಿ ಸಿನಿಮಾ ನೋಡಿದ ನೆನಪಾಯಿತು ಎಂದಿದ್ದಾರೆ.
ನಟಿಯ ಗ್ಲಾಮರಸ್ ಅವತಾರಕ್ಕೆ ಕಾಮೆಂಟ್ ಸೆಕ್ಷನ್ ಪೂರ್ತಿ ಪಡ್ಡೆಗಳೇ ತುಂಬಿಕೊಂಡಿದ್ದಾರೆ. ಇಟ್ ಈಸ್ ಟೂ ಹಾಟ್ ಟಿ ಹ್ಯಾಂಡಲ್ ಎಂದು ಬರೆದುಕೊಂಡಿದ್ದಾರೆ.
ಊರಿನಲ್ಲೇ ಸೀಮಂತ ಮಾಡ್ಕೊಂಡ ಕನ್ನಡ ನಟಿ ನವ್ಯಾ ನಾರಾಯಣ ಗೌಡ ಫೋಟೋಗಳಿವು!
ಶಿರಡಿಯಲ್ಲಿ ಕೃಷಿ, ಅನುಪಮಾ ಗೌಡ... ಫ್ರೆಂಡ್ಸ್ ಅಂದ್ರೆ ಹೀಗಿರಬೇಕು ಅಲ್ವಾ?
Photos: ಭಾವನಾ ರಾಮಣ್ಣಗೆ ಸೀಮಂತ ಸಂತಸ!
ನೆಗೆಟಿವ್ ಕಾಮೆಂಟ್’ಗಳಿಗೆ ಕ್ಯಾರೆ ಎನ್ನದೇ ಕಾಲುಂಗುರ ತೋರಿಸುತ್ತಾ ಪೋಸ್ ಕೊಟ್ಟ ವೈಷ್ಣವಿ ಗೌಡ